This page has been fully proofread once and needs a second look.

ಸಂಗ್ರಹರಾಮಾಯಣ
 
ಇಷ್ಟರಲ್ಲಿ ತೃಪ್ತರಾಗದೆ ವಸಿಷ್ಠರೂ ವಿಶ್ವಾಮಿತ್ರ- ಮುನಿಯೂ ಒಟ್ಟಾಗಿ
ಜನಕನನ್ನು ಕೇಳಿಕೊಂಡರು.
 

 
"ರಾಜನ್, ನಿನ್ನ ತಮ್ಮ ಕುಶಧ್ವಜನಿಗೆ ಮಾಂಡವಿ-ಶ್ರುತಕೀರ್ತಿ ಎಂದು
ಇಬ್ಬರು ಕನ್ನೆಯರಿದ್ದಾರೆ. ಅವರನ್ನು ಭರತ ಶತ್ರುಘ್ನರಿಗೆ ಕೊಡಬೇಕೆಂದು

ನಮ್ಮ ಅಪೇಕ್ಷೆ. "
 

 
ಅದನ್ನು ಕೇಳಿದ ಜನಕನೂ ಕುಶಧ್ವಜನೂ 'ನಾವು ಏನನ್ನು ಬಯಸು
ತಿದ್ದೆವೋ ಅದನ್ನೇ ನೀವು ಆಡಿದಿರಿ' ಎಂದುಕೊಂಡರು.
 

 
ಮರುದಿನವೇ ನಾಂದೀಶ್ರಾದ್ದ ನೆರವೇರಿತು. ಮಕ್ಕಳ ಒಳಿತಿಗಾಗಿ
ದಶರಥನು ವಿಪ್ರರಿಗೆ ನಾಲ್ಕು ಸಾವಿರ ಗೋವುಗಳನ್ನು ದಾನಮಾಡಿದನು. ಮದು-
ವೆಯ ಕಾಲಕ್ಕೆ ಸರಿಯಾಗಿ ಭರತನ ಸೋದರಮಾವನಾದ ಯುಧಾಜಿತ್ತು ಕೂಡ
ಅಲ್ಲಿಗೆ ಬಂದು ಸೇರಿಕೊಂಡನು.
 

 
ಇತ್ತ ಸೀರಧ್ವಜನೂ ಕುಶಧ್ವಜನೂ ತಮ್ಮ ಮಕ್ಕಳಿಗೆ ಮಾಡಬೇಕಾದ
ಕಟ್ಟು ಕಟ್ಟಳೆಗಳನ್ನು ಶತಾನಂದರ ನಿರ್ದೇಶನದಲ್ಲಿ ಪೂರಯಿಸಿದರು. ನಾಲ್ವರಿಗೂ

ಉತ್ತರಾಫು ಫಲ್ಗುನೀ ಸುಮುಹೂರ್ತದಲ್ಲಿ ವಿವಾಹ ಜರುಗಿತು. ವಿಶ್ವಾಮಿತ್ರನ
ಅನುಮತಿಯಂತೆ ವಸಿಷ್ಠರೇ ವರನ ಕಡೆಯ ಪುರೋಹಿತರಾದರು. ಜಗನ್ಮಾತೆ
ಸೀತೆಯ ಕಮಲಾಂಕಿತವಾದ ಚಿಗುರುಗೈ ಜಗನ್ನಾಯಕ ರಾಮನ ಚಕ್ರಾಂಕಿತ
ವಾದ ಕೈ ಒಂದನ್ನೊಂದು ಮಿದುವಾಗಿ ಅದುಮಿಕೊಂಡವು. ಸಪ್ತಪದಿಯ
ಕಾರ್ಯವೂ ನೆರವೇರಿತು. ಜಗತ್ತಿನ ಜನನಿಯೂ ಜನಕನೂ ನೂತನ ವಧೂ-
ವರರಾಗಿ ಪುನರ್ಮಿಳಿತರಾದರು.
 

 
ಈ ಸೊಬಗನ್ನು ಕಾಣಲು ನೆರೆದ ಸುರರ ವಿಮಾನವೇ ಬಾನಿನಲ್ಲೆಲ್ಲ
ತುಂಬಿಕೊಂಡಿತ್ತು. ಸಗ್ಗಿಗರು ವಾದ್ಯ- ಗಳನ್ನು ಮೊಳಗಿಸಿದರು. ಗಂಧರ್ವರು
ಗೀತಗಳನ್ನು ಹಾಡಿದರು. ನಂದನದ ಹೂ ಬಳ್ಳಿಗಳು ಕುಸುಮದ ಸರಿಯನ್ನು
ಚೆಲ್ಲಿದವು. ಅಪ್ಸರೆಯರು ಕುಣಿದರು. ಭೂವ್ಯೋಮಗಳಲ್ಲಿ ಕಣ್ಸೆಳೆಯುವ
 
ಬೆಡಗಿಯರ ಸಡಗರದ ಕೋಲಾಹಲ.
 

 
ಜನಕನು ನಾಲ್ವರೂ ಮದುಮಕ್ಕಳಿಗೆ ಉಡುಗೊರೆ- ಯೆಂದು ಮಣಿರತ್ನ
ಗಳನ್ನೂ ಪಟ್ಟಿಟೆ ಪೀತಾಂಬರ- ಗಳನ್ನೂ-ಹಸುಗಳನ್ನೂ- ಸೇನೆಗಳನ್ನೂ- ಬಂಗಾರದ

ರಾಶಿಯನ್ನೂ-ದಾಸದಾಸಿಯರನ್ನೂ ಕೊಟ್ಟನು.