This page has not been fully proofread.

ಮಿಂಚಿನಬಳ್ಳಿ
 
ಮುಂದೆ ಬಂದು ನಿಂತ ರಾಮನನ್ನು ಕಂಡ ಪುರರಮಣಿಯರು ವಿಸ್ಮಿತರಾಗಿ
ತಮ್ಮೊಳಗೇ ಮಾತನಾಡಿಕೊಳ್ಳುತ್ತಿದ್ದರು.
 
((
 
" ಇಂಥ ಮಗನನ್ನು ಪಡೆದ ಕೌಸಲ್ಯಯೂ ದಶರಥನೂ ಧನ್ಯರು.
ಅಕೃತ್ರಿಮ ಸೌಂದರ್ಯದ ನೆಲೆವೀಡಾದ ಈ ರಾಮಚಂದ್ರನು ಕಣ್ಣೆಸೆಯುವ
ಸೋಜಿಗವಾಗಿದ್ದಾನೆ.
 
ನೇಗಿಲದ ದಾರೆಯಲ್ಲಿ ಹುಟ್ಟಿದ ಸೀತೆಯೂ ಸಾಮಾನ್ಯಳೇನಲ್ಲ. ನೆಲದ
ಮಗಳಾದ ಸೀತೆಯೇ ರಾಮನಿಗೆ ಅನುರೂಪಳಾದ ಮಡದಿ, ರಾಮನೇ ಸೀತೆಗೆ
ಅನುರೂಪನಾದ ಪತಿ."
 
ರಮೆಯೇ ಹರಿಗೆ ತಕ್ಕವಳಾದ ಪತ್ನಿ; ಹರಿಯೇ ರಮೆಗೆ ತಕ್ಕವನಾದ
ಪತಿ, ಅಲ್ಲವೆ ?
 
ಇವನು ಸೀತೆಗೆ ತಕ್ಕ ಇನಿಯ ಎನ್ನುವುದನ್ನು ಬಿಲ್ಲು ಹಿಡಿದೇ ಪರೀಕ್ಷಿಸ
ಬೇಕೇಕೆ ? ಸೂರ್ಯನ ಬೆಳಕನ್ನು ಗುರುತಿಸುವುದಕ್ಕೆ ಪಂಜು ಹಿಡಿದು ಹುಡುಕ
ಬೇಕೆ ?
 
ನಮ್ಮ ಪುಣ್ಯಫಲವನ್ನಾದರೂ ಧಾರೆಯೆರೆದು ನಾವು ದೇವರಲ್ಲಿ ಬೇಡಿ
ಕೊಳ್ಳುವೆವು, ಭಗವಾನ್, ಇವನೇ ಸೀತೆಯನ್ನು ವರಿಸುವಂತಾಗಲಿ. ಇನ್ನೆಲ್ಲಿ
 
ಸಿಗಬೇಕು ಇಂಥ ಜೋಡಿ !"
 
ಊರ ಮುತ್ತೈದೆಯರು ಪಿಸುಗುಟ್ಟಿದ ಮಾತು ರಾಮನ ಕಿವಿಗೆ ಬೀಳ
ದಿರಲಿಲ್ಲ. ಇಂಪಾದ ಮಾತನ್ನಾಲಿಸಿದ ರಾಮಚಂದ್ರನು ಮುಗುಳುನಗೆ ನಗುತ್ತ
ಮೆಲ್ಲಗೆ ಎಡಗೈಯಿಂದ ಬಿಲ್ಲನ್ನೆತ್ತಿದನು.
 
ರಾಜರ ಗುಂಪು ಅಚ್ಚರಿಯಿಂದ ಕಣ್ಣು ಬಿಡುತ್ತಿತ್ತು. ಸೀರಧ್ವಜನ
ವಿಶ್ವಾಮಿತ್ರನೂ ಮನದಲ್ಲಿ 'ಶುಭವಾಗಲಿ' ಎಂದು ಕೋರುತ್ತಿದ್ದರು. ಲಕ್ಷ್ಮಣನು
ನಗುಮೋರೆಯಿಂದ ಅಣ್ಣನ ಬೀರವನ್ನು ನಿರೀಕ್ಷಿಸುತ್ತಿದ್ದನು.
 
ರಾಮನು ಹೆದೆಯೇರಿಸಿ ಬಿಲ್ಲಿಗೆ ಇಂಬನ್ನು ಹೂಡಿದನು. ಭಾರಿ ಪ್ರಮಾ
ಣದ ಆ ಧನುಸ್ಸು ಈ ಕುಮಾರನ ಸೆಳೆತಕ್ಕೆ ತಾಳಲಾರದೆ ಐರಾವತದ
ಸೊಂಡಿಲಿನಲ್ಲಿ ಸಿಕ್ಕ ಕಬ್ಬಿನ ಕೋಲಿನಂತೆ ಮಧ್ಯದಲ್ಲಿ ಮುರಿದು ಬಿತ್ತು !
 
ಸಿಡಿದ ಧನುಸ್ಸಿನಿಂದ ಹೊಮ್ಮಿದ ನಾದ 'ರಾಮನು ಸೀತೆಯನ್ನು ಗೆಲಿದ
ಎಂಬ ಸುದ್ದಿಯನ್ನು ಒಯ್ಯುವ ಹರಿಕಾರನಂತೆ ದಿಗಂತಕ್ಕೆ ಪಸರಿಸಿತು.