This page has not been fully proofread.

ಮಿಂಚಿನಬಳ್ಳಿ
 
ಎಳೆಯ ಮಕ್ಕಳಾದರೂ ಮಹಾ ವೀರರಾದ ರಾಮ-ಲಕ್ಷ್ಮಣರು
ಧನುರ್ಧಾರಿಗಳಾಗಿ ಮುನಿಯನ್ನನುಸರಿಸಿದರು. ಸುಮಾರು ಒಂದೂವರೆ
 
ಯೋಜನ ದೂರ ಬಂದುದಾಯಿತು. ಸರಯೂ ನದಿಯನ್ನು ದಾಟಿದುದಾ
ಯಿತು. ಆಗ ಮಹರ್ಷಿಯು ರಾಮಚಂದ್ರನನ್ನು ಕರೆದನು !
 
"ರಾಮಭದ್ರ, "ಬಲಾ'-'ಅತಿಬಲಾ' ಎಂಬ ಮಂತ್ರಗಳನ್ನು ನಿನಗೆ
ಉಪದೇಶಿಸುವೆನು. ಇವು ಬ್ರಹ್ಮನಿಂದ ಬಂದ ಮಂತ್ರಗಳು. ಇವನ್ನು ಜಪಿಸಿದರೆ
ಹಸಿವೂ ಬರದು-ತೃಷೆಯೂ ಬರದು." ಹೀಗೆಂದು ಋಷಿಯು ಮಂತ್ರಗಳನ್ನು ಪ
ದೇಶಿಸಿದನು. ರಾಮನೂ ವಿಧೇಯನಾದ ಶಿಷ್ಯನಂತೆ ಉಪದೇಶವನ್ನಾಲಿಸಿದನು.
ಹರಿ ತೋರಿದ ಮಾರ್ಗದಲ್ಲಿ ನರ ನಡೆಯಬೇಕಲ್ಲ. ಅದಕ್ಕೆ ಇದೆಲ್ಲ ನಟನೆ.
'ಮಮ ವತ್ಮಾನುವರ್ತಂತೇ ಮನುಷ್ಯಃ ಪಾರ್ಥ ಸರ್ವಶ:
 
ಅಂದು ರಾತ್ರಿ ಅಲ್ಲಿ ಸರಯೂತೀರದಲ್ಲಿ ತಂಗಿದರು. ಮರುದಿನ
ಮುಂಜಾನೆ ಸಂಧ್ಯಾಕರ್ಮಗಳನ್ನು ತೀರಿಸಿಕೊಂಡು ಸರಯೂ-ಗಂಗಾ ಸಂಗಮ
ಸ್ಥಳದಲ್ಲಿರುವ ಆಶ್ರಮದ ಕಡೆ ತೆರಳಿದರು. ಇಲ್ಲೇ-ಹಿಂದೆ ಮನ್ಮಥನು ಪಾರ್ವತೀ
ಪತಿಯ ಹಣೆಗಣ್ಣಿನ ಕಿಡಿಗೆ ತನ್ನ ಅಂಗವನ್ನರ್ಪಿಸಿ ಅನಂಗನಾಗಿದ್ದನಂತೆ !
ಹರನು ತಪಸ್ಸುಗೈದ ಆ ಪವಿತ್ರ ಆಶ್ರಮದಲ್ಲಿ ಆ ರಾತ್ರಿಯನ್ನು ಕಳೆದರು. ಬೆಳಿಗ್ಗೆ
ಸಂಧ್ಯಾವಂದನೆಗೆ ತೆರಳುತ್ತಿದ್ದ ಅಲ್ಲಿಯ ಮುನಿಗಣ ರಾಮರೂಪನಾದ ಶ್ರೀಹರಿ
ಯನ್ನು ಕಂಡು ಇಂದು ನಮಗೆ ಸುಪ್ರಭಾತ' ಎಂದುಕೊಂಡು ನಲಿದರು.
 
ಸರಯನದಿಯ ತೆರೆಗಳೊಡನೆ ಬೆರೆತು ಕುಲುಕುಲು ನಾದವನ್ನೆಬ್ಬಿಸು-
ತಿರುವ ಗಂಗೆಯನ್ನು ದಾಟಿ, ರಾಮ-ಲಕ್ಷ್ಮಣರೂ-ವಿಶ್ವಾಮಿತ್ರನೂ ಮುಂದು
ವರಿದರು. ಎದುರಿನಲ್ಲಿ ಎತ್ತೆತ್ತಲೂ ಕಾಡೇಕಾಡು. ಕಣ್ಣು ಹರಿಯುವಷ್ಟು
ದೂರವೂ ಹಸುರು ಬನ, ಸೂರ್ಯನ ಬೆಳಕ ಹರಿಯದಂತೆ ಹೆಣೆದುಕೊಂಡಿ
ರುವ ಮರಗಳ ಗುಂಪು, ಮೈ ಜುಮ್ಮೆನ್ನುವ ನೋಟ, ಆಗ ಕುತೂಹಲಿಯಾದ
ರಾಮಚಂದ್ರ "ಇದು ಯಾವ ಕಾಡು" ಎಂದು ಮುನಿಯನ್ನು ಪ್ರಶ್ನಿಸಿದನು.
ಮಹರ್ಷಿಯು ಆ ಕಾಡಿನ ಜಾತಕವನ್ನು ಸ್ಪುಟಗೊಳಿಸಿದನು:
 
"
 
* ರಾಮಭದ್ರ, ಒಂದು ಕಾಲದಲ್ಲಿ ಇವು ಮಲಯಕಾರಶ ದೇಶಗಳಾಗಿ
ಮೆರೆದಿದ್ದವು. ಈಗ ಕಗ್ಗಾಡಾಗಿ ಮೆರೆಯುತ್ತಿವೆ. ಇದು ಕಾಲಚಕ್ರದ ಪ್ರಭಾವ.
ಇಲ್ಲಿ 'ತಾಟಿಕೆ'ಯೆಂಬೊಬ್ಬಳು ರಕ್ಕಸಿಯಿದ್ದಾಳೆ, ಅವಳು ಸುಕೇತು ಎಂಬ