2023-03-15 15:35:25 by ambuda-bot
This page has not been fully proofread.
ಸಂಗ್ರಹರಾಮಾಯಣ
"ದಶರಥಕುಮಾರ ! ಹಿಂದೆ ಹರಿಯೂ ಹರನೂ ಜಗತ್ವಸಿದ್ಧವಾದ ತಮ್ಮ
ಬಿಲ್ಲಿನಿಂದ ರಕ್ಕಸರನ್ನು ಸಂಹರಿಸಿದ್ದರು. ಹರಿಹರರ ಶಕ್ತಿಯನ್ನು ತಿಳಿಯುವ
ಬಯಕೆಯಿಂದ ದೇವತೆಗಳೊಮ್ಮೆ ಅವರು ಅನ್ನೋನ್ಯ ಯುದ್ಧ ಮಾಡಿಕೊಳ್ಳು
ವಂತೆ ಬೇಡಿಕೊಂಡರು. ಭಕ್ತವತ್ಸಲರಾದ ಅವರು ಯುದ್ಧ ಸನ್ನದ್ಧರಾದರು.
ಅಹಂಕಾರತತ್ವದ ಅಭಿಮಾನಿಯಾದ ರುದ್ರನನ್ನು ಶ್ರೀಹರಿ ಹುಂಕಾರಮಾತ್ರ
ದಿಂದಲೇ ಸ್ಥಗಿತಗೊಳಿಸಿದನು-ಗರುಡನು ಹಾವನ್ನು ಸ್ತಬ್ಧಗೊಳಿಸುವಂತೆ !
ಜಯಶಾಲಿಯಾದ ಹರಿಯನ್ನು ಬ್ರಹ್ಮಾದಿಗಳು ಸ್ತುತಿಸಿದರು. ಜಗತ್ತನ್ನೆಲ್ಲ
ನಿಯಮಿಸಬಲ್ಲ ಹರಿಗೆ ಇದೊಂದು ದೊಡ್ಡದಲ್ಲ ಎಂದು ಎಲ್ಲರೂ-ರುದ್ರನೂ
ಕೊಂಡಾಡಿದರು.
44
ಆ ರುದ್ರಧನುಸ್ಸನ್ನು ನೀನೀಗ ಮುರಿದಿದ್ದೀಯಾ, ಅಷ್ಟರಿಂದ ನೀನು
ಅಪ್ರತಿಮನೆಂದು ಜನ ಕೊಂಡಾಡಿದರು ! ಅದರಿಂದೇನು ಬಂತು ? ಇಗೋ-
ಆ ವಿಷ್ಣುವಿನ ಧನುಸ್ಸು ಇಲ್ಲಿ ನನ್ನ ಬಳಿಯಲ್ಲಿದೆ. ನಿನ್ನಲ್ಲಿ ಕಸುವಿರುವುದು
ನಿಜವಾದರೆ ಇದನ್ನೆತ್ತಿ ಹೆದೆಯೇರಿಸು. ಹೂಡು ಅದರಲ್ಲಿ ಬಾಣವನ್ನು, ಆಗ
ನೀನೂ ನನ್ನಂತೆಯೇ ವೀರ ಎಂಬುದನ್ನು ಒಪ್ಪಬಲ್ಲೆ. ಇಲ್ಲದಿದ್ದರೆ ಹೇಗೆ ? "
ಸಿಟ್ಟುಗೊಂಡ ಭಾರ್ಗವನನ್ನು ಕಂಡು ಭೀತನಾದ ದಶರಥ ಅವನನ್ನು
ವಂದಿಸಿ ಕಣ್ಣೀರುಗರೆದು ಬೇಡಿಕೊಂಡನು.
ರಾಗ ದ್ವೇಷರಹಿತನಾದ ಪರಮಪುರುಷನಲ್ಲವೆ ನೀನು ? ಭೂಭಾರ
ವನ್ನು ಪರಿಹರಿಸುವುದಕ್ಕಾಗಿ ರೇಣುಕೆಯಲ್ಲಿ ಮೈದೋರಿದವನಲ್ಲವೆ ನೀನು ?
ಭಕ್ತವತ್ಸಲನಾದ ಓ ಭಾರ್ಗವನೆ, ಈ ವೃದ್ಧನಾದ ಭಕ್ತನ ಮೇಲೆ ದಯೆದೋರು.
ನನಗೆ ಪುತ್ರ ಭಿಕ್ಷೆಯನ್ನು ನೀಡು. "
ಅದಕ್ಕೆ ಪರಶುರಾಮನ ಉತ್ತರ ಮಾರ್ಮಿಕವಾಗಿತ್ತು:
"ಮೂರು ಮಕ್ಕಳನ್ನು ನಿನಗೆ ಬಿಟ್ಟಿದ್ದೇನೆ. ರಾಮನು ನನ್ನ ಎದು
ರಾಳಿಯೇ ಸರಿ, "
ಹೀಗೆಂದು ರಾಮನೆಡೆಗೆ ತಿರುಗಿ ನುಡಿದನು:
"ರಾಮಚಂದ್ರ, ತೆಗೆದುಕೋ ಈ ಬಿಲ್ಲನ್ನು ಹರಿಯಲ್ಲದೆ ಬೇರೊಬ್ಬನು
ಎತ್ತಲಾರದ ಬಿಲ್ಲನ್ನು,
""
ರಾಮನು ವಿನಯದಿಂದ 'ಹಾಗೆಯೇ ಆಗಲಿ' ಎಂದು ನುಡಿದು, ತೇಜ
ಪುಂಜದಂತಿರುವ ಆ ಬಿಲ್ಲನ್ನು ತೆಗೆದುಕೊಂಡು ಹೆದೆಯೇರಿಸಿ ಲೀಲಾಜಾಲವಾಗಿ