This page has been fully proofread once and needs a second look.

ಮಿಂಚಿನಬಳ್ಳಿ
 
ಎಳೆಯ ಮಕ್ಕಳಾದರೂ ಮಹಾ ವೀರರಾದ ರಾಮ-ಲಕ್ಷ್ಮಣರು
ಧನುರ್ಧಾರಿಗಳಾಗಿ ಮುನಿಯನ್ನನುಸರಿಸಿದರು. ಸುಮಾರು ಒಂದೂವರೆ
 
ಯೋಜನ ದೂರ ಬಂದುದಾ- ಯಿತು . ಸರಯೂ ನದಿಯನ್ನು ದಾಟಿದುದಾಯಿತು. ಸರಯೂ ನದಿಯನ್ನು ದಾಟಿದುದಾ
ಯಿತು.
ಆಗ ಮಹರ್ಷಿಯು ರಾಮಚಂದ್ರನನ್ನು ಕರೆದನು !
 

 
"ರಾಮಭದ್ರ, "ಬಲಾ'-'ಅತಿಬಲಾ' ಎಂಬ ಮಂತ್ರಗಳನ್ನು ನಿನಗೆ
ಉಪದೇಶಿಸುವೆನು. ಇವು ಬ್ರಹ್ಮನಿಂದ ಬಂದ ಮಂತ್ರಗಳು. ಇವನ್ನು ಜಪಿಸಿದರೆ
ಹಸಿವೂ ಬರದು-ತೃಷೆಯೂ ಬರದು." ಹೀಗೆಂದು ಋಷಿಯು ಮಂತ್ರಗಳನ್ನು -
ನ್ನು

ದೇಶಿಸಿದನು. ರಾಮನೂ ವಿಧೇಯನಾದ ಶಿಷ್ಯನಂತೆ ಉಪದೇಶವನ್ನಾಲಿಸಿದನು.
ಹರಿ ತೋರಿದ ಮಾರ್ಗದಲ್ಲಿ ನರ ನಡೆಯಬೇಕಲ್ಲ. ಅದಕ್ಕೆ ಇದೆಲ್ಲ ನಟನೆ.

'ಮಮ ವತ್ಮಾನುವರ್ತಂತೇ ಮನುಷ್ಯಃ ಪಾರ್ಥ ಸರ್ವಶ:
 
'
 
ಅಂದು ರಾತ್ರಿ ಅಲ್ಲಿ ಸರಯೂತೀರದಲ್ಲಿ ತಂಗಿದರು.
ಮರುದಿನ
ಮುಂಜಾನೆ ಸಂಧ್ಯಾಕರ್ಮಗಳನ್ನು ತೀರಿಸಿ- ಕೊಂಡು ಸರಯೂ-ಗಂಗಾ ಸಂಗಮ
ಸ್ಥಳದಲ್ಲಿರುವ ಆಶ್ರಮದ ಕಡೆ ತೆರಳಿದರು. ಇಲ್ಲೇ-ಹಿಂದೆ ಮನ್ಮಥನು ಪಾರ್ವತೀ
ಪತಿಯ ಹಣೆಗಣ್ಣಿನ ಕಿಡಿಗೆ ತನ್ನ ಅಂಗವನ್ನರ್ಪಿಸಿ ಅನಂಗನಾಗಿದ್ದನಂತೆ !
ಹರನು ತಪಸ್ಸು- ಗೈದ ಆ ಪವಿತ್ರ ಆಶ್ರಮದಲ್ಲಿ ಆ ರಾತ್ರಿಯನ್ನು ಕಳೆದರು. ಬೆಳಿಗ್ಗೆ
ಸಂಧ್ಯಾವಂದನೆಗೆ ತೆರಳುತ್ತಿದ್ದ ಅಲ್ಲಿಯ ಮುನಿಗಣ ರಾಮರೂಪನಾದ ಶ್ರೀಹರಿ
ಯನ್ನು ಕಂಡು 'ಇಂದು ನಮಗೆ ಸುಪ್ರಭಾತ' ಎಂದುಕೊಂಡು ನಲಿದರು.
 

 
ಸರಯನದಿಯ ತೆರೆಗಳೊಡನೆ ಬೆರೆತು ಕುಲುಕುಲು
ನಾದವನ್ನೆಬ್ಬಿಸು-
ತ್ತಿರುವ ಗಂಗೆಯನ್ನು ದಾಟಿ, ರಾಮ-ಲಕ್ಷ್ಮಣರೂ-ವಿಶ್ವಾಮಿತ್ರನೂ ಮುಂದು
ವರಿದರು. ಎದುರಿ- ನಲ್ಲಿ ಎತ್ತೆತ್ತಲೂ ಕಾಡೇಕಾಡು. ಕಣ್ಣು ಹರಿಯುವಷ್ಟು

ದೂರವೂ ಹಸುರು ಬನ, ಸೂರ್ಯನ ಬೆಳಕ ಹರಿಯದಂತೆ ಹೆಣೆದುಕೊಂಡಿ
ರುವ ಮರಗಳ ಗುಂಪು, ಮೈ ಜುಮ್ಮೆನ್ನುವ ನೋಟ, ಆಗ ಕುತೂಹಲಿಯಾದ
ರಾಮಚಂದ್ರ "ಇದು ಯಾವ ಕಾಡು" ಎಂದು ಮುನಿಯನ್ನು ಪ್ರಶ್ನಿಸಿದನು.

ಮಹರ್ಷಿಯು ಆ ಕಾಡಿನ ಜಾತಕವನ್ನು ಸ್ಪುಫುಟಗೊಳಿಸಿ- ದನು:
 

 
"
 
*
ರಾಮಭದ್ರ, ಒಂದು ಕಾಲದಲ್ಲಿ ಇವು ಮಲಯಕಾರೂಶ ದೇಶಗಳಾಗಿ
ಮೆರೆದಿದ್ದವು. ಈಗ ಕಗ್ಗಾಡಾಗಿ ಮೆರೆಯುತ್ತಿವೆ. ಇದು ಕಾಲಚಕ್ರದ ಪ್ರಭಾವ.
ಇಲ್ಲಿ 'ತಾಟಿಕೆ'ಯೆಂಬೊಬ್ಬಳು ರಕ್ಕಸಿಯಿದ್ದಾಳೆ, ಅವಳು ಸುಕೇತು ಎಂಬ