This page has been fully proofread once and needs a second look.

ಸಂಗ್ರಹರಾಮಾಯಣ
 
"ಅನಂತರ ಕುದುರೆಯನ್ನೂ- ಸಾಗರರನ್ನೂ
 

ಹುಡುಕುವುದಕ್ಕಾಗಿ ಅಸ
 
ಮಂಜಸನ ಮಗ ಅಂಶು- ಮಂತ ಹೊರಟುನಿಂತ. ಅವನೂ ಅಲೆಯುತ್ತ ಕಪಿಲ
ಮಹರ್ಷಿಯಿದ್ದಲ್ಲಿಗೆ ಬಂದನು. ವಿಷಯವನ್ನರಿತು- 'ಕ್ಷಮಿಸು ನಮ್ಮನ್ನು
 
' ಎಂದು ಬೇಡಿಕೊಂಡನು. ಪ್ರೀತನಾದ ಕಪಿಲದೇವ ಯಜ್ಞಾಶ್ವವನ್ನು ಕೊಂಡೊ
ಯ್ಯಲು ಒಪ್ಪಿಗೆಯಿತ್ತನು. ಕುದುರೆ ಬಂತು. ಸಗರನ ಯಜ್ಞವೂ ಪೂರ್ಣ
ವಾಯಿತು. ಅಂಶುಮಂತನ ತಾಳ್ಮೆ ಕೆಲಸವನ್ನು ಸಾಧಿಸಿತು. ಸಮರ್ಥರಾದವರ
ತಾಳ್ಮೆಗಿಂತ ಮಿಗಿಲಾದ ಪರಾಕ್ರಮವೆಂಥದು ? "
 
ಎಲ್ಲ
 

 
"ಮೃತರಾದ ಸಗರಪುತ್ರರಿಗೆ ಸದ್ತಿಯಾಗಲೆಂದು ಗಂಗೆಯನ್ನು ಬರಿಸುವು
ದಕ್ಕಾಗಿ ಅಂಶುಮಂತನು ತಪಸ್ಸನ್ನಾಚರಿಸುತ್ತಿದ್ದಂತೆಯೇ ಮೃತನಾದನು. ಅವನ
ಮಗ ದಿಲೀಪನೂ ಹೀಗೆಯೇ ಅರ್ಧ ತಪಸ್ಸಿ- ನಲ್ಲಿ ಮೃತನಾದನು. ದಿಲೀಪನ
ಮಗ ಭಗೀರಥ. ಅವನು ಬ್ರಹ್ಮನನ್ನೂ ವಿಷ್ಣು ಪಾದೋದಕವಾದ ಗಂಗೆಯನ್ನು
ಧರಿಸಲು ಸಮರ್ಥನಾದ ರುದ್ರನನ್ನೂ ಪ್ರಸನ್ನಗೊಳಿಸಿ, ಗಂಗೆಯನ್ನು ಭೂಮಿಗಿಳಿ
ಸಿದನು. ಗಂಗಾಜಲದ ಸಿಂಚನದಿಂದ ತನ್ನ ತಾತ ಮುತ್ತಾತಂದಿರಿಗೆಲ್ಲ ಸದ್ಗತಿ
ಯನ್ನಿತ್ತಿನು. ಹೀಗೆ ಈ ಭಗೀರಥನಿಂದ ಈ ಗಂಗೆ 'ಭಾಗೀರಥಿ' ಯಾದಳು.

ಅದೇ ಭಾಗೀರಥಿ ಇಂದಿಗೂ ಭಕ್ತರ ಪಾಪಗಳನ್ನು ತೊಳೆಯುತ್ತ ನಿತ್ಯ ಪವಿತ್ರ
ಳಾಗಿ ಈ ಭೂಮಿಯಲ್ಲಿ ಹರಿಯುತ್ತಿದ್ದಾಳೆ."
 

 
ಕಲ್ಲು ಹೆಣ್ಣಾಯಿತು
 

 
ಹೀಗೆ ಕಥಾವಿನೋದದಿಂದ ರಾತ್ರಿಯು ಕ್ಷಣದಂತೆ ಕಳೆದು ಹೋಯಿತು.
ಪ್ರಾತಃಕಾಲ ಮುನಿವೃಂದ- ದೊಡನೆ ಗಂಗೆಯನ್ನು ದಾಟಿ ವಿಶಾಲನೆಂಬ ರಾಜನು

ನಿರ್ಮಿಸಿದ ವೈಶಾಲೀ ನಗರವನ್ನು ಪ್ರವೇಶಿಸಿದರು. ಅಲ್ಲಿಗೆ ಬರುತ್ತ ಮುನಿಯು
ರಾಮನಿಗೆ ವಿಶಾಲನ ಕಥೆಯನ್ನರುಹಿದನು.
 

 
"ಹಿಂದೊಮ್ಮೆ ದೇವದಾನವರೆಲ್ಲ ಬೆರತು ಕಡಲ- ನ್ನು ಕಡೆದರು. ಮಂದ
ರವೇ ಕಡೆಗೋಲು, ವಾಸುಕಿಯೇ ಹಗ್ಗ- ಈ ಮಥನಕ್ಕೆ, ಮುಳುಗುತ್ತಿರುವ

ಮಂದರವನ್ನು ಕೂರ್ಮ ರೂಪಿಯಾದ ಶ್ರೀಹರಿಯೇ ಎತ್ತಿ ಹಿಡಿದನು. ದೇವತೆ
ಗಳೂ ದಾನವರೂ ಬಸವ- ಳಿದು ಕೈ ಬಿಟ್ಟಾಗ ಮುಂದೆ ಬಂದು ಕಡೆದವನೂ
ಶ್ರೀಹರಿಯೇ. ಆಗ ಸಮುದ್ರದಿಂದ ಚಂದ್ರನೂ, ಲಕ್ಷ್ಮಿಯೂ, ಅಚ್ರಿಸಿಯರೂ