This page has not been fully proofread.

ಸಂಗ್ರಹರಾಮಾಯಣ
 
ಅನಂತರ ಈಶಾನ್ಯದೆಡೆಗೆ ಸರಿದಾಗ ಅಲ್ಲಿ ಜನಕನ ಯಜ್ಞಭೂಮಿ ಕಾಣಿಸಿ
ಕೊಂಡಿತು. ಜನರು ನೆರೆದಿದ್ದ ತಾಣದಿಂದ ದೂರವಾಗಿ ಒಂದು ಏಕಾಂತ
ಸ್ಥಳದಲ್ಲಿ ಮುನಿಯೂ ರಾಮಲಕ್ಷ್ಮಣರೂ ನಿಂತುಕೊಂಡರು. ವಿಶ್ವಾಮಿತ್ರ
 
ನನ್ನೂ ಜತೆಗೆ ಇಬ್ಬರು ಹೊಸ ಹುಡುಗರನ್ನೂ ಕಂಡ ವಿದೇಹನಾಥ ಸೀರಧ್ವಜನು
ಪುರೋಹಿತರಾದ ಶತಾನಂದರೊಡನೆ ಬಂದು ಈ ಅತಿಥಿಗಳನ್ನು ಸ್ವಾಗತಿಸಿದನು.
ಅತಿಥಿ ಸತ್ಕಾರವೆಲ್ಲ ಮುಗಿದ ಮೇಲೆ ಜನಕನು ರಾಮನೆಡೆಗೆ ಕೈ ತೋರಿಸಿ "ಕಣ್
ಮನಗಳನ್ನು ಸೆಳೆವ ಈ ಸುಂದರ ಯಾರು ? ನೆರಳಿನಂತೆ ಅವನನ್ನನುಸರಿಸು
ತಿರುವ ಈ ತರುಣನಾದರೂ ಯಾರು ? " ಎಂದು ಮುನಿಯನ್ನು ಕೇಳಿದನು.
ರಾಜನ ಮಾತನ್ನು ಕೇಳಿದವನೇ ಮುಗುಳುನಗೆ ಬೀರುತ್ತಾ ಮುನಿ ಉತ್ತರಿಸಿದನು.
 
#
 
"ರಾಜನ್, ಇವನು ದಶರಥನ ಮಗನಾದ ರಾಮ, ದೇವಕಾರ್ಯವನ್ನು
ಸಾಧಿಸಲು ಮೂಡಿ ಬಂದ ಪುರುಷೋತ್ತಮ. ಜತೆಯಲ್ಲಿರುವವನು ಅವನ ತಮ್ಮ
ಲಕ್ಷಣ. ಇವರನ್ನು ನಾನು ಅಯೋಧ್ಯೆಯಿಂದ ಸಿದ್ಧಾಶ್ರಮಕ್ಕೆ ಕರೆದುಕೊಂಡು
ಬಂದಿದ್ದೆ. ಈ ರಾಮಭದ್ರ ಯಜ್ಞಕಂಟಕರಾದ ದಾನವರನ್ನು ಲೀಲೆಯಿಂದಲೇ
ಸಂಹರಿಸಿದನು. ಕಣ್ನೋಟದಿಂದಲೇ ಮುನಿಶಾಪಗ್ರಸ್ತಳಾದ ಅಹಲೈಯನ್ನು
ಬದುಕಿಸಿದನು. ಬಿಲ್ಲೋಜರಲ್ಲೇ ಮೊದಲಿಗನಾದ ಈತ ನಿನ್ನ ಧನುಸ್ಸನ್ನು
ಕಾಣಬಯಸುತ್ತಾನೆ. ನಿನ್ನ ಬಿಲ್ಲು, ಬಿಲ್ಲೋಜರನ್ನು ಪರೀಕ್ಷಿಸುವ ಒರೆಗಲ್ಲಲ್ಲವೆ ?
ಸಮುದ್ರರಾಜನಂತೆ ನೀನು ಕೂಡ ಪುರಾಣಪುರುಷನನ್ನೇ ಅಳಿಯನನ್ನಾಗಿ
ಪಡೆವ ಭಾಗ್ಯಶಾಲಿಯಾಗು."
 
ಈ ಮಾತನ್ನು ಕೇಳಿದ ಶತಾನಂದನು ಆನಂದದಿಂದ ನುಡಿದನು:
"ರಾಮಚಂದ್ರನೆ, ನಿಮ್ಮಿಬ್ಬರೂ ಸೋದರರಿಗೆ ಸ್ವಾಗತ, ಪುರುಷೋತ್ತಮ
ನಾದ ನೀನೂ ಯಾರನ್ನು ಶಿಷ್ಯನಂತೆ ಅನುಸರಿಸುತ್ತಿರುವೆಯೋ ಆ ವಿಶ್ವಾಮಿತ್ರನೇ
ಧನ್ಯನು. ಈತನೂ ಒಮ್ಮೆ ನಿಮ್ಮಂತೆಯೇ ರಾಜರ್ಷಿಯಾಗಿದ್ದ. ರಾಮಚಂದ್ರ,
ನಿಮ್ಮ ಪುರೋಹಿತರಾದ ವಸಿಷ್ಠ ಭಗವತ್ಪಾದರ ಗೋವನ್ನಪಹರಿಸಲೆಳಸಿದ
ಅರಸನೀತ,
 
" ಆ ನಂದಿನಿ ಮಾತ್ರ ತನ್ನ ಅಂಗಗಳಿಂದ ವಿವಿಧ ಸೇನೆಗಳನ್ನು ಸೃಜಿಸಿ
ರಾಜನ ಸೇನೆಯನ್ನು ಸಂಹರಿಸಿತು; ಬಲವನ್ನು ಉಡುಗಿಸಿತು, ಆಗ ಈ ಪೂರ್ವ
ರಾಜರ್ಷಿಯು ರುದ್ರನನ್ನು ತಪಸ್ಸು ಮಾಡಿ ಪಡೆದ ಅಸ್ತ್ರಗಳಿಂದ ವಸಿಷ್ಠನೊಡನೆ