2023-03-17 10:46:05 by jayusudindra
This page has been fully proofread once and needs a second look.
"ಅನಂತರ ಕುದುರೆಯನ್ನೂ- ಸಾಗರರನ್ನೂ
ಹುಡುಕುವುದಕ್ಕಾಗಿ ಅಸಮಂಜಸನ ಮಗ ಅಂಶು- ಮಂತ ಹೊರಟುನಿಂತ. ಅವನೂ ಅಲೆಯುತ್ತ ಕಪಿಲ ಮಹರ್ಷಿಯಿದ್ದಲ್ಲಿಗೆ ಬಂದನು. ವಿಷಯವನ್ನರಿತು- 'ಕ್ಷಮಿಸು ನಮ್ಮನ್ನು' ಎಂದು ಬೇಡಿಕೊಂಡನು. ಪ್ರೀತನಾದ ಕಪಿಲದೇವ ಯಜ್ಞಾಶ್ವವನ್ನು ಕೊಂಡೊಯ್ಯಲು ಒಪ್ಪಿಗೆಯಿತ್ತನು. ಕುದುರೆ ಬಂತು. ಸಗರನ ಯಜ್ಞವೂ ಪೂರ್ಣವಾಯಿತು. ಅಂಶುಮಂತನ ತಾಳ್ಮೆ ಕೆಲಸವನ್ನು ಸಾಧಿಸಿತು. ಸಮರ್ಥರಾದವರ ತಾಳ್ಮೆಗಿಂತ ಮಿಗಿಲಾದ ಪರಾಕ್ರಮವೆಂಥದು ? "
"ಮೃತರಾದ ಸಗರಪುತ್ರರಿಗೆ ಸದ್ಗತಿಯಾಗಲೆಂದು ಗಂಗೆಯನ್ನು ಬರಿಸುವುದಕ್ಕಾಗಿ ಅಂಶುಮಂತನು ತಪಸ್ಸನ್ನಾಚರಿಸುತ್ತಿದ್ದಂತೆಯೇ ಮೃತನಾದನು. ಅವನ ಮಗ ದಿಲೀಪನೂ ಹೀಗೆಯೇ ಅರ್ಧ ತಪಸ್ಸಿ- ನಲ್ಲಿ ಮೃತನಾದನು. ದಿಲೀಪನ ಮಗ ಭಗೀರಥ. ಅವನು ಬ್ರಹ್ಮನನ್ನೂ ವಿಷ್ಣು ಪಾದೋದಕವಾದ ಗಂಗೆಯನ್ನು ಧರಿಸಲು ಸಮರ್ಥನಾದ ರುದ್ರನನ್ನೂ ಪ್ರಸನ್ನಗೊಳಿಸಿ, ಗಂಗೆಯನ್ನು ಭೂಮಿಗಿಳಿಸಿದನು. ಗಂಗಾಜಲದ ಸಿಂಚನದಿಂದ ತನ್ನ ತಾತ ಮುತ್ತಾತಂದಿರಿಗೆಲ್ಲ ಸದ್ಗತಿಯನ್ನಿತ್ತಿನು. ಹೀಗೆ ಈ ಭಗೀರಥನಿಂದ ಈ ಗಂಗೆ 'ಭಾಗೀರಥಿ' ಯಾದಳು.
ಅದೇ ಭಾಗೀರಥಿ ಇಂದಿಗೂ ಭಕ್ತರ ಪಾಪಗಳನ್ನು ತೊಳೆಯುತ್ತ ನಿತ್ಯ ಪವಿತ್ರಳಾಗಿ ಈ ಭೂಮಿಯಲ್ಲಿ ಹರಿಯುತ್ತಿದ್ದಾಳೆ."
ಕಲ್ಲು ಹೆಣ್ಣಾಯಿತು
ಹೀಗೆ ಕಥಾವಿನೋದದಿಂದ ರಾತ್ರಿಯು ಕ್ಷಣದಂತೆ ಕಳೆದು ಹೋಯಿತು. ಪ್ರಾತಃಕಾಲ ಮುನಿವೃಂದ- ದೊಡನೆ ಗಂಗೆಯನ್ನು ದಾಟಿ ವಿಶಾಲನೆಂಬ ರಾಜನು
ನಿರ್ಮಿಸಿದ ವೈಶಾಲೀ ನಗರವನ್ನು ಪ್ರವೇಶಿಸಿದರು. ಅಲ್ಲಿಗೆ ಬರುತ್ತ ಮುನಿಯು ರಾಮನಿಗೆ ವಿಶಾಲನ ಕಥೆಯನ್ನರುಹಿದನು.
"ಹಿಂದೊಮ್ಮೆ ದೇವದಾನವರೆಲ್ಲ ಬೆರತು ಕಡಲ- ನ್ನು ಕಡೆದರು. ಮಂದರವೇ ಕಡೆಗೋಲು, ವಾಸುಕಿಯೇ ಹಗ್ಗ- ಈ ಮಥನಕ್ಕೆ, ಮುಳುಗುತ್ತಿರುವ
ಮಂದರವನ್ನು ಕೂರ್ಮ ರೂಪಿಯಾದ ಶ್ರೀಹರಿಯೇ ಎತ್ತಿ ಹಿಡಿದನು. ದೇವತೆಗಳೂ ದಾನವರೂ ಬಸವ- ಳಿದು ಕೈ ಬಿಟ್ಟಾಗ ಮುಂದೆ ಬಂದು ಕಡೆದವನೂ ಶ್ರೀಹರಿಯೇ. ಆಗ ಸಮುದ್ರದಿಂದ ಚಂದ್ರನೂ, ಲಕ್ಷ್ಮಿಯೂ, ಅಚ್ಯರಿಸಿಯರೂ