2023-03-15 15:35:24 by ambuda-bot
This page has not been fully proofread.
ಮಂಚಿನಬಳ್ಳಿ
ಸಹಸ್ರವರ್ಷಗಳವರೆಗೆ ಶಿವ ಪಾರ್ವತಿಯರ ರತಿ ಕ್ರೀಡೆ ನಡೆಯಿತು. ಯಾರೊಬ್ಬರೂ
ತೃಪ್ತಿಗೊಂಡ ಚಿಹ್ನೆ ಕಂಡುಬರಲಿಲ್ಲ. ಈ ಸುಸಿಲಿಗೆ ಕೊನೆಯಲ್ಲಿ ? ಎಂದು ?
35
" ಅವನ ರೇತಸ್ಸಿನ ಶಕ್ತಿಯನ್ನರಿತ ದೇವತೆಗಳು ಅದಕ್ಕೆ ತಡೆಯನ್ನೆಸಗಿ
ದರು. ಆಗ ಶಿವ ತನ್ನ ರೇತಸ್ಸನ್ನು ಗಂಗೆಯಲ್ಲಿ ನಯ ಮುಖಕ್ಕೆ ಚೆಲ್ಲಿದನು.
ಆ ತೇಜಸ್ಸೇ ಮುಂದೆ ಸ್ಕಂದನಾದುದು, ದೇವಸೇನಾನಿಯಾದುದು ! ಅನಂತರ
ಹರಿಪ್ರಸಾದಕ್ಕಾಗಿ ಉಮಾಶಂಕರರು ತಪಸ್ಸಿನಲ್ಲಿ ತೊಡಗಿದರು.
ಇದು ಒಬ್ಬ
ಮಗಳ ಕಥೆ, ಇನ್ನೊಬ್ಬಳ ಕಥೆಯನ್ನಾಲಿಸು."
* ತ್ರಿವಿಕ್ರಮನ ಪಾದೋದಕವಾಗಿದ್ದ ಗಂಗೆ ಯಾವುದೋ ಕಾರಣಕ್ಕಾಗಿ
ಹಿಮಗಿರಿಯ ಮಗಳಾಗಿ ಜನಿಸಿ ಪುನಃ ಸ್ವರ್ಗವನ್ನೇ ಸೇರಿಕೊಂಡಳು. ಮತ್ತೆ
ಅವಳನ್ನು ಭೂಮಿಗೆ ತಂದವರು ನಿನ್ನ ಪೂರ್ವಜರು",
"ನಿಮ್ಮ ವಂಶದ ಪೂರ್ವ ಪುರುಷನಾದ ಸಗರನೆಂಬ ರಾಜ, ಮಕ್ಕಳಿಗಾಗಿ
ತಪಸ್ಸು ಮಾಡಿದನು.
ಅವನ ಒಬ್ಬ ಹೆಂಡತಿಯಲ್ಲಿ 'ಅಸಮಂಜಸ' ಎಂಬ
ಒಬ್ಬ ಮಗನೂ ಎರಡನೆಯವಳಲ್ಲಿ ಅರುವತ್ತು ಸಾವಿರ ಮಕ್ಕಳೂ ಆದರು.
ಅಸಮಂಜಸನಿಗೂ ಒಬ್ಬ ಮಗನಿದ್ದ. ಅಂಶುಮಂತನೆಂದು ಅವನ ಹೆಸರು.
ಏಕಾಂತಪ್ರಿಯನಾದ ಅಸಮಂಜಸನು ಪಟ್ಟಣದಲ್ಲಿ ಬೇಕೆಂದೇ ಕ್ರೂರರಂತೆ
ವರ್ತಿಸಿದನು. ಅವನ ವರ್ತನೆಯಿಂದ ಬೇಸತ್ತ ಸಗರ ಅವನನ್ನು ಕಾಡಿಗಟ್ಟಿ
ದನು. ಅವನ ಬಯಕೆ ಈಡೇರಿದಂತಾಯಿತು.
"ಮುಂದೊಮ್ಮೆ ಸಗರನು ಅಶ್ವಮೇಧ ಯಾಗವನ್ನು ಮಾಡಿದನು. ಆಗ
ಇಂದ್ರನು ಇವನ ಯಾಗಾಶ್ವವನ್ನಪಹರಿಸಿದನು. ಆ ಕುದುರೆಯನ್ನು ಹುಡುಕು
ವುದಕ್ಕಾಗಿ ಸಗರನ ಅರುವತ್ತು ಸಾವಿರ ಮಕ್ಕಳೂ ನೆಲವನ್ನಗೆದರು. ಅವರು
ಅಗೆದ ನೆಲವೇ ಕಡಲಾಯಿತು. ಆದ್ದರಿಂದಲೇ ಕಡಲನ್ನು ಅಂದಿನಿಂದಲೂ
'ಸಾಗರ' ಎಂದು ಕರೆಯುವುದು ರೂಢಿ. ಸಗರಪುತ್ರರು ಕುದುರೆಗಾಗಿ ಅಲೆ
ಯುತ್ತಾ ಕಪಿಲ ಮಹರ್ಷಿಯನ್ನು ಕಂಡರು. ಅವನ ಬಳಿಯಲ್ಲಿ ತಮ್ಮ ಕುದುರೆ
ಯನ್ನೂ ಕಂಡರು. ಆದ್ದರಿಂದ ಅವನ್ನೇ ಕಳ್ಳನಿರಬೇಕೆಂದು ಭ್ರಮಿಸಿ ಈ ಸಗರ
ಪುತ್ರರು- ಪತಂಗಗಳು ಬೆಂಕಿಯೆಡೆಗೆ ಧಾವಿಸುವಂತೆ ಅವನೆಡೆಗೆ ನುಗ್ಗಿದರು.
ಕಪಿಲರೂಪಿಯಾದ ಶ್ರೀಹರಿಯ ಕಿಡಿಗಣ್ಣಿನಿಂದ ಅವರ ಬಾಳು ಲಯವಾಯಿತು.
ಪ್ರಳಯ ಕಾಲದಲ್ಲಿ ಜಗತ್ತನ್ನೇ ಕಬಳಿಸುವ ಹರಿಗೆ ಇದೊಂದು ದೊಡ್ಡದೆ ?