2023-03-15 15:36:07 by ambuda-bot
This page has not been fully proofread.
ಮಿಂಚಿನಬಳ್ಳಿ
ಗಾಥೆ ರಾಮಾಯಣಕ್ಕೊಂದು ಸೌಂದರ್ಯ, ಭಕ್ತನಿಂದ ಭಗವಂತ ಬೆಳಗಿದ್ದಾನೆ.
ಭಗವಂತನು ಭಕ್ತಿಗೆ ಮನಸೋತಿದ್ದಾನೆ. ಎಂತಲೇ ರಾಮಚಂದ್ರನು ಇನ್ನೂ
ಮಾರುತಿಯ ಅಂತರಂಗದಲ್ಲಿ ನೆಲಸಿದ್ದಾನೆ. ಮಾರುತಿಯ ವಾಣಿಯಿಂದ ಅವನ
ಗುಣಗಳು ಒಡಮೂಡುತ್ತಿವೆ. ಎಂದ ಮೇಲೆ ಭಗವಂತನು ವೈಕುಂಠಕ್ಕೇರಿದನು
ಎಂದು ಹೇಗನ್ನುವುದು ? ಭಕ್ತಿಯ ಮಹಿಮೆಯನ್ನರಿಯದ ಜನ, ಸಂಸಾರದ
ಬರಡು ಭೋಗದಿಂದ ಕುರುಡಾದ ಜನ ಮಾತ್ರವೆ ಅಂಥ ಮಾತನ್ನಾಡುತ್ತಾರೆ.
೨೫೨
ಭಗವಂತನ ಗುಣಗಾನ ಎಲ್ಲಿ ನಡೆವುದೋ- ಭಗವಂತನ ಭಕ್ತಿ ಎಲ್ಲಿ
ಪಡಿಮೂಡುವುದೋ ಅಲ್ಲಿ ವೈಕುಂಠವಿದೆ; ಅಲ್ಲಿ ಭಗವಂತನಿದ್ದಾನೆ. ಅವನು
ನಮ್ಮೊಳಗಿದ್ದಾನೆ; ಹೊರಗಿದ್ದಾನೆ. ಎಲ್ಲೂ ಇದ್ದಾನೆ; ಎಂದೆಂದಿಗೂ ಇದ್ದಾನೆ.
"ಅಂತರ್ಬಹಿಶ್ಚ ತತ್ಸರ್ವಂ ವ್ಯಾಜ್ಯ ನಾರಾಯಣಃ ಸ್ಥಿತಃ"
ರಾಮಚಂದ್ರನ ಸರ್ವೋಚ್ಚ ಭಕ್ತನಾದ ಮಾರುತಿ ಜಗನ್ಮಾತೆಯ
ಕೊರಳಹಾರವನ್ನು ಪಡೆವ ಭಾಗ್ಯಶಾಲಿಯಾದ ಮಾರುತಿ- ಜಗತ್ಪಾಣನಾದ
ಪವಮಾನನ ಪುತ್ರನಾದ ಮಾರುತಿ ನಮ್ಮನ್ನು ಹರಸಲಿ, ಭಕ್ತಿಪರವಶನಾದ
ಭಗವಂತನ ಕೃಪಾದೃಷ್ಟಿ ನಮ್ಮೆಡೆಗೆ ಹರಿವಂತೆ ಕರುಣಿಸಲಿ. ಆಗ ಬಾಳು
ಕೃತಾರ್ಥವಾಗುತ್ತದೆ.
ರಾಮಚಂದ್ರನ ಚರಿತೆಯನ್ನು ಓದಿದ ಜನ, ಮಾನವೀತೆಯ ಪಕ್ವ ನಿದರ್ಶನ
ಗಳನ್ನು ಅದರಲ್ಲಿ ಕಂಡ ಜನ, ಭಗವಂತನ ಲೀಲಾವಿಭೂತಿಯನ್ನು ಓದಿ ಅನು
ಭವಿಸಿದ ಜನ ಆನಂದಗದ್ಗದಿತವಾಗಿ ಮೈಮರೆತು ನುಡಿಯುತ್ತದೆ: "ಭಗವಂತ
ನಮ್ಮನ್ನು ಹರಸಲಿ."
ಭಗವಂತ ನಮ್ಮನ್ನು ಹರಸಲಿ. ಆಗ ಲೋಕ ಭವ್ಯವಾಗುತ್ತದೆ; ಬಾಳು
ಬಂಗಾರವಾಗುತ್ತದೆ; ಶಾಂತಿಸಮೃದ್ಧವಾಗುತ್ತದೆ. ಮನುಷ್ಯ ಮನುಷ್ಯನಾಗಿ
ಉಳಿಯುತ್ತಾನೆ. ನಮ್ಮ ಪೂರ್ವಿಕರು ಆಡಿದ ಮುತ್ತಿನಂಥ ಮಾತು ಸಾರ್ಥಕ
ವಾಗುತ್ತದೆ. " ಓಂ ಶಾಂತಿಃ ಶಾಂತಿಃ ಶಾಂತಿಃ " !