This page has been fully proofread once and needs a second look.

ಮಿಂಚಿನಬ
 
ಲಕ್ಷ್ಮಿಯು ನಾರಾಯಣನನ್ನೆಂಬಂತೆ,
 
ಜಯಂತಿಯು ವೃಷಭದೇವ
ನನ್ನೆಂಬಂತೆ ಸೀತೆಯು ರಾಮನನ್ನನು- ಸರಿಸಿದಳು. ಗುಣಭರಿತರಾದ ಈ ದಂಪತಿ
ಗಳು ಜಗತ್ತಿ- ನ ತಾಯಿ-ತಂದೆಯರಲ್ಲವೆ ? ಇವರಿಗೆ ಮುಪ್ಪೆಂಬು- ದಿಲ್ಲವಂತೆ !
ದೋಷದ ಲೇಶವೂ ಇಲ್ಲವಂತೆ ! ದೇವತೆಗಳು ಪ್ರಾರ್ಥಿಸಿದರೆಂದು ಇವರು
ಭೂಮಿ- ಯಲ್ಲಿ ಅವತರಿಸಿದರಂತೆ ! ಹೀಗೆಂದು ಮದುವೆಯ ಮನೆಯಲ್ಲಿ ಜನ-
ರಾಡಿಕೊಳ್ಳುತ್ತಿದ್ದರು.
 

 
ಅನಂತರ ಜನಕನ ಒಪ್ಪಿಗೆ ಪಡೆದು ವಿಪ್ರರೊಡನೆ, ಸೇನೆಗಳೊಡನೆ,
ಮಕ್ಕಳು ಸೊಸೆಯಂದಿರೊಡನೆ ರಾಜನು ಅಯೋಧ್ಯೆಗೆ ತೆರಳಿದನು. ಸಂತಸದಲ್ಲಿ

ಸಾಗಿತ್ತು ಪ್ರಯಾಣ. ನಡುವೆ ಏಕೋ ಭಯದ ಕಾರ್ಮುಗಿಲು ಸುಳಿದಂತಾ
 
ಯಿತು.
 
ಯಾವುದೋ ಪ್ರಾಣಿ ಸಂತಸದ ಸೇನೆಗೆ ಅಪಶಕುನದ ಬೇನೆಯನ್ನು
ಕೀಲಿಸಿತ್ತು. ಏನೀದುಶ್ಶಕುನದ ಅರ್ಥ ?
 
ಯಾವುದೋ ಪ್ರಾಣಿ ಸಂತಸದ ಸೇನೆಗೆ ಅಪಶಕುನದ ಬೇನೆಯನ್ನು
ರಾಜನ ಬಗೆ ತಳಮಳಗೊಂಡಿತು.
ಬರಬಹುದಾದ ವಿಪತ್ತಿನ ಕಲ್ಪನೆಯಿಂದ ಮೂಕಯಾತನೆಯನ್ನನುಭವಿಸಿತು.

ಇಂಥ ಸಂದರ್ಭದಲ್ಲಿ ವಸಿಷ್ಠರೇ ಊರುಗೋಲು, ಅವರ ಸಮಾಧಾನದ ಮಾತೇ
ಆಸರೆ, ನಿರೀಕ್ಷಿಸಿ- ದಂತೆಯೇ ಆ ಆಸರೆ ದಶರಥನಿಗೆ ದೊರೆಯಿತು.
 

 

 
"ಆಪತ್ತು ಸನ್ನಿಹಿತವಾಗಿದೆ ರಾಜನ್, ಆದರೆ ಅದು ಬೇಗನೆ ಶಾಂತವಾಗ
ಲಿದೆ, ಕಳವಳಬೇಡ ತಾಳ್ಮೆಯಿಂ- ದಿರು. "
 

 
ವಸಿಷ್ಠರ ಮಾತು ಮುಗಿವುದರೊಳಗೆ ಪ್ರಳಯಾಗಿಗ್ನಿ- ಯಂತೆ ಪಜ್ಜಳಿಸುವ
ಒಂದು ರೂಪ, ಸೇನೆಯ ಮುಂದೆ ನಿಂತಿತ್ತು. ಆ ರೂಪವನ್ನು ಕಂಡು ಮಹರ್ಷಿ
ಗಳೂ ಚಿಂತೆಗೀಡಾದರು.
 

 
ಇಪ್ಪತ್ತೊಂದು ಬಾರಿ ಭೂಮಿಯಲ್ಲಿ ಕ್ಷತ್ರಿಯರ ಸಂತಾನವನ್ನು ಸದೆ
ಬಡಿದ ಈ ಪರಶುರಾಮ ಮತ್ತೆ ಪುನಃ ಏಕೆ ಉರಿದೆದ್ದಿದ್ದಾನೆ ? ಹೆಗಲಲ್ಲಿರಿಸಿದ
ಕೊಡಲಿ-ಕೈಯಲ್ಲಿ ತೊಳಗುವ ಈ ಧನುರ್ಬಾಣ ಏನನ್ನು ಬಯಸುತ್ತಿದೆ ?
ಮತ್ತೊಮ್ಮೆ ಈ ರಾಮಾಗ್ನಿ- ಯು ಕ್ಷತ್ರಿಯ ವಂಶವನ್ನು ಒಣಹುಲ್ಲಿನಂತೆ ಸುಡ-

ಬಯಸುವುದಿಲ್ಲ ತಾನೆ ? ತ್ರೈಲೋಕ್ಯವನ್ನೇ ನಾಶಿಸ- ಬಯಸುವುದಿಲ್ಲ ತಾನೆ ?
 
'

 
ವಸಿಷ್ಠಾದಿಗಳು ಮುಂದೆ ಬಂದು 'ಪ್ರಸನ್ನನಾಗು ಜಾಮದಗ್ನ್ಯ' ಎಂದು
ಬೇಡಿಕೊಂಡರು. ಕೊಡಲಿರಾಮ ನೇರವಾಗಿ ದಾಶರಥಿ ರಾಮನೆಡೆಗೆ ಬಂದು
ನುಡಿದನು.