2023-03-15 15:35:24 by ambuda-bot
This page has not been fully proofread.
ಮಿಂಚಿನಬಳ್ಳಿ
ಯಾಗದ ಸಿಜೆ ತೊಲಗಿತು
ಕತ್ತಲು ಕಳೆದು ಬೆಳಕು ಹರಿದಾಗ ಮೂವರೂ ಪ್ರಾತಃಕರ್ಮವನ್ನು
ಮುಗಿಸಿದರು. ಆನಂತರ ಮುನಿಯು ರಾಮಚಂದ್ರನನ್ನು ಏಕಾಂತಕ್ಕೆ ಕರೆದು
ವೈಷ್ಣವಾಸ್ತ್ರ-ಬ್ರಹ್ಮಾಸ್ತ್ರ-ಶೈವಾಸ್ತ್ರ ಆಕ್ಷೇಯಾಸ್ತ್ರ-ಜೃಂಭಕಾಸ್ತ್ರ ಹೀಗೆ ಇನ್ನೂ
ಅನೇಕ ಅಸ್ತ್ರಗಳನ್ನು ಉಪದೇಶಿಸಿದನು. ಸರ್ವಜ್ಞನಾದಹರಿಗೆ ವಿಶ್ವಾಮಿತ್ರನು
ಈ ಮಂತ್ರಗಳನ್ನು ಉಪದೇಶಿಸಿ ತನ್ನ ಪಾಲಿನ ಕರ್ತವ್ಯವನ್ನು ತೀರಿಸಿದನು.
ಅಸ್ತ್ರರೂಪರಾದ ಬ್ರಹ್ಮಾದಿಗಳು ರಾಮಚಂದ್ರನನ್ನು ಸುತ್ತುವರಿದು 'ನಾವೆಲ್ಲ
ನಿನ್ನ ಕಿಂಕರರು' ಎಂದು ಕೈ ಮುಗಿದರು. ಬ್ರಹ್ಮಾಸ್ತ್ರ ಮೊದಲಾದ ಕೆಲವು
ಅಸ್ತ್ರಗಳನ್ನು ಲಕ್ಷ್ಮಣನೂ ಉಪದೇಶ ಪಡೆದನು.
೨೦
ಮಂತ್ರಾಕ್ಷರಗಳನ್ನು ಮನದಲ್ಲಿ ಹೊತ್ತು ಮುಂದುವರಿಯುತ್ತಿದ್ದಾಗ
ಎದುರೊಂದು ಆಶ್ರಮ ಕಾಣಿಸಿತು. ರಾಮನ ಜಿಜ್ಞಾಸೆಯನ್ನರಿತ ಮಹರ್ಷಿಯು
ಆ ಪ್ರದೇಶದ ಇತಿಹಾಸವನ್ನರುಹಿದನು.
"ರಾಮಚಂದ್ರಮ, ಅನೇಕ ಮಂದಿ ಮಹರ್ಷಿಗಳು ಈ ತಪೋವನದಲ್ಲಿ
ಸಿದ್ಧಿಯನ್ನು ಪಡೆದು ಮುಕ್ತಿಯನ್ನೈದಿದ್ದಾರೆ. ಎಂತಲೆ ಇದನ್ನು ಸಿದ್ಧಾಶ್ರಮ
ಎಂದು ಕರೆಯುತ್ತಾರೆ. ಒಂದೊಮ್ಮೆ ಇದು ಸಾಕ್ಷಾತ್ ಹರಿಯ ಆಶ್ರಮವೆ
ಆಗಿತ್ತು ಬಲಿ ಚಕ್ರವರ್ತಿ ದೇವತೆಗಳನ್ನೆಲ್ಲ ಪದಚ್ಯುತರನ್ನಾಗಿ ಮಾಡಿ
ಸಾಮ್ರಾಜ್ಯ ಕಟ್ಟಿದ ಕಾಲ. ಆಗ ಕಶ್ಯಪನ ಮಡದಿ ಅದಿತಿಯಲ್ಲಿ ಹರಿ ವಾಮನ
ನಾಗಿ ಅವತರಿಸಿ, ಬಲಿಯ ಬಳಿ ಮೂರು ಹೆಜ್ಜೆಯಷ್ಟು ಭೂಮಿಯನ್ನು ಬೇಡಿದ
ನಷ್ಟೆ ! ಬಲಿ ಮೂರು ಹೆಜ್ಜೆ ನೆಲವನ್ನು ಕೊಡುವೆನೆಂದುದೇ ತಡ, ಈ ಪುಟ್ಟ
ವಾಮನ ವಿಶ್ವಮೂರ್ತಿಯಾಗಿ ತ್ರಿವಿಕ್ರಮನಾದ ! 'ಅಣೋರಣೀಯಾನ್'
ಎನ್ನಿಸಿದವನೇ 'ಮಹತೋ ಮಹಿಯಾನ್' ಆಗಿದ್ದ ! ಆ ತ್ರಿವಿಕ್ರಮ ವಾಸಿಸು
ತಿದ್ದ ಆಶ್ರಮವೇ ಇದು. ನಾನೂ ಇನ್ನುಳಿದ ತಾಪಸರೂ ಇಲ್ಲೇ ವಾಸಿಸುವುದು."
ಮಾತು ಸಾಗಿದಂತೆ ಮಾರ್ಗವೂ ಸಾಗಿತ್ತು. ಆಶ್ರಮ ಸಮೀಪವಾದಾಗ
ಸೂರ್ಯ ಮುಳುಗುವುದರಲ್ಲಿದ್ದ. ಅಲ್ಲಿ ಆ ಆಶ್ರಮದಲ್ಲಿ ಆರು ದಿನಗಳ ಯಾಗ
ವೊಂದನ್ನು ಸಪ್ತರ್ಷಿಗಳೊಡನೆ ಮಾಡತೊಡಗಿದನು. ಆರನೆಯ ದಿನ-ಯಜ್ಞ
ಕೊನೆಗೊಳ್ಳುವ ಸಮಯ-ಯಾಗವೇದಿಕೆಯ ಸುತ್ತಲೂ ಉರಿಯೆದ್ದಿತು. ಮುನಿ