This page has not been fully proofread.

ಸಂಗ್ರಹರಾಮಾಯಣ
 
೨೧
 
ವೃಂದದಲ್ಲೆಲ್ಲ ಹಾಹಾಕಾರವೆದ್ದಿತು. ಆಕಾಶದಲ್ಲಿ ಸುಬಾಹು-ಮಾರೀಚರು
 
ಕಾಣಿಸಿಕೊಂಡರು.
 
ರಾಮಚಂದ್ರನು ಲಕ್ಷ್ಮಣನಿಗೆ ಅಣಿಯಾಗು ಎಂದು ಸೂಚಿಸಿ ಬಿಲ್ಲನ್ನು
ಸಜ್ಜುಗೊಳಿಸಿದನು. ಆ ರಕ್ಕಸರು ನೆತ್ತರನ್ನು ಕಾರಿ ಯಾಗವನ್ನು ಕೆಡಿಸುವ
ಮೊದಲೇ ರಾಮನು ಅವರೆಡೆಗೆ ಬಿರುಸಾದ ಬಾಣಗಳನ್ನೆಸೆದನು. ರಾಮಬಾಣ
ದಿಂದ ತಾಡಿತನಾದ ಮಾರೀಚನು ನೂರುಯೋಜನ ದೂರದ ಸಮುದ್ರದಲ್ಲಿ
ಹೋಗಿ ಬಿದ್ದ. ರಾಮನ ಇನ್ನೊಂದು ಬಾಣ ಸುಬಾಹುವನ್ನು. ಅವನ ತಾಯಿ
ಹೋದ ತಾಣಕ್ಕೆ-ಯಮಪುರಿಗೆ ಅಟ್ಟಿತು. ಅವರ ಅನುಯಾಯಿಗಳಲ್ಲಿ ಕೆಲವರು
ರಾಮಬಾಣದ ರುಚಿಯನ್ನು ಕಂಡರು. ಕೆಲವರು ಕಂಗೆಟ್ಟು ಓಡಿದರು. ಯಜ್ಞ
ನಿರ್ವಿಘ್ನವಾಗಿ ಕೊನೆಗೊಂಡಿತು. ಋಷಿಗಳೆಲ್ಲ ರಾಮನನ್ನು ಕೊಂಡಾಡಿದರು.
 
ಅಂದು ರಾತ್ರೆಯೂ ಅಲ್ಲೇ ತಂಗಿದ್ದಾಯಿತು. ಬೆಳಗಾದಾಗ ಮಹರ್ಷಿಯು
ರಾಮಲಕ್ಷ್ಮಣರನ್ನು ಕುರಿತು ಹೀಗೆಂದನು;
 
* ವತ್ಸ, ಜನಕನ ಮಗಳು ಸೀತೆಗೆ ಸ್ವಯಂವರವಂತೆ. ಈ ಉತ್ಸವ
ವನ್ನು ಕಾಣಲು ಎಲ್ಲರೂ ವಿದೇಹರಾಜಧಾನಿಗೆ ಹೋಗುತ್ತಿದ್ದಾರೆ. ಸೀತೆಯನ್ನು
ವರಿಸಲೆಂದು ರಾಜವೃಂದವೂ ಬರುತ್ತಿದೆ. ನಾವೂ ಅಲ್ಲಿಗೆ ಹೋಗುವುದು
ಚೆನ್ನು, ಆ ಉತ್ಸವದಲ್ಲಿ ನಾವೂ ಪಾಲುಗಾರರಾಗೋಣ. "
 
ಹೀಗೆ ಹೇಳಿ..ಮುನಿಯು ರಾಮ ಲಕ್ಷ್ಮಣರೊಡನೆ
ಮುನ್ನಡೆದನು.
 
ಅವರೆಲ್ಲ ಅಲ್ಲಿ ತಂಗಿದರು. ಕುಶಿಕವಂಶದ ರಾಜರದೇಶವಾಗಿದ್ದ ಆ ಭಾಗವನ್ನು
ಕಂಡಾಗ ಮಹರ್ಷಿಯು ತನ್ನ ಪೂರ್ವಜರ ಕಥೆಯನ್ನು ರಾಮನಿಗೆ ಅರುಹಿದನು.
ಕುಶನಿಂದ ಕುಶನಾಭ, ಅವನಿಂದ ಗಾಧಿ, ಗಾಧಿಯಿಂದ ತನ್ನ ಜನನ ಇವೆಲ್ಲ
ಕಥೆಗಳನ್ನು ಹೇಳಿದನು.
 
ಉತ್ತರದಿಕ್ಕಿನೆಡೆಗೆ
ಆ ರಾತ್ರಿ
 
ದಾರಿಯಲ್ಲಿ ಶೋಣನದ ಎದುರಾಯಿತು.
 
ಬೆಳಿಗ್ಗೆ ಅಲ್ಲಿಂದ ಹೊರಟವರು ಮಧ್ಯಾಹ್ನದ ಹೊತ್ತಿಗೆ ಗಂಗಾತಟವನ್ನು
ಸೇರಿ ಅಲ್ಲೇ ವಿಶ್ರಮಿಸಿದರು. ಆಗ ಗಂಗೆಯ ಪೂರ್ವಚರಿತ್ರೆಯನ್ನು ಕೇಳಬಯ
ಸಿದ ರಾಮಚಂದ್ರನಿಗೆ ಮುನಿ ಆ ಕಥೆಯನ್ನು ವಿವರಿಸಿದನು;
 
* ಪರ್ವತರಾಜನಾದ ಹಿಮವಂತನಿಗೆ ಇಬ್ಬರು ಮಕ್ಕಳು. ಅವರಲ್ಲಿ ಗಂಗೆ
ಸ್ವರ್ಗದ ನದಿಯಾಗಿ ಹರಿದಳು. ಉಮೆ ಶಂಕರನ ಅರ್ಧಾಂಗಿಯಾದಳು. ಬಹು