2023-03-15 15:35:24 by ambuda-bot
This page has not been fully proofread.
ಸಂಗ್ರಹರಾಮಾಯಣ
"ಅನಂತರ ಕುದುರೆಯನ್ನೂ- ಸಾಗರರನ್ನೂ
ಹುಡುಕುವುದಕ್ಕಾಗಿ ಅಸ
ಮಂಜಸನ ಮಗ ಅಂಶುಮಂತ ಹೊರಟುನಿಂತ. ಅವನೂ ಅಲೆಯುತ್ತ ಕಪಿಲ
ಮಹರ್ಷಿಯಿದ್ದಲ್ಲಿಗೆ ಬಂದನು. ವಿಷಯವನ್ನರಿತು- 'ಕ್ಷಮಿಸು ನಮ್ಮನ್ನು
ಎಂದು ಬೇಡಿಕೊಂಡನು. ಪ್ರೀತನಾದ ಕಪಿಲದೇವ ಯಜ್ಞಾಶ್ವವನ್ನು ಕೊಂಡೊ
ಯ್ಯಲು ಒಪ್ಪಿಗೆಯಿತ್ತನು. ಕುದುರೆ ಬಂತು. ಸಗರನ ಯಜ್ಞವೂ ಪೂರ್ಣ
ವಾಯಿತು. ಅಂಶುಮಂತನ ತಾಳ್ಮೆ ಕೆಲಸವನ್ನು ಸಾಧಿಸಿತು. ಸಮರ್ಥರಾದವರ
ತಾಳ್ಮೆಗಿಂತ ಮಿಗಿಲಾದ ಪರಾಕ್ರಮವೆಂಥದು ? "
ಎಲ್ಲ
"ಮೃತರಾದ ಸಗರಪುತ್ರರಿಗೆ ಸದ್ಧತಿಯಾಗಲೆಂದು ಗಂಗೆಯನ್ನು ಬರಿಸುವು
ದಕ್ಕಾಗಿ ಅಂಶುಮಂತನು ತಪಸ್ಸನ್ನಾಚರಿಸುತ್ತಿದ್ದಂತೆಯೇ ಮೃತನಾದನು. ಅವನ
ಮಗ ದಿಲೀಪನೂ ಹೀಗೆಯೇ ಅರ್ಧ ತಪಸ್ಸಿನಲ್ಲಿ ಮೃತನಾದನು. ದಿಲೀಪನ
ಮಗ ಭಗೀರಥ. ಅವನು ಬ್ರಹ್ಮನನ್ನೂ ವಿಷ್ಣು ಪಾದೋದಕವಾದ ಗಂಗೆಯನ್ನು
ಧರಿಸಲು ಸಮರ್ಥನಾದ ರುದ್ರನನ್ನೂ ಪ್ರಸನ್ನಗೊಳಿಸಿ, ಗಂಗೆಯನ್ನು ಭೂಮಿಗಿಳಿ
ಸಿದನು. ಗಂಗಾಜಲದ ಸಿಂಚನದಿಂದ ತನ್ನ ತಾತ ಮುತ್ತಾತಂದಿರಿಗೆಲ್ಲ ಸದ್ಗತಿ
ಯನ್ನಿತ್ತಿನು. ಹೀಗೆ ಈ ಭಗೀರಥನಿಂದ ಈ ಗಂಗೆ 'ಭಾಗೀರಥಿ' ಯಾದಳು.
ಅದೇ ಭಾಗೀರಥಿ ಇಂದಿಗೂ ಭಕ್ತರ ಪಾಪಗಳನ್ನು ತೊಳೆಯುತ್ತ ನಿತ್ಯ ಪವಿತ್ರ
ಳಾಗಿ ಈ ಭೂಮಿಯಲ್ಲಿ ಹರಿಯುತ್ತಿದ್ದಾಳೆ."
ಕಲ್ಲು ಹೆಣ್ಣಾಯಿತು
ಹೀಗೆ ಕಥಾವಿನೋದದಿಂದ ರಾತ್ರಿಯು ಕ್ಷಣದಂತೆ ಕಳೆದು ಹೋಯಿತು.
ಪ್ರಾತಃಕಾಲ ಮುನಿವೃಂದದೊಡನೆ ಗಂಗೆಯನ್ನು ದಾಟಿ ವಿಶಾಲನೆಂಬ ರಾಜನು
ನಿರ್ಮಿಸಿದ ವೈಶಾಲೀ ನಗರವನ್ನು ಪ್ರವೇಶಿಸಿದರು. ಅಲ್ಲಿಗೆ ಬರುತ್ತ ಮುನಿಯು
ರಾಮನಿಗೆ ವಿಶಾಲನ ಕಥೆಯನ್ನರುಹಿದನು.
"ಹಿಂದೊಮ್ಮೆ ದೇವದಾನವರೆಲ್ಲ ಬೆರತು ಕಡಲನ್ನು ಕಡೆದರು. ಮಂದ
ರವೇ ಕಡೆಗೋಲು, ವಾಸುಕಿಯೇ ಹಗ್ಗ- ಈ ಮಥನಕ್ಕೆ, ಮುಳುಗುತ್ತಿರುವ
ಮಂದರವನ್ನು ಕೂರ್ಮ ರೂಪಿಯಾದ ಶ್ರೀಹರಿಯೇ ಎತ್ತಿ ಹಿಡಿದನು. ದೇವತೆ
ಗಳೂ ದಾನವರೂ ಬಸವಳಿದು ಕೈ ಬಿಟ್ಟಾಗ ಮುಂದೆ ಬಂದು ಕಡೆದವನೂ
ಶ್ರೀಹರಿಯೇ. ಆಗ ಸಮುದ್ರದಿಂದ ಚಂದ್ರನೂ, ಲಕ್ಷ್ಮಿಯೂ, ಅಚ್ಚರಿಸಿಯರೂ