2023-03-15 15:36:06 by ambuda-bot
This page has not been fully proofread.
ಸಂಗ್ರಹರಾಮಾಯಣ
ಮುಂದೆ ಬ್ರಹ್ಮಾದಿ ದೇವತೆಗಳು; ಹಿಂದೆ ಸಮಸ್ತ ಪುಣ್ಯ ಜೀವಿಗಳು.
ಸುಗ್ರೀವ ಮೊದಲಾದ ಕಪಿಗಳೂ ರಾಮಚಂದ್ರನ ಗುಣವನ್ನು ಹಾಡುತ್ತ ಪಕ್ಕ
ದಲ್ಲಿ ನಡೆದುಬಂದರು. ಭಗವಂತನ ವೈಭವದ ಈ ಮಹಾಪ್ರಸ್ಥಾನವನ್ನು
ಕಂಡು ಮೂರು ಲೋಕವೂ ಆನಂದದಿಂದ ರೋಮಾಂಚಿತವಾಯಿತು.
೨೫೧
ಅಯೋಧ್ಯೆಯಿಂದ ಒಂದೂವರೆ ಯೋಜನ ದೂರ ಸಾಗಿದಾಗ ಸರಯೂ
ನದಿ ಕಾಣಿಸಿಕೊಂಡಿತು. ರಾಮಾಜ್ಞೆಯಂತೆ ಆ ಪುಣ್ಯ ಸಲಿಲದಲ್ಲಿ ಎಲ್ಲರೂ
ಸ್ನಾನಮಾಡಿದರು. ಅಷ್ಟರಲ್ಲಿ ದೇವತೆಗಳು ಕಳಿಸಿಕೊಟ್ಟ ವಿಮಾನಗಳು ಮುಗಿಲಿ
ನಿಂದ ಇಳಿದು ಬಂದವು. ರಾಮಚಂದ್ರನು ಒಂದು ದಿವ್ಯ ವಿಮಾನವನ್ನೇರಿದನು.
ಎಲ್ಲ ಪುಣ್ಯ ಜೀವಿಗಳೂ ದಿವ್ಯ ದೇಹಧಾರಿಗಳಾಗಿ ವಿಮಾನವನ್ನೇರಿದರು.
ಮುಗಿಲಿಗೇರುತ್ತಿರುವ ಭಗವಂತನನ್ನು ಕಂಡು ಬ್ರಹ್ಮಾದಿ ದೇವತೆಗಳು ಶಿರಬಾಗಿ
ಪಂದಿಸಿದರು; ವೇದ-ಮಂತ್ರಗಳಿಂದ ಸ್ತುತಿಸಿದರು.
ಕಪಿರೂಪದಲ್ಲಿ ಅವತರಿಸಿದ ದೇವತೆಗಳು ಮೂಲ ರೂಪವನ್ನು ಸೇರಿ-
ಕೊಂಡರು. ಪುಣ್ಯ ಜೀವಿಗಳು ಪರಮಪದವನ್ನು ಪಡೆದರು. ಭಗವಂತನ
ಲೀಲಾಮಾನುಷರೂಪ ಶೇಷಶಾಯಿಯಾದ ಮೂಲ ರೂಪದೊಡನೆ ಸೇರಿ-
ಕೊಂಡಿತು. ಮುನಿಗಳು ಮನದಲ್ಲಿ ಅಂದುಕೊಂಡರು. "ಪೂರ್ಣಮದಃ
ಪೂರ್ಣಮಿದಮ್."
ಭಗವಂತನು ನಮ್ಮನ್ನು ಹರಸಲಿ
ಒಂದು ದೃಷ್ಟಿಯಿಂದ ರಾಮಚಂದ್ರನ ಚರಿತೆ ಇಲ್ಲಿಗೆ ಮುಗಿಯಿತು. ಆದರೆ
ಪೂರ್ತ ಹಾಗನ್ನಲೂ ಬರುವುದಿಲ್ಲ. ರಾಮಚರಿತೆಯ ಜೀವನಾಡಿಯಾದ,
ರಾಮಾಯಣದ ಮಹಾವೀರನಾದ ಹನುಮಂತನೊಡನೆ ಅದು ಇನ್ನೂ ಮುಂದು
ವರಿಯುತ್ತಿದೆ ಎಂದು ಬಲ್ಲವರು ಹೇಳುತ್ತಾರೆ. ಹನುಮಂತನು ಕಿಂಪುರುಷ
ಖಂಡದಲ್ಲಿ ರಾಮಚರಿತವನ್ನು ಶತಕೋಟಿ ವಿಸ್ತಾರವಾಗಿ ಹಾಡುತ್ತಿದ್ದಾನೆ.
ಚಿರಂಜೀವಿಯಾದ ಮಾರುತಿಯೊಡನೆ ರಾಮಚರಿತೆಯೂ ಚಿರಂಜೀವಿಯಾಗಿದೆ.
ರಾಮಾಯಣದಲ್ಲಿ ಮಾರುತಿಯ ಪಾತ್ರ ಅಪೂರ್ವವಾದುದು; ಅವನು
ತೋರಿದ ಸಾಹಸ ಅಸದೃಶವಾದುದು. ಮಾರುತಿಯ ಚರಿತೆಯನ್ನೆ ಬಿತ್ತರಿಸುವ
ಕಾಂಡವನ್ನು ವಾಲ್ಮೀಕಿ ಸುಂದರಕಾಂಡವೆಂದು ಕರೆದನು. ಮಾರುತಿಯ ವೀರ