This page has not been fully proofread.

ಸಂಗ್ರಹರಾಮಾಯಣ
 
ಯಕ್ಷನ ಮಗಳು, ಸುಂದಾಸುರನ ಮಡದಿ, ಮಾರೀಚನ ತಾಯಿ, ಅಗನ
ಶಾಪದಿಂದ ರಕ್ತಸಿಯಾಗಿದ್ದಾಳೆ. ನಾವೆಲ್ಲ ಮನುಷ್ಯರು ಅವಳ ಆಹಾರ.
ಅಲ್ಲಿ ನೋಡು, ಅವಳು ತಿಂದು ಬಿಸುಟ ಗೋ-ಬ್ರಾಹ್ಮಣರ ಎಲುಬಿನ ಹಂದರದ
ರಾಶಿ ! ನಿನ್ನಂಥ ಹಸುಳೆ ನೋಡಬಾರದ ದೃಶ್ಯ-ಅಲ್ಲವೆ ?"
 
೧೯
 
ಹೀಗೆಂದು ನುಡಿದು ಮೌನದಾಳಿದ ಮುನಿಯೊಡನೆ ರಾಮಚಂದ್ರನು
ತಾಟಕೆಯ ನಾಡಾದ ಕಾಡನ್ನು ಪ್ರವೇಶಿಸಿದನು. ಅವನು ಬಿಲ್ಲನ್ನು ಅಣಿ-
ಗೊಳಿಸುತ್ತಿದ್ದಂತೆ ಅದರ ಟಂಕಾರವು ತಾಟಕೆಯ ಕಿವಿಯನ್ನು ಮುಟ್ಟಿತು.
ಬಿಲ್ಲಿನ ಬಿರುದನಿಗೆ ಬೆದರಿದ ಮಿಗಗಳೆಲ್ಲ ಮೂಲೆ ಮೂಲೆಯ ಗುಹೆಗಳನ್ನು
ಸೇರಿಕೊಂಡವು. ತಾಟಕೆ ಮಾತ್ರ ತನ್ನ ಗುಹೆ ಹೊರಬಿದ್ದು ಸದ್ದು
ಬಂದೆಡೆಗೆ ಧಾವಿಸಿದಳು.
 
ಆ ಮೇಲೆ
 
ಗುಹೆಯಂಥ ಬಾಯನ್ನು ತೆರೆದು ಹೂಂಕರಿಸುತ್ತಿರುವ ಮಹಾಕಾಯಳಾದ
ತಾಟಕೆಯು ಇವರೆದುರು ಕಾಣಿಸಿಕೊಂಡಲು ! ಈ ಭೂತಾಕಾರದ ರಕ್ಕಸಿಯ
ಮುಂದೆಯೂ ರಾಮನು ನಿರ್ಭಯನಾಗಿ ಕದಲದೆ ನಿಂತಿದ್ದ. ಕೋಪಗೊಂಡ
ತಾಟಕೆ ಧೂಳಿನ ಮಳೆಯನ್ನು ರಾಮನ ಮೇಲೆ ಸುರಿದಳು.
ಕಗ್ಗಲ್ಲಿನ ಸುರಿಮಳೆ ! ಇದನ್ನು ಕಂಡು ರಾಮ ಎರಡು ಬಾಣಗಳಿಂದ ಅವಳ
ಎರಡು ತೋಳುಗಳನ್ನೂ ಕತ್ತರಿಸಿದ. ಲಕ್ಷ್ಮಣನು ಅವಳ ತುಟಿ-ಮೂಗು
ಗಳನ್ನು ಕತ್ತರಿಸಿದ. ಆಗ ಆಕೆ ಆಕಾಶದಲ್ಲಿ ಮಾಯವಾಗಿ ನಾನಾ ವಿಧವಾದ
ಆಯುಧಗಳನ್ನೆಸೆಯತೊಡಗಿದಳು. ಆದರೂ ಹೆಣ್ ಲೆಗೆ ಹಿಂಜರಿದು
ರಾಮನು ನಿಂತೇ ಇದ್ದನು. ಅದನ್ನರಿತ ಮಹರ್ಷಿ ವಿಶ್ವಾಮಿತ್ರನು ರಾಮನನ್ನು
ಪ್ರಚೋದಿಸಿದನು:
 
"ಚಿಂತಿಸಬೇಡ ವತ್ಸಾ, ಇದು ನಾರಿಯಲ್ಲ; ಸಜ್ಜನರನ್ನು ಪೀಡಿಸುವ
ಧರ್ಮವನ್ನು ಹೊಲೆಗೆಡಿಸುವ ಪಿಶಾಚಿ, ಕೊಲ್ಲು-ಕೊಲ್ಲು ಈ
 
ಮಾರಿ.
 
ಅನಿಷ್ಟವನ್ನು."
 
ಮುನಿ ವಚನವನ್ನಾಲಿಸಿದ ರಾಮಚಂದ್ರ ಕ್ಷಣ ಮಾತ್ರದಲ್ಲಿ ಅವಳನ್ನು
ಶರಪಂಜರದಲ್ಲಿ ಬಂಧಿಸಿದನು. ಎದುರಾಗಿ ಓಡಿ ಬರುತ್ತಿರುವ ಈ ಡಾಕಿನಿಯ
ಎದೆಯನ್ನು ಸೀಳಿ ನೆಲಕ್ಕೆ ಕೆಡವಿದಾಗ-ದೇವತೆಗಳು ಆಕಾಶದಲ್ಲಿ ಜಯಜಯ
ಕಾರವನ್ನೆಸಗುತ್ತಿದ್ದರು. ಆನಂದದಿಂದ ಹೂಮಳೆಗರೆಯುತ್ತಿದ್ದರು.