This page has been fully proofread once and needs a second look.

ಸಂಗ್ರಹರಾಮಾಯಣ
 
ಕಣ್ಣಿಗೆ ಹಬ್ಬವಾಗಿ ಮುದ್ದಾಗಿ ಬೆಳೆದಳು. ಆಗ ನನಗೆ ಯೋಚನೆಗಿಟ್ಟು
ಕೊಂಡಿತು. ಈ ಕನ್ನೆ ಅಯೋಗ್ಯರ ಕೈಪಾಲಾಗಬಾರದು. ವೇದವಿದ್ಯೆ ಪತಿತನ
ವಶ- ವಾಗಬಾರದು. ಅದಕ್ಕೊಂದು ಉಪಾಯ ಹೂಡಿದೆ.
 
೨೭
 

 
ನನ್ನ ಬಳಿ ರುದ್ರನನ್ನು ತಪಸ್ಸು ಮಾಡಿ ಗಳಿಸಿದ ಬಿಲ್ಲೊಂದಿದೆ. ಅವನ
ಅನುಗ್ರಹದಿಂದ ನಾನೊಬ್ಬ- ನದನ್ನು ಎತ್ತಬಲ್ಲೆ. ಆ ಧನುಸ್ಸನ್ನು ಹರನಲ್ಲದೆ

ಇನ್ನೊಬ್ಬನು ನಲುಗಿಸಲಾರದ ಧನುಸ್ಸನ್ನು ಯಾರು ಹೆದೆಯೇರಿಸುವರೋ
ಅಂಥವನಿಗೆ ನನ್ನ ಮಗಳನ್ನು ಕೊಡುವೆನೆಂದು ನನ್ನ ಪ್ರತಿಜ್ಞೆ.
 

 
ಕಮಲದ ಸರಸ್ಸಿಗೆ ಹಂಸಗಳು ಮುತ್ತುವಂತೆ ಅನೇಕ ರಾಜರು ಈ
ಸ್ವಯಂವರಕ್ಕೆ ಹಾತೊರೆದು ಬಂದರು. ತಂದ ಉತ್ಸಾಹಕ್ಕಿಂತ ಹೆಚ್ಚಿನ ನಿರು
ತ್ಸಾಹವನ್ನು ಹೊತ್ತು ತೆರಳಿದರು ! ಬಂದವರಲ್ಲಿ ಕೆಲವರು ಧನುಸ್ಸನ್ನು
ನೋಡಿಯೇ ಬೆದರಿಕೊಂಡರು ! ಕೆಲವರು ಬಳಿಸಾರಿ ಹಿಮ್ಮೆಟ್ಟಿದರು. ಕೆಲವರು
ಎತ್ತ- ಲಾರದೆ ಕೈಬಿಟ್ಟರು. ಕೆಲವರು ನಲುಗಿಸಿ ಕೈಕೊಡವಿ- ಕೊಂಡರು. ಹೀಗೆ
ಎಲ್ಲ ವೀರರೂ ಇದರೆದುರು ತಮ್ಮ ಬೀರವನ್ನು ಕಳೆದುಕೊಂಡರು. ಇಂಥ ವೀರ-
ರೆಲ್ಲ ಕೈಸುಟ್ಟುಕೊಂಡುದನ್ನು ಕಂಡೇ ಕಂಗಾಲಾದ ಕೆಲ ರಾಜರು ಸ್ವಯಂವರದ
ಗೋಜಿಗೇ ಬರಲಿಲ್ಲ ! ಮಿಥಿಲೆಯ ಬಳಿಗೆಗೇ ಸುಳಿಯಲಿಲ್ಲ !
 

 
ಉದ್ಧತರಾದ ರಾವಣನಂಥವರೂ ಧಾರ್ಷ್ಟ್ಯದಿಂದ ಧನುಸ್ಸನ್ನು ಎತ್ತ
ಹೋಗಿ ಬೆವತು ಕುಪ್ಪಳಿಸಿ ಬಿದ್ದಿದ್ದಾರೆ! ಉಳಿದವರ ಪಾಡೇನು ? ಬ್ರಹ್ಮ
ವರದ ಬಲ ನನಗಿರುವುದರಿಂದ ಯಾರೂ ಸೀತೆಯನ್ನು ಬಲಾತ್ಕರಿಸಿ ಕೊಂಡೊ
ಯ್ಯುವಂತಿಲ್ಲ. ಆದ್ದರಿಂದ ರಾಮಚಂದ್ರನು ಆ ಧನುಸ್ಸನ್ನು ಹೂಡಲಿ, ಸೀತೆ

ಅನುರೂಪನಾದ ಪತಿಯನ್ನು ಪಡೆಯಲಿ, ನನ್ನ ಬೆಳದಿಂಗಳು ಈ ಹುಣ್ಣಿಮೆಯ
ಚಂದ್ರನನ್ನು ಸೇಲಿ."
 

 
ವಿಶ್ವಾಮಿತ್ರನು ಆ ಬಿಲ್ಲನ್ನು ತರಿಸುವಂತೆ ಹೇಳಿದನು. ಎಂಟು ಚಕ್ರ
ಗಳನ್ನುಳ್ಳ ಕಬ್ಬಿಣದ ಪೆಟ್ಟಿಗೆಯಲ್ಲಿ ಗುಪ್ತವಾದ ಆ ಧನುಸ್ಸನ್ನು ರುದ್ರನ ವರ
ಬಲದಿಂದ- ಲೇ ಸಮರ್ಥರಾದ ಐದು ಸಾವಿರ ಮಂದಿ ವೀರರು ಎಳೆದು ತಂದು
ರಾಜನ ಮುಂದಿರಿಸಿದರು.
 

 
ಅದನ್ನು ಕಂಡವನೆ 'ಈ ಬಿಲ್ಲನ್ನು ಆರೋಪಿಸು ರಾಮಚಂದ್ರ' ಎಂದನು
ವಿಶ್ವಾಮಿತ್ರ ಮುನಿ. ಮುನಿಯ ಮಾತಿಗೆ ಒಪ್ಪಿಗೆಯ ಮುಗುಳನ್ನು ಬೀರಿ