2023-03-18 08:18:49 by jayusudindra
This page has been fully proofread once and needs a second look.
ಲಕ್ಷ್ಮಿಯು ನಾರಾಯಣನನ್ನೆಂಬಂತೆ, ಜಯಂತಿಯು ವೃಷಭದೇವ ನನ್ನೆಂಬಂತೆ ಸೀತೆಯು ರಾಮನನ್ನನು- ಸರಿಸಿದಳು. ಗುಣಭರಿತರಾದ ಈ ದಂಪತಿಗಳು ಜಗತ್ತಿ- ನ ತಾಯಿ-ತಂದೆಯರಲ್ಲವೆ ? ಇವರಿಗೆ ಮುಪ್ಪೆಂಬು- ದಿಲ್ಲವಂತೆ ! ದೋಷದ ಲೇಶವೂ ಇಲ್ಲವಂತೆ ! ದೇವತೆಗಳು ಪ್ರಾರ್ಥಿಸಿದರೆಂದು ಇವರು ಭೂಮಿ- ಯಲ್ಲಿ ಅವತರಿಸಿದರಂತೆ ! ಹೀಗೆಂದು ಮದುವೆಯ ಮನೆಯಲ್ಲಿ ಜನರಾಡಿಕೊಳ್ಳುತ್ತಿದ್ದರು.
ಅನಂತರ ಜನಕನ ಒಪ್ಪಿಗೆ ಪಡೆದು ವಿಪ್ರರೊಡನೆ, ಸೇನೆಗಳೊಡನೆ, ಮಕ್ಕಳು ಸೊಸೆಯಂದಿರೊಡನೆ ರಾಜನು ಅಯೋಧ್ಯೆಗೆ ತೆರಳಿದನು. ಸಂತಸದಲ್ಲಿ
ಸಾಗಿತ್ತು ಪ್ರಯಾಣ. ನಡುವೆ ಏಕೋ ಭಯದ ಕಾರ್ಮುಗಿಲು ಸುಳಿದಂತಾಯಿತು. ಯಾವುದೋ ಪ್ರಾಣಿ ಸಂತಸದ ಸೇನೆಗೆ ಅಪಶಕುನದ ಬೇನೆಯನ್ನು
ಕೀಲಿಸಿತ್ತು. ಏನೀದುಶ್ಶಕುನದ ಅರ್ಥ? ರಾಜನ ಬಗೆ ತಳಮಳಗೊಂಡಿತು. ಬರಬಹುದಾದ ವಿಪತ್ತಿನ ಕಲ್ಪನೆಯಿಂದ ಮೂಕಯಾತನೆಯನ್ನನುಭವಿಸಿತು.
ಇಂಥ ಸಂದರ್ಭದಲ್ಲಿ ವಸಿಷ್ಠರೇ ಊರುಗೋಲು, ಅವರ ಸಮಾಧಾನದ ಮಾತೇ ಆಸರೆ, ನಿರೀಕ್ಷಿಸಿ- ದಂತೆಯೇ ಆ ಆಸರೆ ದಶರಥನಿಗೆ ದೊರೆಯಿತು.
"ಆಪತ್ತು ಸನ್ನಿಹಿತವಾಗಿದೆ ರಾಜನ್, ಆದರೆ ಅದು ಬೇಗನೆ ಶಾಂತವಾಗಲಿದೆ, ಕಳವಳಬೇಡ ತಾಳ್ಮೆಯಿಂ- ದಿರು. "
ವಸಿಷ್ಠರ ಮಾತು ಮುಗಿವುದರೊಳಗೆ ಪ್ರಳಯಾಗ್ನಿ- ಯಂತೆ ಪಜ್ಜಳಿಸುವ ಒಂದು ರೂಪ, ಸೇನೆಯ ಮುಂದೆ ನಿಂತಿತ್ತು. ಆ ರೂಪವನ್ನು ಕಂಡು ಮಹರ್ಷಿಗಳೂ ಚಿಂತೆಗೀಡಾದರು.
ಇಪ್ಪತ್ತೊಂದು ಬಾರಿ ಭೂಮಿಯಲ್ಲಿ ಕ್ಷತ್ರಿಯರ ಸಂತಾನವನ್ನು ಸದೆಬಡಿದ ಈ ಪರಶುರಾಮ ಮತ್ತೆ ಪುನಃ ಏಕೆ ಉರಿದೆದ್ದಿದ್ದಾನೆ ? ಹೆಗಲಲ್ಲಿರಿಸಿದ ಈ ಕೊಡಲಿ-ಕೈಯಲ್ಲಿ ತೊಳಗುವ ಈ ಧನುರ್ಬಾಣ ಏನನ್ನು ಬಯಸುತ್ತಿದೆ ? ಮತ್ತೊಮ್ಮೆ ಈ ರಾಮಾಗ್ನಿ- ಯು ಕ್ಷತ್ರಿಯ ವಂಶವನ್ನು ಒಣಹುಲ್ಲಿನಂತೆ ಸುಡ-
ಬಯಸುವುದಿಲ್ಲ ತಾನೆ ? ತ್ರೈಲೋಕ್ಯವನ್ನೇ ನಾಶಿಸ- ಬಯಸುವುದಿಲ್ಲ ತಾನೆ ?
ವಸಿಷ್ಠಾದಿಗಳು ಮುಂದೆ ಬಂದು 'ಪ್ರಸನ್ನನಾಗು ಜಾಮದಗ್ನ್ಯ' ಎಂದು ಬೇಡಿಕೊಂಡರು. ಕೊಡಲಿರಾಮ ನೇರವಾಗಿ ದಾಶರಥಿ ರಾಮನೆಡೆಗೆ ಬಂದು ನುಡಿದನು.