2023-03-15 15:35:25 by ambuda-bot
This page has not been fully proofread.
ಸಂಗ್ರಹರಾಮಾಯಣ
ಮಿಥಿಲೆಯ ಅಂತಃಪುರದಲ್ಲಿ ಬೆಳೆದ ರಮೆಯ ಮೂರ್ತಿ, ಲೋಕಸುಂದರ
ನಾದ ರಾಮನೆಡೆಗೆ ಹಂಸಗತಿಯಿಂದ ನಡೆದು ಬಂತು.
ನೋಡಿದಷ್ಟು ಹೊಸತೆನಿಸುವ ರೂಪ ಸೀತೆಯದು. ಕಾಂತಿಯೇ ಮುಖ
ದಲ್ಲಿ ಮಂದಹಾಸದ ಕಳೆಯನ್ನು ತಂದಿತ್ತು. ಕಣ್ಣಿನಿಂದಲೆ ಮನದ ಇಂಗಿತವನ್ನು
ನುಡಿವ ಸೊಬಗಿ ಸೀತೆ. ಆಕೆಯ ಎಲ್ಲ ಗುಣಗಳನ್ನು ಪಾಡಲು ನಾಲ್ಕು
ಮೋರೆಯ ವಿಧಿಗೆ ಸಾಧ್ಯವಾಗಲಿಲ್ಲವಂತೆ ! ನಮ್ಮಂಥವರ ಪಾಡೇನು?
ನಾಚಿಕೆಯ ಪೂರವನ್ನು ಭಕ್ತಿ ಸಡಲಿಸಿತು. ಕಂಣು ತಂತಾನೇ ರಾಮ
ನೆಡೆಗೆ ಹರಿಯಿತು. ಸೀತೆ ಮೆಲ್ಲನೆ ಬಂಗಾರದ ತಾವರೆಯ ಮಾಲೆಯನ್ನು
ರಾಮನ ಕತ್ತಿನಲ್ಲಿ ಹಾಕಿದಳು. ಪ್ರತಿಯಾಗಿ ರಾಮನೂ ಕುಡಿಗಣೋಟದ
ಮಾಲೆಯನ್ನು ಸೀತೆಯ ಮೇಲೆ ಚೆಲ್ಲಿದನು.
- ಲೋಕದ ತಾಯಿ ತಂದೆಗಳಾದ ಈ ನವ ದಂಪತಿಗಳನ್ನು ಕಂಡು, ದೇವ
ಲೋಕಕ್ಕೆ ದೇವಲೋಕವೇ ಆನಂದಸಾಗರದಲ್ಲಿ ತೇಲಾಡಿತು. ಗಂಧರ್ವರು
ಹಾಡಿದರು. ಅಚ್ಚರಸಿಯರು ನಾಟ್ಯವಾಡಿದರು. ದೇವತೆಗಳು ಸಲ್ಲಿಸಿದ
ಪೂಜೆಯಿಂದ ರಮೆಯೂ ರಮೆಯರಸನೂ ಸಂತಸಗೊಂಡರು.
ಕದನದ ನಾಟಕವಾಡಿದರು
ವಿಶ್ವಾಮಿತ್ರನ ಒಪ್ಪಿಗೆ ಪಡೆದು ಸೀರಧ್ವಜನು ದಶರಥನೆಡೆಗೆ ದೂತರನ್ನಟ್ಟಿ
ದನು. ಮೂರು ದಿನಗಳ ದಾರಿ ನಡೆದು ದೂತರು ಅಯೋಧ್ಯೆಯನ್ನು ತಲುಪಿ
ದರು. ಮಂತ್ರಿಗಳು ನೆರೆದ ಸಭೆಯಲ್ಲಿ ಅವರು ದಶರಥನೆದುರು ಈ ರೀತಿ
ಬಿನ್ನವಿಸಿಕೊಂಡರು:
"ಮಹಾರಾಜನೆ, ಭೂಮಂಡಲದ ಎಲ್ಲ ವೀರರೂ ಮಾಡಲಾರದ ಕಾರ್ಯ
ವನ್ನು, ನಿಮ್ಮ ಕುಮಾರ ರಾಮಚಂದ್ರ ಮಾಡಿದ್ದಾನೆ. ಅವನು ಹರನ
ಧನುಸ್ಸನ್ನು ಮುರಿದಿದ್ದಾನೆ ! ಸೀತೆ ಅವನಲ್ಲಿ ಅನುರಕ್ತಳಾಗಿದ್ದಾಳೆ. ವಿವಾಹಕ್ಕೆ
ಎಲ್ಲವೂ ಅಣಿಯಾಗಿದೆ. ನಿಮ್ಮ ಗೆಳೆಯರಾದ ವಿಶ್ವಾಮಿತ್ರ ಮಹರ್ಷಿಗಳು ನಿಮ್ಮ
ಬರವನ್ನೆ ಕಾಯುತ್ತಿದ್ದಾರೆ. ಜನಕ ಭೂಪತಿಯು ನಿಮಗೆಲ್ಲರಿಗೂ ಮದುವೆಯ
ಕರೆಯನ್ನು ಕಳುಹಿದ್ದಾನೆ."
ದೂತರ ವಾರ್ತೆ ರಾಜನಿಗೆ ಮುದವನ್ನೊಡ್ಡಿತು. ಮಂತ್ರಿಗಳೊಡನೆ
ಹೊರಡುವ ಸಿದ್ಧತೆಯೂ ತ್ವರೆಯಿಂದ ನಡೆಯಿತು. ಮರುದಿನ ಬೆಳಿಗ್ಗೆಯೇ