This page has been fully proofread once and needs a second look.

ಸಂಗ್ರಹರಾಮಾಯಣ
 
ಪಳಗದವನು. ಒಂಬತ್ತು ಸಾವಿರ ವರ್ಷಗಳ ಕಾಲ ಮಕ್ಕಳಿಗಾಗಿ ಪರಿತಪಿಸಿ-
ಪರಿತಪಿಸಿ ಈ ಕುಮಾರನನ್ನು ಪಡೆದಿದ್ದೇನೆ. ಓ ಕರುಣಾಳು ಮುನಿಯೆ, ನಾನು

ರಾಮನನ್ನು ತೊರೆದು ಒಂದರೆಗಳಿಗೆಯೂ ಬದುಕಲಾರೆ. ರಾಮನೆಂದರೆ ನನ್ನ
 
ಪ್ರಾಣವೇ, ಈ ನನ್ನ ಪ್ರಾಣಗಳನ್ನು ಕಸಿಯಬೇಡ,. ಮಹರ್ಷಿಯೆ, ಮಾಯಾವಿ
ಗಳಾದ ರಾಕ್ಷಸರನ್ನು ಕೊಲ್ಲಲು ಸೇನಾಸಮೇತನಾಗಿ ನಾನೇ ಬರುವೆನು.
ಅವರೇನಾದರೂ ರಾವಣನ ಕಡೆಯವರಾಗಿ- ದ್ದರೆ -ಹಾಗಿದ್ದರೆ ನಮಗೆಲ್ಲರಿಗೂ
ಅಳಿಗಾಲ ಬಂತೆಂದೇ ಅರ್ಥ,. ಜಗತ್ತು ಬುಡಮೇಲಾಗುವ ಕಾಲ ಸಮಾಮೀಪಿಸಿಸಿ
ತೆಂದೇ ಅರ್ಥ ! ಯಾರ ಹೆಸರನ್ನು ಕೇಳಿಯೇ ಇಂದ್ರಾದಿಗಳೂ ಬೆದರುವರೋ
ಅಂಥವನೊಡನೆ ವೈರ ಹೇಗೆ ಸಾಧ್ಯ ? ಚಿಂತಿಸು ಓ ಮಹರ್ಷಿದೆಯೆ. ಆದರೆ ಈ
ಕ್ಷತ್ರಿಯ ದೇಹ ಗೋವುಗಳ, ಬ್ರಾಹ್ಮಣರ ಹಿತಕ್ಕಾಗಿ ಮಾಮೀಸಲಾಗಿದೆ. ಪ್ರಾಣ

ಇರುವತನಕ ನಿಮ್ಮ ವೈರಿಗಳೊಡನೆ ಹೋರಾಡಬಲ್ಲೆ. ಈ ಮೈ ನಿಮ್ಮದು."
 

 
ಮುನಿಯು ಈ ಮಾತನ್ನು ಕೇಳಿ-ತುಪ್ಪ ಸುರುವಿದ ಬೆಂಕಿಯಂತೆ ಉರಿದೆ
ದ್ದನು. ವಿಶ್ವಾಮಿತ್ರನ ಮುನಿಸು ಕೇಳಬೇಕೆ ? ಈ ಕೋಪೋದ್ರೇಕವನ್ನು ಕಂಡ
ವಸಿಷ್ಠರು ರಾಜನ ಬಳಿ ಹೀಗೆಂದು ನುಡಿದರು…
 
((
 
೧೭
 

 
"
ರಾಜನ್, ಅತಿಥಿಗಳಾದ ಮಹರ್ಷಿಗಳಿಗೆ ನೀನು ಮಾತು ಕೊಟ್ಟಿಲ್ಲವೆ
ನಿಮ್ಮ ಅಪೇಕ್ಷೆಯನ್ನು ಪೂರಯಿಸುವೆ-
ನೆಂದು ? ಅತಿಥಿಯಾಗಿ ಬಂದ
ಪ್
ಶ್ರೋತ್ರೀಯನಾದ ವಿಪ್ರನಿಗೆ ಕೊಟ್ಟ ಮಾತಿಗೆ ತಪ್ಪುವೆಯಾ ? ನಿನ್ನ ಮಗನ

ಮಹಿಮೆ ನಿನಗರಿಯದು. ಅವನ ಕೋಪದ ಕಿಡಿಗಣ್ಣು ಬ್ರಹ್ಮಾಂಡವನ್ನೆ
ಸುಟ್ಟಿತು. ಪರಮ ವೈಷ್ಣವನಾದ ವಿಶ್ವಾಮಿತ್ರನೇನು ಸಾಮಾನ್ಯನೆ ? ದಕ್ಷನ
ಮಕ್ಕಳಾದ ಜಯ-ಸುಪ್ರಭೆಯರಲ್ಲಿ ಹುಟ್ಟಿರುವ ನೂರು ಅಸ್ತ್ರ ವಿದ್ಯೆಗಳನ್ನೂ

ಈತ ಬಲ್ಲ. ಆದ್ದರಿಂದ ಈ ಬ್ರಹ್ಮರ್ಷಿಯೊಡನೆ ರಾಮನನ್ನು ಹೋಗಗೊಡು
. ಈ ಭಕ್ತವತ್ಸಲನೂ ಈ ಭಕ್ತನೂ ಸೇರಿ ಒಂದು ಮಹಾ ಕಾರ್ಯವಾಗಲಿದೆ.

ರಾಜನ್, ರಾಕ್ಷಸ ಕುಲದ ಸಂಹಾರವಾಗಲಿದೆ, ಯಜ್ಞ- ಕಾರ್ಯದ ರಕ್ಷಣೆಯಾಗ
`
ಲಿದೆ, ಹೋಗಗೊಡು ಅವರನ್ನು."
 

 
ಮಹರ್ಷಿ ವಶಿಸಿಷ್ಠರ ಮಾತು ಮಹಾರಾಜನಿಗೆ ನೆಮ್ಮದಿ- ಯನ್ನೀಯಿತು.
ಕುಲಪುರೋಹಿತರ ಆಣತಿಯನ್ನು ನಂಬಿ ಬಾಳಿದ ಮನೆತನ ಅದು. ಆದುದರಿಂದ
ದಶರಥನು ರಾಮನನ್ನೂ ಜತೆಗೆ ಲಕ್ಷ್ಮಣನನ್ನೂ ವಿಶ್ವಾಮಿತ್ರ ಮಹರ್ಷಿಗೆ
ಅರ್ಪಿಸಿದನು.