This page has been fully proofread once and needs a second look.

ಮಿಂಚಿನಬಳ್ಳಿ
 
ಉದಿಸಿದರು. ಅಮೃತದ ಕೊಡವನ್ನು ಹೊತ್ತು ಧನ್ವಂತರಿಯೂ ಮೂಡಿ ಬಂದ.
ಅಮೃತ ಕಲಶವನ್ನಪಹರಿಸಲು ದಾನವರೆಲ್ಲ ಮುತ್ತಿದರು. ಆಗ ಶ್ರೀಹರಿಯೇ
ಮೋಹಿನಿ ರೂಪದಿಂದ ಅವರನ್ನು ಮೋಹಿಸಿ ದೇವತೆಗಳಿಗೆ ಅಮೃತವನ್ನುಣಿ
ಸಿದನು.
 
೨೪
 
ಸಿದನು.
 
ಆ ಕ್ಷೀರ ಸಮುದ್ರದಲ್ಲಿ ಹುಟ್ಟಿದ ಅಪ್ಸರೆಯರಲ್ಲಿ 'ಅಲಂಬುಸಾ' ಎಂಬ
ವಳು ಅತ್ಯಂತ ಸುಂದರಿಯಂತೆ. ನಿಮ್ಮ ಸೂರ್ಯವಂಶದ ಪೂರ್ವಪುರುಷನಾದ

ಇಕ್ಷಾಷ್ವಾಕುವಿನಿಂದ ಆ 'ಅಲಂಬುಸೆ'ಯಲ್ಲಿ ಹುಟ್ಟಿದವನೇ ವಿಶಾಲ."
 

 
ಈ ಅಪೂರ್ವ-ಅತಿಥಿಗಳನ್ನು ಅಲ್ಲಿಯ ಒಡೆಯ- ನಾದ ಸುಮತಿಯು
ಸಂತೋಷದಿಂದ ಸ್ವಾಗತಿಸಿ ಸತ್ಕರಿಸಿದನು. ವೈಶಾಲಿಯಲ್ಲಿಯೇ ಸುಮತಿಯ
ಭವ್ಯ ಆತಿಥ್ಯದಲ್ಲಿ ರಾತ್ರಿಯನ್ನು ಕಳೆದು ಬೆಳಿಗ್ಗೆ ಪ್ರಯಾಣವನ್ನು ಮುಂದುವರಿಸಿ
ಮಿಥಿಲೆಯ ಬಳಿಯಲ್ಲಿ- ಯಲ್ಲೆ ಇರುವ ಉಪವನವೊಂದನ್ನು ಸೇರಿದರು. ಆ ಉಪವನದ
ಪಕ್ಕದಲ್ಲಿ ಒಂದು ಆಶ್ರಮವಿತ್ತು. ಅದನ್ನು ವಿಶ್ವಾಮಿತ್ರನು ರಾಮಚಂದ್ರನಿಗೆ

ತೋರಿಸುತ್ತಾ ಹೀಗೆಂದು ನುಡಿದನು.
 
*

 
"
ರಾಮಭದ್ರ, ಯೋಗ್ಯತೆಯನ್ನು ಮೀರಿ ಬೆಳೆದ ಗೌತಮನ ಪುಣ್ಯ
ರಾಶಿಯನ್ನು ಕುಗ್ಗಿಸುವುದಕ್ಕಾಗಿ ಇಂದ್ರನು ಒಮ್ಮೆ ಅಹಲೈಲ್ಯೆಯನ್ನು ಕೆಡಿಸಿದನು.

ಆಶ್ರಮಕ್ಕೆ ಬಂದ ಖುಷಿ ಇದನ್ನು ತಿಳಿದು ಸಿಟ್ಟು- ಗೊಂಡನು. ಸಿಟ್ಟಿನ ಭರದಲ್ಲಿ
"ನಿನ್ನ ಜಾರ ನಿರ್ವೀಯ್ರರ್ಯನಾಗಲಿ, ಮತ್ತು ನೀನು ರಾಮದರ್ಶನ- ವಾಗುವ ತನಕ
ಕಲ್ಲಾಗಿ ಬಾಳು' ಎಂದು ಶಪಿಸಿದನು. ವಿಕೃ ದೇವತೆಗಳೆಲ್ಲ ತಮ್ಮ ಕುರಿಯ
ಅಂಡವನ್ನು ಇಂದ್ರನಿಗೆ ಜೋಡಿಸಿ ಅವನ ನಪುಂಸಕತ್ವವನ್ನು ಹೋಗಲಾಡಿಸಿ
ದರು. ಅಂದಿನಿಂದ ಅವನು 'ಮೇಷವೃಷಣ'ನೆನಿಸಿದ್ದಾನೆ".
 
*

 
"
ಒಬ್ಬನ ಶಾಪ ಪರಿಹಾರವಾದಂತಾಯಿತು. ಇನ್ನೊಬ್ಬಳ ಶಾಪ ನಿನ್ನಿಂದ
ಪರಿಹಾರವಾಗಬೇಕಾ- ಗಿದೆ. ಇಂದ್ರನ ಚಿಂತೆಯನ್ನು ಪರಿಹರಿಸು. ಅಭಾಗಿನಿ

ಅಹಲೈಲ್ಯೆಯ ಮೇಲೆ ದಯೆದೋರು,. "
 

 
ಋಷಿಯ ಮಾತನ್ನಾಲಿಸಿದ ರಾಮಭದ್ರ ತನ್ನ ಕರುಣೆ ತುಂಬಿದ ನೋಟ
ದಿಂದ ಅಹಲೈಲ್ಯೆಯನ್ನು ಬದುಕಿಸಿದನು. ಕುಡಿಕಣ್ ನೋಟದಿಂದಲೇ ಜಗತ್ತನ್ನು

ಸೃಜಿಸುವ ಹರಿಗೆ ಇದು ಏತರಲೆಕ್ಕ ? ಕಲ್ಲಾದ ಮಡದಿಯನ್ನು ಮರಳಿ ಬದು
ಕಿಸಿಕೊಟ್ಟ ರಾಮಚಂದ್ರನನ್ನೂ ಅದಕ್ಕೆ ನೆರವಾದ ವಿಶ್ವಾಮಿತ್ರ- ನನ್ನೂ ಗೌತ
ಮನು ಸತ್ಕರಿಸಿ ಕಳುಹಿಸಿಕೊಟ್ಟನು.