2023-03-17 08:47:44 by jayusudindra
This page has been fully proofread once and needs a second look.
CO
ಮಿಂಚಿನಬಳ್ಳಿ
ಅವನ ಸೇವೆಗೆ ಅಣಿಯಾಗಿರಿ, ಮಂಗಗಳಾಗಿ-ಕರಡಿಗಳಾಗಿ ನೀವು ಜನಿಸ
ಬೇಕು, ಯಮಧರ್ಮರಾಜನು ಮೊದಲೇ ನನ್ನ ಮುಖದಿಂದ ಜಾಂಬವಂತ
ನಾಗಿ ಹುಟ್ಟಿದ್ದಾನೆ."
ಬ್ರಹ್ಮನ ಆಣತಿಯಂತೆ ದೇವತೆಗಳು ವಿವಿಧ ರೂಪದಿಂದ ಭೂಮಿಗಿಳಿದು
ಬಂದರು. ಹರಿಭಕ್ತರಲ್ಲಿ ಅಗ್ರಗಣ್ಯನೂ ಜೀವೋತ್ತಮನೂ ಆದ ಮುಖ್ಯ
ಪ್ರಾಣನು ಹನುಮಂತ- ನಾದನು. ಇಂದ್ರನು ವಾಲಿಯಾದರೆ, ಚಂದ್ರನು ಅವನ
ಮಗ ಅಂಗದನಾಗಿ ಜನಿಸಿದ. ಸೂರ್ಯದೇವನು ಸುಗ್ರೀವ- ನಾದನು. ಅಗ್ನಿ,
ದೇವ ನೀಲನೆಂಬ ಕಸಿಪಿಯಾದನು. ವರುಣನೂ ವಿಶ್ವಕರ್ಮನೂ ಸುಷೇಣ-
ಅನಲರಾಗಿ ಜನಿಸಿದರು. ಅಶ್ವಿನೀಕುಮಾರರು ಮೈಂದ -ವಿವಿದರಾದರು. ಪ್ರಾಣ-
ಅಪಾನ-ವ್ಯಾನ-ಉದಾನ-ಸಮಾನರು, ಗಜ-ಗವಾಕ್ಷ-ಗವಯ-ವೃಷ-ಗಂಧ
ಮಾದನರಾದರು. ಪನಸನೂ ಶತಬಲಿಯೂ ವಸ್ವಂಶ ಸಂಭೂತರು. ಮರುತ್ತು
ಗಳಲ್ಲಿ ಇಬ್ಬರು ಶ್ವೇತ-ಸಂಪಾತಿಗಳಾದರು. ಬೃಹಸ್ಪತ್ಯಾಚಾರ್ಯರೇ ತಾರನಾಗಿ
ಜನಿಸಿದರು. ಮಹೇಂದ್ರನ ಪಟ್ಟದರಸಿ ಶಚಿಯೇ ತಾರೆಯಾದಳು. ಕುಬೇರನು
ಕತ್ರ ಕತ್ಥನನಾಗಿಯೂ ನಿರ್ಋತಿಯು ದುರ್ಮುಖನಾಗಿಯೂ ಜನಿಸಿದರು.
ಆಂಜನೇಯನ ತಂದೆಯಾದ ಕೇಸರಿ ಕೂಡ ವಾಯ್ಸಂವಂಶಸಂಭೂತನೇ. ಸಪರ್ಜನ್ಯದೇವನೇ
ಆಂಜ
ಶರಭನಾದನು.
ಹೀಗೆಯೇ ಋಷಿಗಳೂ ಗಂಧರ್ವರೂ ಸಿದ್ಧರೂ ಶ್ರೀಹರಿ- ಸೇವೆಗೆ ಬದ್ಧ
ಕಂಕಣರಾಗಿ ಕಾಡುಕಪಿಗಳಾಗಿ ಭೂಮಿ- ಯಲ್ಲೆಲ್ಲಿಲ ಜನಿಸಿದರು. ಈ ಕಪಿಗಳೇನು
ಸಾಮಾನ್ಯರೆ ! ಸಿಟ್ಟುಗೊಂಡಾಗ ಭೂಮಿಯನ್ನೇ ಭೇದಿಸಿಯಾರು ! ಪರ್ವತ
ಗಳನ್ನೇ ನೆಗೆದಾರು ! ಸಾವಿರಾರು ಆನೆಗಳ ಬಲ ಒಬ್ಬೊಬ್ಬ ಕಪಿಗೆ, ಉಗುರನ್ನ
ಲ್ಲದೆ ಇನ್ನೊಂದಾಯುಧ- ವನ್ನು ಅವರು ಬಳಸಿದುದಿಲ್ಲ.
ಇತ್ತ ವೈವಸ್ವತ ಮನ್ವಂತರದ ತ್ರೇತಾಯುಗದ ಒಂದು ಉತ್ತರಾಯಣ
ದಲ್ಲಿ, ಚೈತ್ರಶುದ್ಧ ನವಮಿಯ ದಿನ ಹಗಲು- ಹೊತ್ತು, ಪುನರ್ವಸು ನಕ್ಷತ್ರದಲ್ಲಿ,
ಗುರು ಚಂದ್ರರ ಉದಯವಾದಾಗ, ಕರ್ಕಾಟಕಲಗ್ನದಲ್ಲಿ ಸೂರ್ಯನು ಮೇಷ
ರಾಶಿಯಲ್ಲಿದ್ದಾಗ, ಅಂಗಾರಕ, ಬುಧ, ಗುರು, ಶುಕ್ರ, ಶನಿ, ಈ ಐದು ಗ್ರಹಗಳು
ಕ್ರಮವಾಗಿ ತಮಗೆ ಉಚ್ಚಸ್ಥಾನ- ವಾದ ಮಕರ, ಕನ್ಯಾ, ಕರ್ಕಾಟಕ, ಮೀನ,
ತುಲಾ ರಾಶಿ- ಯಲ್ಲಿದ್ದಾಗ ಕೌಸಲೈಲ್ಯೆಯ ಗರ್ಭದಿಂದ ಪರತತ್ವದ ಆವಿರ್ಭಾವ