This page has not been fully proofread.

ಮಿಂಚಿನಬಳ್ಳಿ
 
ಕದನ ಹೂಡಿದನು. ಆ ಅಸ್ತ್ರಗಳನ್ನೆಲ್ಲ ವಸಿಷ್ಠ ಮಹರ್ಷಿಯ ವೈಷ್ಣವ ದಂಡವು
ವಿಫಲಗೊಳಿಸಿತು.
 
ಚಂಡಾಲನಾದ ತ್ರಿಶಂಕುವನ್ನು ಈತ ಸ್ವರ್ಗಕ್ಕೇರಿಸಿದ್ದು ಕೂಡ ವಿಷ್ಣುವಿನ
ಅನುಗ್ರಹದಿಂದಲೇ.
 
ಹರಿಶ್ಚಂದ್ರನ ಯಾಗದಲ್ಲಿ ಪಶುವಾಗಿ ಜೀವತೆರಲಿದ್ದ ಶುನಃಶೇಪನನ್ನು
ಬದುಕಿಸಿ, ಮಗನೆಂದು ಸ್ವೀಕರಿಸಿದ ಮಹಾನುಭಾವನೀತ !
 
ಒಮ್ಮೆ ನಾರಾಯಣನ ತಪಸ್ಸಿನಲ್ಲಿ ಮಗ್ನನಾಗಿದ್ದಾಗ ಮೇನಕೆಯನ್ನು
ಕಾಮಿಸಿ, ಮತ್ತೊಮ್ಮೆ ರಂಭೆಯಮೇಲೆ ಸಿಟ್ಟುಗೊಂಡು ತನ್ನ ತಪಸ್ಸು ನಿಷ್ಪಲ
ವಾದಾಗ, ಆಹಾರವನ್ನೂ ತೊರೆದು ನಿಶ್ಚಲವಾಗಿ ಶ್ವಾಸನಿರೋಧ ಮಾಡಿಕೊಂಡು,
ಸಾವಿರಾರು ವರ್ಷ ತಪಸ್ಸು ಮಾಡಿದ ಸಾಹಸಿಯಿತ. ರಾಜರ್ಷಿಯಾದ ವಿಶ್ವಾ-
ಮಿತ್ರ ತನ್ನ ಹಠಯೋಗದಿಂದ ಕೊನೆಗೂ ಬ್ರಹ್ಮರ್ಷಿಯಾದ. ಮಹರ್ಷಿಯ
ಮೇಲೆ ಭಗವಂತನ ಅನುಗ್ರಹ ಅಂಥದು ! "
 
ಶತಾನಂದರು ಹೇಳಿದ ಕಥೆಯನ್ನು ಕಿವಿಗೊಟ್ಟಾಲಿಸುತ್ತಿದ್ದ ರಾಮಚಂದ್ರ
ಮುಗುಳುನಗುತ್ತ ವಿಶ್ವಾಮಿತ್ರನೆಡೆಗೆ ನೋಡಿದನು. ಸರ್ವಜ್ಞನಾದ ಶ್ರೀಹರಿ
ಕೂಡ ಲೋಕದ ಅನುವರ್ತನೆಗಾಗಿ ಮಕ್ಕಳಂತೆ ಕಥೆ ಕೇಳುವ ನಾಟಕವಾಡುವು
ದುಂಟು ! ವಿಜ್ಞಾನ ಭಾಸ್ಕರನಲ್ಲಿ ಅಜ್ಞಾನದ ಕುಶಂಕೆಯನ್ನು ಮಾಡಲು
ಸಾಧ್ಯವೆ ? ತೇಜಃಪುಂಜನಾದ ಸೂರ್ಯನಲ್ಲಿ ಕತ್ತಲಿನ ಸುಳಿವಾದರೂ ಹೇಗೆ
 
ಬಂದೀತು ?
 
ಹರನ ಬಿಲ್ಲು ಮುರಿಯಿತು
 
ಮರುದಿನ ಮುಂಜಾವದಲ್ಲಿ ಜನಕ ಮಹಾರಾಜನು ಈ ಮೂವರನ್ನೂ
ತನ್ನ ಅಂತಃಪುರಕ್ಕೆ ಕರೆದು ವಿನಯದಿಂದ ಬಿನ್ನವಿಸಿಕೊಂಡನು.
 
"ಮಹರ್ಷಿ ವಿಶ್ವಾಮಿತ್ರನೆ, ಯಾಗಕ್ಕಾಗಿ ಭೂಮಿಯನ್ನು ನೇಗಿಲದಿಂದ
ಶೋಧಿಸುತ್ತಿದ್ದಾಗ ಅಲ್ಲಿ ದೊರಕಿದವಳು ನನ್ನ ಸೀತೆ. ಸೀರ ನೇಗಿಲು)ಜಾತೆ
ಯಾದುದರಿಂದ ಅವಳನ್ನು ಸೀತೆಯೆಂದೇ ಕರೆದೆ. ಸೀತೆಯನ್ನು ಪಡೆದ ನಾನು
ನಿಧಿ ದೊರೆತ ಬಡವನಂತೆ ಸಂತಸಗೊಂಡೆ. ಅವಳು ಚಂದ್ರಕಲೆಯಂತೆ ದಿನ
ದಿನಕ್ಕೆ ಬೆಳೆದಳು. ಜವ್ವನದ ಸಿರಿಯಿಂದ ಮೈತುಂಬಿನಿಂತಳು. ಕಂಡವರ