This page has been fully proofread once and needs a second look.

ಸಂಗ್ರಹರಾಮಾಯಣ
 
ವಾಯಿತು. ಸಜ್ಜನರ ಹೃದಯ ಅರಳಿತು. ದುರ್ಜನರ ಮನಸ್ಸು ಮುದುಡಿತು.
ದೇವತೆಗಳ ಕುಸುಮವೃಷ್ಟಿ ಅಯೋಧ್ಯೆಯನ್ನು ಮುಸುಕಿತು.
 

 
ಸೂರ್ಯನು ಕರ್ಕಾಟಕಕ್ಕೆ ಬಂದಾಗ, ಆಷಾಢಮಾಸದಲ್ಲಿ, ಆಶ್ಲೇಷಾ
ನಕ್ಷತ್ರದಲ್ಲಿ, ಹರಿಯ ಹಾಸುಗೆಯಾದ ಶೇಷನು, ಸುಮಿತ್ರೆಯ ಮಗನಾಗಿ ಜನಿಸಿ
ದನು.
 
ದನು.
 
ಪುಷ್ಯ ನಕ್ಷತ್ರದಲ್ಲಿ ಕೈಕೇಯಿಯು ಹರಿಯ ಚಕ್ರಾಯುಧವನ್ನೇ ಮಗನ
ನ್ನಾಗಿ ಪಡೆದಳು; ಹರಿಯ ಶಂಖರೂಪನಾದ ಅನಿರುದ್ಧನು ಸುಮಿತ್ರೆಯ ಎರಡ
ನೆಯ ಮಗನಾಗಿ ಜನಿಸಿದನು. ವಾಸುದೇವ-ಸಂಕರ್ಷಣ-ಪ್ರದ್ಯುಮ್-ಅನಿ
ರುದ್ಧ ಎಂಬ ಶ್ರೀಹರಿಯ ನಾಲ್ಕು ರೂಪ- ಗಳಲ್ಲಿ ವಾಸುದೇವನೇ ರಾಮನಾದನು,
ಲಕ್ಷ್ಮಣ-ಭರತ-ಶತ್ರುಘ್ನರಲ್ಲಿ ಉಳಿದ ಮೂರು ರೂಪಗಳ ಸನ್ನಿಧಾನವಿತ್ತು,
ಎಂದು ಬಲ್ಲವರ ಮತ. ರಾಜನಿಗೆ ಮಕ್ಕಳಾದುವು ಬಡವ- ನಿಗೆ ನಿಧಿ ದೊರೆ
ತಂತಾಯಿತು. ಅಯೋಧ್ಯೆಯ ಮನೆಮನೆ- ಯಲ್ಲೂ ಈ ಸಂತಸದ ವಾರ್ತೆ
ಜನರನ್ನು ಪುಲಕಿತ- ಗೊಳಿಸಿತು. ಗಂಡಸರೂ-ಹೆಂಗಸರೂ-ಎಲ್ಲ ಪುರಜನರೂ

ಆನಂದದಿಂದ ಮತ್ತರಾಗಿ ಹಾಡಿದರು, ನಲಿದಾಡಿದರು.
 

 
ರಾಜನು ಪುರೋಹಿತರಿಂದ ಮಕ್ಕಳಿಗೆ ಜಾತಕರ್ಮ ಮಾಡಿಸಿದನು.
ನಾಮಕರಣವೂ ನಡೆಯಿತು. ಮೊದಲನೆಯ ಕುಮಾರನಿಗೆ ರಾಮನೆಂದು ಹೆಸ
ರಿಟ್ಟರು. ಆತ್ಮಾರಾಮನಾದ ಹರಿಗೆ ಒಪ್ಪಾದ ಹೆಸರಲ್ಲವೆ ? ರಾಜ್ಯದ ರಮಣಿ
ಯರ ಮನವನ್ನು ಸೆಳೆದ ಈ ಕೂಸನ್ನು 'ರಾಮ' ಎಂದು ಕರೆವುದೇ ಚೆನ್ನಲ್ಲವೆ ?
 

 
ಸುಮಿತ್ರೆಯ ಮೊದಲ ಮಗನಿಗೆ ಲಕ್ಷ್ಮಣನೆಂದು ಹೆಸರಿ- ಟ್ಟರು . ಸಾಧುಗಳ
ಲಕ್ಷಣದಿಂದ ಕೂಡಿದ ಈ ಕುಮಾರನಿಗೆ ಅನ್ವರ್ಥವಾದ ಹೆಸರಲ್ಲವೆ ಇದು
?
ಶತ್ರುಮರ್ದನನಾದ ಪಾಂಚಜನ್ಯನು ಇಲ್ಲಿ ಶತ್ರುಘ್ನನಾದ. ಕೈಕೇಯಿಯ ಮಗ
ನನ್ನು ಭರತನೆಂದು ಕರೆದರು. ಗರ್ಭದಿಂದ ಹೊಮ್ಮುವಾಗಲೇ ರಾಮಚಂದ್ರನ
ಮೇಲೆ ಭಕ್ತಿಭರಿತನಾದ ಇವನಿಗೆ ಈ ಹೆಸರು ಸಾರ್ಥಕವಾಯಿತು.
 

 
ನಾಲ್ವರೂ ದೇವಸೇನಾನಿ ಸ್ಕಂದನಂತೆ ಮುದ್ದಾಗಿ ಬೆಳೆದರು. ಸಕಾಲ
ದಲ್ಲಿ ಉಪನಯನವನ್ನು ಪಡೆದ ಈ ಸೋದರರು, ವೇದ-ವೇದಾಂಗಗಳಲ್ಲೂ,
ಅಸ್ತ್ರ-ಶಸ್ತ್ರ ವಿದ್ಯೆಯಲ್ಲಿ- ಯಲ್ಲೂ ಪಾರಂಗತರಾದರು. ಆಟ ಪಾಟಗಳಲ್ಲೆಲ್ಲ ರಾಮ- ಲಕ್ಷ್ಮಣ
...
ರದು ಒಂದು ಜತೆಯಾದರೆ, ಭರತಶತ್ರುಘ್ನರದೇ ಇನ್ನೊಂದು ಜತೆ.