This page has not been fully proofread.

CO
 
ಮಿಂಚಿನಬಳ್ಳಿ
 
ಅವನ ಸೇವೆಗೆ ಅಣಿಯಾಗಿರಿ, ಮಂಗಗಳಾಗಿ-ಕರಡಿಗಳಾಗಿ ನೀವು ಜನಿಸ
ಬೇಕು, ಯಮಧರ್ಮರಾಜನು ಮೊದಲೇ ನನ್ನ ಮುಖದಿಂದ ಜಾಂಬವಂತ
ನಾಗಿ ಹುಟ್ಟಿದ್ದಾನೆ."
 
ಬ್ರಹ್ಮನ ಆಣತಿಯಂತೆ ದೇವತೆಗಳು ವಿವಿಧ ರೂಪದಿಂದ ಭೂಮಿಗಿಳಿದು
ಬಂದರು. ಹರಿಭಕ್ತರಲ್ಲಿ ಅಗ್ರಗಣ್ಯನೂ ಜೀವೋತ್ತಮನೂ ಆದ ಮುಖ್ಯ
ಪ್ರಾಣನು ಹನುಮಂತನಾದನು. ಇಂದ್ರನು ವಾಲಿಯಾದರೆ, ಚಂದ್ರನು ಅವನ
ಮಗ ಅಂಗದನಾಗಿ ಜನಿಸಿದ. ಸೂರ್ಯದೇವನು ಸುಗ್ರೀವನಾದನು. ಅಗ್ನಿ,
ದೇವ ನೀಲನೆಂಬ ಕಸಿಯಾದನು. ವರುಣನೂ ವಿಶ್ವಕರ್ಮನೂ ಸುಷೇಣ-
ಅನಲರಾಗಿ ಜನಿಸಿದರು. ಅಶ್ವಿನೀಕುಮಾರರು ಮೈಂದ ವಿವಿದರಾದರು. ಪ್ರಾಣ-
ಅಪಾನ-ವ್ಯಾನ-ಉದಾನ-ಸಮಾನರು, ಗಜ-ಗವಾಕ್ಷ-ಗವಯ-ವೃಷ-ಗಂಧ
ಮಾದನರಾದರು. ಪನಸನೂ ಶತಬಲಿಯೂ ವಸ್ವಂಶ ಸಂಭೂತರು. ಮರುತ್ತು
ಗಳಲ್ಲಿ ಇಬ್ಬರು ಶ್ವೇತ-ಸಂಪಾತಿಗಳಾದರು. ಬೃಹಸ್ಪತ್ಯಾಚಾರ್ಯರೇ ತಾರನಾಗಿ
ಜನಿಸಿದರು. ಮಹೇಂದ್ರನ ಪಟ್ಟದರಸಿ ಶಚಿಯೇ ತಾರೆಯಾದಳು. ಕುಬೇರನು
ಕತ್ರನನಾಗಿಯೂ ನಿರ್ಋತಿಯು ದುರ್ಮುಖನಾಗಿಯೂ ಜನಿಸಿದರು.
ನೇಯನ ತಂದೆಯಾದ ಕೇಸರಿ ಕೂಡ ವಾಯ್ಸಂಶಸಂಭೂತನೇ. ಸರ್ಜನ್ಯದೇವನೇ
 
ಆಂಜ
 
ಶರಭನಾದನು.
 
ಹೀಗೆಯೇ ಋಷಿಗಳೂ ಗಂಧರ್ವರೂ ಸಿದ್ಧರೂ ಶ್ರೀಹರಿಸೇವೆಗೆ ಬದ್ಧ
ಕಂಕಣರಾಗಿ ಕಾಡುಕಪಿಗಳಾಗಿ ಭೂಮಿಯಲ್ಲೆಲ್ಲಿ ಜನಿಸಿದರು. ಈ ಕಪಿಗಳೇನು
ಸಾಮಾನ್ಯರೆ ! ಸಿಟ್ಟುಗೊಂಡಾಗ ಭೂಮಿಯನ್ನೇ ಭೇದಿಸಿಯಾರು ! ಪರ್ವತ
ಗಳನ್ನೇ ನೆಗೆದಾರು ! ಸಾವಿರಾರು ಆನೆಗಳ ಬಲ ಒಬ್ಬೊಬ್ಬ ಕಪಿಗೆ, ಉಗುರನ್ನ
ಲ್ಲದೆ ಇನ್ನೊಂದಾಯುಧವನ್ನು ಅವರು ಬಳಸಿದುದಿಲ್ಲ.
 
ಇತ್ತ ವೈವಸ್ವತ ಮನ್ವಂತರದ ತ್ರೇತಾಯುಗದ ಒಂದು ಉತ್ತರಾಯಣ
ದಲ್ಲಿ, ಚೈತ್ರಶುದ್ಧ ನವಮಿಯ ದಿನ ಹಗಲುಹೊತ್ತು, ಪುನರ್ವಸು ನಕ್ಷತ್ರದಲ್ಲಿ,
ಗುರು ಚಂದ್ರರ ಉದಯವಾದಾಗ, ಕರ್ಕಾಟಕಲಗ್ನದಲ್ಲಿ ಸೂರ್ಯನು ಮೇಷ
ರಾಶಿಯಲ್ಲಿದ್ದಾಗ, ಅಂಗಾರಕ, ಬುಧ, ಗುರು, ಶುಕ್ರ, ಶನಿ, ಈ ಐದು ಗ್ರಹಗಳು
ಕ್ರಮವಾಗಿ ತಮಗೆ ಉಚ್ಚಸ್ಥಾನವಾದ ಮಕರ, ಕನ್ಯಾ, ಕರ್ಕಾಟಕ, ಮೀನ,
ತುಲಾ ರಾಶಿಯಲ್ಲಿದ್ದಾಗ ಕೌಸಲೈಯ ಗರ್ಭದಿಂದ ಪರತತ್ವದ ಆವಿರ್ಭಾವ