This page has been fully proofread once and needs a second look.

ಮಿಂಚಿನಬಳ್ಳಿ
 
ಕದನ ಹೂಡಿದನು. ಆ ಅಸ್ತ್ರಗಳನ್ನೆಲ್ಲ ವಸಿಷ್ಠ ಮಹರ್ಷಿಯ ವೈಷ್ಣವ ದಂಡವು
ವಿಫಲಗೊಳಿಸಿತು.
 

 
ಚಂಡಾಲನಾದ ತ್ರಿಶಂಕುವನ್ನು ಈತ ಸ್ವರ್ಗಕ್ಕೇರಿ- ಸಿದ್ದು ಕೂಡ ವಿಷ್ಣುವಿನ
ಅನುಗ್ರಹದಿಂದಲೇ.
 

 
ಹರಿಶ್ಚಂದ್ರನ ಯಾಗದಲ್ಲಿ ಪಶುವಾಗಿ ಜೀವತೆರಲಿದ್ದ ಶುನಃಶೇಪನನ್ನು
ಬದುಕಿಸಿ, ಮಗನೆಂದು ಸ್ವೀಕರಿಸಿದ ಮಹಾನುಭಾವನೀತ !
 

 
ಒಮ್ಮೆ ನಾರಾಯಣನ ತಪಸ್ಸಿನಲ್ಲಿ ಮಗ್ನನಾಗಿದ್ದಾಗ ಮೇನಕೆಯನ್ನು
ಕಾಮಿಸಿ, ಮತ್ತೊಮ್ಮೆ ರಂಭೆಯ ಮೇಲೆ ಸಿಟ್ಟುಗೊಂಡು ತನ್ನ ತಪಸ್ಸು ನಿಷ್ಪಲ
-
ವಾದಾಗ, ಆಹಾರವನ್ನೂ ತೊರೆದು ನಿಶ್ಚಲವಾಗಿ ಶ್ವಾಸನಿರೋಧ ಮಾಡಿಕೊಂಡು,
ಸಾವಿರಾರು ವರ್ಷ ತಪಸ್ಸು ಮಾಡಿದ ಸಾಹಸಿಯಿಯೀತ. ರಾಜರ್ಷಿಯಾದ ವಿಶ್ವಾ-
ಮಿತ್ರ ತನ್ನ ಹಠಯೋಗದಿಂದ ಕೊನೆಗೂ ಬ್ರಹ್ಮರ್ಷಿಯಾದ. ಮಹರ್ಷಿಯ
ಮೇಲೆ ಭಗವಂತನ ಅನುಗ್ರಹ ಅಂಥದು ! "
 

 
ಶತಾನಂದರು ಹೇಳಿದ ಕಥೆಯನ್ನು ಕಿವಿಗೊಟ್ಟಾಲಿ- ಸುತ್ತಿದ್ದ ರಾಮಚಂದ್ರ
ಮುಗುಳುನಗುತ್ತ ವಿಶ್ವಾ- ಮಿತ್ರನೆಡೆಗೆ ನೋಡಿದನು. ಸರ್ವಜ್ಞನಾದ ಶ್ರೀಹರಿ
ಕೂಡ ಲೋಕದ ಅನುವರ್ತನೆಗಾಗಿ ಮಕ್ಕಳಂತೆ ಕಥೆ ಕೇಳುವ ನಾಟಕವಾಡುವು
ದುಂಟು ! ವಿಜ್ಞಾನ ಭಾಸ್ಕರನಲ್ಲಿ ಅಜ್ಞಾನದ ಕುಶಂಕೆಯನ್ನು ಮಾಡಲು

ಸಾಧ್ಯವೆ ? ತೇಜಃಪುಂಜನಾದ ಸೂರ್ಯನಲ್ಲಿ ಕತ್ತಲಿನ ಸುಳಿವಾದರೂ ಹೇಗೆ
 
ಬಂದೀತು ?
 

 
ಹರನ ಬಿಲ್ಲು ಮುರಿಯಿತು
 

 
ಮರುದಿನ ಮುಂಜಾವದಲ್ಲಿ ಜನಕ ಮಹಾರಾಜನು ಈ ಮೂವರನ್ನೂ
ತನ್ನ ಅಂತಃಪುರಕ್ಕೆ ಕರೆದು ವಿನಯದಿಂದ ಬಿನ್ನವಿಸಿಕೊಂಡನು.
 

 
"ಮಹರ್ಷಿ ವಿಶ್ವಾಮಿತ್ರನೆ, ಯಾಗಕ್ಕಾಗಿ ಭೂಮಿ- ಯನ್ನು ನೇಗಿಲದಿಂದ
ಶೋಧಿಸುತ್ತಿದ್ದಾಗ ಅಲ್ಲಿ ದೊರಕಿದವಳು ನನ್ನ ಸೀತೆ. ಸೀರ (ನೇಗಿಲು)ಜಾತೆ
-
ಯಾದುದರಿಂದ ಅವಳನ್ನು ಸೀತೆಯೆಂದೇ ಕರೆದೆ. ಸೀತೆಯನ್ನು ಪಡೆದ ನಾನು
ನಿಧಿ ದೊರೆತ ಬಡವ- ನಂತೆ ಸಂತಸಗೊಂಡೆ. ಅವಳು ಚಂದ್ರಕಲೆಯಂತೆ ದಿನ
ದಿನಕ್ಕೆ ಬೆಳೆದಳು. ಜವ್ವನದ ಸಿರಿಯಿಂದ ಮೈತುಂಬಿನಿಂತಳು. ಕಂಡವರ