This page has not been fully proofread.

ಮಿಂಚಿನಬಳ್ಳಿ
 
ಉದಿಸಿದರು. ಅಮೃತದ ಕೊಡವನ್ನು ಹೊತ್ತು ಧನ್ವಂತರಿಯೂ ಮೂಡಿ ಬಂದ.
ಅಮೃತ ಕಲಶವನ್ನಪಹರಿಸಲು ದಾನವರೆಲ್ಲ ಮುತ್ತಿದರು. ಆಗ ಶ್ರೀಹರಿಯೇ
ಮೋಹಿನಿ ರೂಪದಿಂದ ಅವರನ್ನು ಮೋಹಿಸಿ ದೇವತೆಗಳಿಗೆ ಅಮೃತವನ್ನುಣಿ
ಸಿದನು.
 
೨೪
 
ಆ ಕ್ಷೀರ ಸಮುದ್ರದಲ್ಲಿ ಹುಟ್ಟಿದ ಅಪ್ಸರೆಯರಲ್ಲಿ ಅಲಂಬುಸಾ' ಎಂಬ
ವಳು ಅತ್ಯಂತ ಸುಂದರಿಯಂತೆ. ನಿಮ್ಮ ಸೂರ್ಯವಂಶದ ಪೂರ್ವಪುರುಷನಾದ
ಇಕ್ಷಾಕುವಿನಿಂದ ಆ ಅಲಂಬುಸೆ'ಯಲ್ಲಿ ಹುಟ್ಟಿದವನೇ ವಿಶಾಲ."
 
ಈ ಅಪೂರ್ವ-ಅತಿಥಿಗಳನ್ನು ಅಲ್ಲಿಯ ಒಡೆಯನಾದ ಸುಮತಿಯು
ಸಂತೋಷದಿಂದ ಸ್ವಾಗತಿಸಿ ಸತ್ಕರಿಸಿದನು. ವೈಶಾಲಿಯಲ್ಲಿಯೇ ಸುಮತಿಯ
ಭವ್ಯ ಆತಿಥ್ಯದಲ್ಲಿ ರಾತ್ರಿಯನ್ನು ಕಳೆದು ಬೆಳಿಗ್ಗೆ ಪ್ರಯಾಣವನ್ನು ಮುಂದುವರಿಸಿ
ಮಿಥಿಲೆಯ ಬಳಿಯಲ್ಲಿ ಇರುವ ಉಪವನವೊಂದನ್ನು ಸೇರಿದರು. ಆ ಉಪವನದ
ಪಕ್ಕದಲ್ಲಿ ಒಂದು ಆಶ್ರಮವಿತ್ತು. ಅದನ್ನು ವಿಶ್ವಾಮಿತ್ರನು ರಾಮಚಂದ್ರನಿಗೆ
ತೋರಿಸುತ್ತಾ ಹೀಗೆಂದು ನುಡಿದನು.
 
* ರಾಮಭದ್ರ, ಯೋಗ್ಯತೆಯನ್ನು ಮೀರಿ ಬೆಳೆದ ಗೌತಮನ ಪುಣ್ಯ
ರಾಶಿಯನ್ನು ಕುಗ್ಗಿಸುವುದಕ್ಕಾಗಿ ಇಂದ್ರನು ಒಮ್ಮೆ ಅಹಲೈಯನ್ನು ಕೆಡಿಸಿದನು.
ಆಶ್ರಮಕ್ಕೆ ಬಂದ ಖುಷಿ ಇದನ್ನು ತಿಳಿದು ಸಿಟ್ಟುಗೊಂಡನು. ಸಿಟ್ಟಿನ ಭರದಲ್ಲಿ
"ನಿನ್ನ ಜಾರ ನಿರ್ವೀಯ್ರನಾಗಲಿ, ಮತ್ತು ನೀನು ರಾಮದರ್ಶನವಾಗುವ ತನಕ
ಕಲ್ಲಾಗಿ ಬಾಳು' ಎಂದು ಶಪಿಸಿದನು. ವಿಕೃ ದೇವತೆಗಳೆಲ್ಲ ತಮ್ಮ ಕುರಿಯ
ಅಂಡವನ್ನು ಇಂದ್ರನಿಗೆ ಜೋಡಿಸಿ ಅವನ ನಪುಂಸಕತ್ವವನ್ನು ಹೋಗಲಾಡಿಸಿ
ದರು. ಅಂದಿನಿಂದ ಅವನು ಮೇಷವೃಷಣನೆನಿಸಿದ್ದಾನೆ".
 
* ಒಬ್ಬನ ಶಾಪ ಪರಿಹಾರವಾದಂತಾಯಿತು. ಇನ್ನೊಬ್ಬಳ ಶಾಪ ನಿನ್ನಿಂದ
ಪರಿಹಾರವಾಗಬೇಕಾಗಿದೆ. ಇಂದ್ರನ ಚಿಂತೆಯನ್ನು ಪರಿಹರಿಸು. ಅಭಾಗಿನಿ
ಅಹಲೈಯ ಮೇಲೆ ದಯೆದೋರು, "
 
ಋಷಿಯ ಮಾತನ್ನಾಲಿಸಿದ ರಾಮಭದ್ರ ತನ್ನ ಕರುಣೆತುಂಬಿದ ನೋಟ
ದಿಂದ ಅಹಲೈಯನ್ನು ಬದುಕಿಸಿದನು. ಕುಡಿಕಣ್ ನೋಟದಿಂದಲೇ ಜಗತ್ತನ್ನು
ಸೃಜಿಸುವ ಹರಿಗೆ ಇದು ಏತರಲೆಕ್ಕ ? ಕಲ್ಲಾದ ಮಡದಿಯನ್ನು ಮರಳಿ ಬದು
ಕಿಸಿಕೊಟ್ಟ ರಾಮಚಂದ್ರನನ್ನೂ ಅದಕ್ಕೆ ನೆರವಾದ ವಿಶ್ವಾಮಿತನನ್ನೂ ಗೌತ
ಮನು ಸತ್ಕರಿಸಿ ಕಳುಹಿಕೊಟ್ಟನು.