This page has been fully proofread once and needs a second look.

೦ಚಿನ ಬಳ್ಳಿ
 
ಹೀಗೆ ನಾಲ್ವರು ಕುಮಾರರೂ ಲೋಕಮಂಗಲರಾಗಿ ಬೆಳೆದರು. ಅವರು
ತಮ್ಮ ತಂದೆಯ ಪ್ರಾಣವಾಗಿದ್ದರು. ಗುರುವಿನ ಕಿಂಕರರಾಗಿದ್ದರು. ಜಗತ್ತಿನ
ಅಧಿದೈವ- ವಾಗಿದ್ದರು. ತಾಯಂದಿರ ಹೆಮ್ಮೆಯ ಮಕ್ಕಳಾಗಿದ್ದರು.
 
ch
 

 
ಪುಟ್ಟ ಕೂಸನ್ನು ಕಾಡಿಗಟ್ಟುವುದೆ ?
 

 
ಹೀಗಿರಲು ಒಮ್ಮೆ ಅಕಸ್ಮಾತ್ತಾಗಿ ವಿಶ್ವಾಮಿತ್ರಮುನಿಯು ರಾಜಸಭೆಯಲ್ಲಿ
ಕಾಣಿಸಿಕೊಂಡನು. ಬಂದ ಮುನಿಗೆ ಆಸನ ಕೊಟ್ಟು ಉಪಚರಿಸಿದ ರಾಜ
ವಿಷಯವನ್ನು ಪ್ರಸ್ತಾಪಿಸಿದನು;
 

 
"ಭಗವದ್ಭಕ್ತರಾದ ನೀವು ಪರಿಪೂರ್ಣರು. ಆದರೂ ನಾವು ನಮ್ಮ ಒಳಿತಿ
ಗಾಗಿ ನಿಮ್ಮ ಕೋರಿಕೆಯನ್ನು ಪೂರಯಿಸು- ವೆವು. ನೀವು ಸೂರ್ಯನಂತೆ ಲೋಕ
ವನ್ನು ಬೆಳಗಿಸಲು ತಿರುಗುತ್ತಿರುವ ತೇಜಃಪುಂಜಗಳು. ತಾವು ಬಂದ ಉದ್ದೇಶ
ವನ್ನು ಅಪ್ಪಣೆ ಕೊಡಬೇಕು. "
 

 
ರಾಜನ ಮಾತನ್ನಾಲಿಸಿದ ಮಹರ್ಷಿ ಬಂದ ಉದ್ದೇಶವನ್ನು ತಿಳಿಸಿದನು.
"ರಾಜನ್, ಮಹಾತ್ಮನಾದ ನಿನ್ನ ಬಾಯಿಂದ ಇಂಥ ಮಾತುಗಳೇ
ಬಂದಾವು. ಸೌಜನ್ಯ, ದೊಡ್ಡಸ್ತಿಕೆಯ ಗುಣ, ಆದಿರಲಿ. ಇಬ್ಬರು ರಕ್ಕಸರು
ನನ್ನ ಯಜ್ಞಕ್ಕೆ ತಡೆಯಾಗಿದ್ದಾರೆ. ನಾನು ಯಜ್ಞರಕ್ಷಣೆಯನ್ನು ನಿನ್ನಿಂದ ಬಯ
ಸುತ್ತೇನೆ. ರುದ್ರನ ವರದಿಂದ ಅವರು ಅವನ್ಯರಾಗಿಧ್ಯರಾಗಿ- ದ್ದಾರೆ. ನೀರಿಗೆಸೆದ ಬೆಂಕಿಯ
ಕೊಳ್ಳಿಯಂತೆ ನನ್ನ ಶಾಪ ಕೂಡ ಅವರಲ್ಲಿ ಫಲಿಸದಾಗಿದೆ. ಈ ಪೀಡೆಯನ್ನು
ನಿನ್ನ ಮಗ ರಾಮಚಂದ್ರ ತೊಲಗಿಸಬೇಕು. ಅವನನ್ನು ನನ್ನೊಡನೆ ಕಳುಹಿಸಿ
ಕೊಡು, ನಿನಗೆ ಮಂಗಳವಾಗುವುದು, ನಿನ್ನ ಕುಮಾರನ ತೇಜಸ್ಸನ್ನು ವೇದಗಳೂ

ಕೊಂಡಾಡುತ್ತಿವೆ. ಅವನೆದುರು ದೈತ್ಯರೂ ದೇವತೆಗಳೂ ಮಣಿಯುತ್ತಿದ್ದಾರೆ.
ಅದು ನನಗೆ ಗೊತ್ತು, ನಿನ್ನವರಾದ ವಸಿಷ್ಠಾದಿಗಳಿಗೂ ಗೊತ್ತು.
 
"
 
ಮಹರ್ಷಿಯ ವಚನದಿಂದ ರಾಜನಿಗೆ ದಿಗಿಲಾಯಿತು. ಮಗನ ವಿರಹದ
ಯೋಚನೆಯೇ ಅಸಹ್ಯವಾಗಿ ಕಂಡಿತು. ದೀನನಾದ ರಾಜ, ಮುನಿಯೆದುರು
ದೈನ್ಯದ ಮಾತನ್ನೇ ನುಡಿದ.
 

 
" ಓ ಮಹರ್ಷಿಯ, ಸುಖದಲ್ಲಿ ಬೆಳೆದ ನ್ನ ಕಂದನನ್ನು ಕೊಂಡೊಯ್ಯ
ಬೇಡ, ಅವನು ಅಸ್ತ್ರ ಪಾಟವವನ್ನು <error>ಎದ </error> <fix>ಅರಿಯದ</fix>ಕೂಸು. ಯುದ್ಧದಲ್ಲಿ ಇನ್ನೂ