This page has been fully proofread once and needs a second look.

ಮಿಂಚಿನಬಳ್ಳಿ
 
ರಾಮನ ಆಜ್ಞೆಯನ್ನು ಮೀರುವುದು ಯಾರಿಗೆ ಸಾಧ್ಯ? ವಿಭೀಷಣ
ಲಂಕೆಗೆ ಮರಳಿದನು; ಜತೆಗೆ ಅಂತರಂಗದಲ್ಲಿ ರಾಮ- ಚಂದ್ರನನ್ನೂ ಹೊತ್ತು
ತಂದನು.
 
580
 

 
ಎಲ್ಲ ಭಗವದ್ಭಕ್ತರೂ ಮಹಾಯಾನಕ್ಕೆ ಸಿದ್ಧರಾಗಿ ರಾಮಚಂದ್ರನನ್ನು
ನನ್ನುಸುತ್ತುವರಿದರು. ಭಗವಂತನ ಸನ್ನಿಧಾನದಿಂದ ಭಕ್ತರು ನಿರ್ಲಿಪ್ತರಾದರು.
 

 
ಮಹಾಪ್ರಸ್ಥಾನ
 

 
ಪವನತನಯ ಹನುಮಂತನು ಸಭೆಯಲ್ಲಿ ತೆಪ್ಪಗೆ ಕುಳಿತಿ- ದ್ದುದು ರಾಮ-
ಚಂದ್ರನ ಕಣ್ಣಿಗೆ ಬಿತ್ತು. ಅವನು ತತ್ ಕ್ಷಣ ಹನುಮಂತನ ಬಳಿಸಾರಿ ಅವನನ್ನು
ಬಿಗಿದಪ್ಪಿ ಸಂತೈಸಿದನು:
 

 
"
ಚಿರಜೀವಿಯಾದ ಹನುಮಂತನೆ, ನೀನು ನನಗೆ ಪರಮ ಪ್ರಿಯನು, ನಿನ್ನ
ಯಶಸ್ಸನ್ನು ದೇವ ಗಂಧರ್ವರು ಹಾಡಿ ಕೊಂಡಾ- ಡುತ್ತಾರೆ. ನನ್ನ ಲೀಲಾವಿಗ್ರಹ
ನಿನ್ನ ಕಣ್ಣಿನಿಂದ ಎಂದೂ ಮರೆ- ಯಾಗುವುದಿಲ್ಲ. ನೀನು ಬಯಸಿದ್ದು ನಿನಗೆ
ದೊರಕುವುದು."
 

 
ಹನುಮಂತನು ಕೈ ಮುಗಿದು ಗಂಭೀರವಾಣಿಯಿಂದ ವಿನಂತಿಸಿಕೊಂಡನು.

 
"ರಾಮಚಂದ್ರ, ನಿನ್ನ ಮೇಲಣ ನನ್ನ ಭಕ್ತಿ ಅನವರತವೂ ಬೆಳೆಯುತ್ತಿರಲಿ,
ಅದೊಂದೇ ನನಗೆ ಸಂತಸದ ವಿಷಯ. ನಾನು ಬಯಸುವುದು ಅದೊಂದನ್ನೆ
. ಮಾತು-ಮೈಮನಗಳಿಂದ ನಿನಗೆ ಎಂದೆಂದೂ ನನ್ನ ಪ್ರಣಾಮಗಳು."
 

 
ರಾಮಚಂದ್ರನು 'ತಥಾಸ್ತು' ಎಂದು ಹನುಮಂತನನ್ನು ಹರಸಿದನು.
ಮೂಡಣಬಾನಿನಲ್ಲಿ ಭಾನುದೇವನ ಹೊಂಬೆಳಕು ಹರಿಯಿತು. ರಾಮ-
ಚಂದ್ರನು ಸಮಸ್ತ ಪೌರಜಾನಪದರೊಡನೆ ಅಯೋಧ್ಯೆಯನ್ನು ಬಿಟ್ಟು ತೆರಳಿದನು.
ಭಗವನ್ಮಾಯೆಯನ್ನು ತೊಡೆದುಹಾಕಲು ಅಸಮರ್ಥರಾದ ಕೆಲ ಭವಿಗಳು ಮಾತ್ರ

ಭೂಮಿಯಲ್ಲಿ ಉಳಿದುಕೊಂಡರು.
 

 
ಪರಮಸುಂದರನಾದ ರಾಮಚಂದ್ರ ಮುಂದಿನಿಂದ ನಡೆದನು. ಸೀತಾ-
ಮಾತೆ, ಶ್ರೀ-ಹ್ರೀ ಎಂಬ ಎರಡು ರೂಪಗಳಿಂದ ಪಕ್ಕದಲ್ಲಿ ಚಾಮರ ಬೀಸುತ್ತ
ನಡೆವುದನ್ನು ಜನರು ಕಣ್ಣಾರೆ ಕಂಡರು ! ಚಂದ್ರಮಂಡಲವನ್ನು ನಾಚಿಸುವ
ಬೆಳ್ಕೊಡೆಯನ್ನು ಹನುಮಂತ ನು ಹಿಡಿದನು. ಶಂಖ-ಚಕ್ರಾತ್ಮಕರಾದ ಶತ್ರುಘ್ನ
-ಭರತರು ಎಡಬಲಗಳಲ್ಲಿ ಶಂಖ-ಚಕ್ರಧಾರಿಗಳಾಗಿ ಸಾಗಿದರು.