This page has not been fully proofread.

60800000000000000000000000000009969600
 
ಆಸ್ಥಾನ ವಿದ್ವಾನ್
ಬನ್ನಂಜೆ ಗೋವಿಂದಾಚಾರ್ಯರು
 
ರಾಮಾಯಣದ ಅನುವಾದಕರಾದ ಶ್ರೀ ಬನ್ನಂಜೆ ಗೋವಿಂದಾ.
ಚಾರ್ಯರು ಉಡುಪಿಯ ಪ್ರಸಿದ್ಧ ವಿದ್ವಾಂಸರಾದ ಪಂ. ಬನ್ನಂಜೆ
ನಾರಾಯಣಾಚಾರ್ಯರ ಮಕ್ಕಳು. ದೊಡ್ಡ ವಿದ್ವಾಂಸರು, ಶ್ರೀ ಶ್ರೀ
ಭಂಡಾರಕೇರಿ ಶ್ರೀಪಾದಂಗಳವರಲ್ಲಿ ತತ್ವಜ್ಞಾನವನ್ನು ಅಭ್ಯಸಿಸಿದವರು.
ಮತತ್ರಯಾಚಾರ್ಯರ ಉದ್ಧಂಥಗಳನ್ನು ತುಲನಾತ್ಮಕ ದೃಷ್ಟಿಯಿಂದ
ಅಧಯ್ಯನ ಮಾಡಿದವರು. ತೀಕ ವಿಮರ್ಶಕರು, ಚುರುಕು ಬುದ್ಧಿ -
ಯವರು, ಕವಿಗಳು, ಪತ್ರಿಕಾ ಲೇಖಕರು, ಪುರಾಣಗಳ ವಿಶೇಷ
ಅಭ್ಯಾಸಿಗಳು, ಋಗ್ವಾಷ್ಯವನ್ನು ಕನ್ನಡಿಸಲುಪಕ್ರಮಿಸಿದವರು. ತಂತ್ರ
ಸಾರವನ್ನು ಕನ್ನಡಿಸಿದವರು. ಈಗಾಗಲೇ ತಮ್ಮ ವಿಮರ್ಶಾತ್ಮಕ ಲೇಖ,
ಕವಿತೆಗಳಿಂದ ಕನ್ನಡಿಗರಿಗೆ ಪರಿಚಿತರಾದವರು. ಒಟ್ಟಿನಲ್ಲಿ ಇವರೊಬ್ಬರು
ಸಾಹಿತ್ಯ ಕ್ಷೇತ್ರದಲ್ಲಿ ಕಾಲಿಡುತ್ತಿರುವ ಉಜ್ವಲ ವ್ಯಕ್ತಿಗಳೆಂದು ಹೇಳ
 

 
ಬಹುದು.
 
ಸಂಪಾದಕ
 
00000000000000909990090900000000000001000