This page has been fully proofread once and needs a second look.

ಸಂಗ್ರಹರಾಮಾಯಣ
 
ಅನಂತರ ಈಶಾನ್ಯದೆಡೆಗೆ ಸರಿದಾಗ- ಅಲ್ಲಿ ಜನಕನ ಯಜ್ಞಭೂಮಿ ಕಾಣಿಸಿ
ಕೊಂಡಿತು. ಜನರು ನೆರೆದಿದ್ದ ತಾಣದಿಂದ ದೂರವಾಗಿ ಒಂದು ಏಕಾಂತ

ಸ್ಥಳದಲ್ಲಿ ಮುನಿಯೂ ರಾಮಲಕ್ಷ್ಮಣರೂ ನಿಂತು- ಕೊಂಡರು. ವಿಶ್ವಾಮಿತ್ರ
 
ನನ್ನೂ ಜತೆಗೆ ಇಬ್ಬರು ಹೊಸ ಹುಡುಗರನ್ನೂ ಕಂಡ ವಿದೇಹನಾಥ ಸೀರಧ್ವಜನು
ಪುರೋಹಿತರಾದ ಶತಾನಂದರೊಡನೆ ಬಂದು ಈ ಅತಿಥಿಗಳನ್ನು ಸ್ವಾಗತಿಸಿದನು.
ಅತಿಥಿ ಸತ್ಕಾರವೆಲ್ಲ ಮುಗಿದ ಮೇಲೆ ಜನಕನು ರಾಮನೆಡೆಗೆ ಕೈ ತೋರಿಸಿ "ಕಣ್
ಮನಗಳನ್ನು ಸೆಳೆವ ಈ ಸುಂದರ ಯಾರು ? ನೆರಳಿನಂತೆ ಅವನನ್ನನುಸರಿಸು
ತ್ತಿರುವ ಈ ತರುಣನಾದರೂ ಯಾರು ? " ಎಂದು ಮುನಿಯನ್ನು ಕೇಳಿದನು.
ರಾಜನ ಮಾತನ್ನು ಕೇಳಿದವನೇ ಮುಗುಳುನಗೆ ಬೀರುತ್ತಾ ಮುನಿ ಉತ್ತರಿಸಿದನು.
 
#
 

 
"ರಾಜನ್, ಇವನು ದಶರಥನ ಮಗನಾದ ರಾಮ,. ದೇವಕಾರ್ಯವನ್ನು
ಸಾಧಿಸಲು ಮೂಡಿ ಬಂದ ಪುರುಷೋತ್ತಮ. ಜತೆಯಲ್ಲಿರುವವನು ಅವನ ತಮ್ಮ

ಲಕ್ಷಣ. ಇವರನ್ನು ನಾನು ಅಯೋಧ್ಯೆಯಿಂದ ಸಿದ್ಧಾಶ್ರಮಕ್ಕೆ ಕರೆದುಕೊಂಡು
ಬಂದಿದ್ದೆ. ಈ ರಾಮ- ಭದ್ರ ಯಜ್ಞಕಂಟಕರಾದ ದಾನವರನ್ನು ಲೀಲೆ- ಯಿಂದಲೇ
ಸಂಹರಿಸಿದನು. ಕಣ್ನೋಟದಿಂದಲೇ ಮುನಿಶಾಪಗ್ರಸ್ತಳಾದ ಅಹಲೈಯನ್ನು
ಬದುಕಿಸಿದನು. ಬಿಲ್ಲೋಜರಲ್ಲೇ ಮೊದಲಿಗನಾದ ಈತ ನಿನ್ನ ಧನುಸ್ಸನ್ನು
ಕಾಣಬಯಸುತ್ತಾನೆ. ನಿನ್ನ ಬಿಲ್ಲು, ಬಿಲ್ಲೋಜರನ್ನು ಪರೀಕ್ಷಿಸುವ ಒರೆಗಲ್ಲಲ್ಲವೆ ?

ಸಮುದ್ರರಾಜನಂತೆ ನೀನು ಕೂಡ ಪುರಾಣಪುರುಷ- ನನ್ನೇ ಅಳಿಯನನ್ನಾಗಿ
ಪಡೆವ ಭಾಗ್ಯಶಾಲಿಯಾಗು."
 

 
ಈ ಮಾತನ್ನು ಕೇಳಿದ ಶತಾನಂದನು ಆನಂದದಿಂದ ನುಡಿದನು:

"ರಾಮಚಂದ್ರನೆ, ನಿಮ್ಮಿಬ್ಬರೂ ಸೋದರರಿಗೆ ಸ್ವಾಗತ, ಪುರುಷೋತ್ತಮ
ನಾದ ನೀನೂ ಯಾರನ್ನು ಶಿಷ್ಯನಂತೆ ಅನುಸರಿಸುತ್ತಿರುವೆಯೋ ಆ ವಿಶ್ವಾ-
ಮಿತ್ರನೇ
ಧನ್ಯನು. ಈತನೂ ಒಮ್ಮೆ ನಿಮ್ಮಂತೆಯೇ ರಾಜರ್ಷಿಯಾಗಿದ್ದ. ರಾಮಚಂದ್ರ,
ನಿಮ್ಮ ಪುರೋಹಿತರಾದ ವಸಿಷ್ಠ ಭಗವತ್ಪಾದರ ಗೋವನ್ನ- ಪಹರಿಸಲೆಳಸಿದ
ಅರಸನೀತ,
 
."
"
ಆ ನಂದಿನಿ ಮಾತ್ರ ತನ್ನ ಅಂಗಗಳಿಂದ ವಿವಿಧ ಸೇನೆಗಳನ್ನು ಸೃಜಿಸಿ
ರಾಜನ ಸೇನೆಯನ್ನು ಸಂಹರಿ- ಸಿತು; ಬಲವನ್ನು ಉಡುಗಿಸಿತು, ಆಗ ಈ ಪೂರ್ವ
ರಾಜರ್ಷಿಯು ರುದ್ರನನ್ನು ತಪಸ್ಸು ಮಾಡಿ ಪಡೆದ ಅಸ್ತ್ರಗಳಿಂದ ವಸಿಷ್ಠನೊಡನೆ