This page has been fully proofread once and needs a second look.

೨೪೯
 
ಸಂಗ್ರಹರಾಮಾಯಣ
 
ಭಗವಂತನನ್ನು ನೆನೆದು ಯೋಗಬಲದಿಂದ ತನ್ನ ಮೂಲ ರೂಪವನ್ನು ಪಡೆ
ದನು. ಲಕ್ಷ್ಮಣನು ಹರಿಯ ಹಾಸುಗೆಯಾಗಿ ಹರಿದುಕೊಂಡು ಹೋದನು.
 

 
ಇತ್ತ ರಾಮಚಂದ್ರನು ಊರೆಲ್ಲ ಘೋಷಿಸಿದನು :
 

 
"ಯಾರಿಗಾದರೂ ಪರಮ ಪದವಿಯಾದ ಮೋಕ್ಷವನ್ನು ಪಡೆವ ಬಯಕೆ
ಯಿದ್ದರೆ ಅವರು ನನ್ಮ್ಮಜತೆ ಬರಬಹುದು."
 

 
ಕೈವಲ್ಯನಾಥನಾದ ಶ್ರೀ ಹರಿಯೇ 'ಕೈವಲ್ಯಕ್ಕೆ ಬನ್ನಿ' ಎಂದು ಕರೆದಾಗ
ಯಾರು ಬೇಡವೆಂದಾರು ? ಸಂಸಾರದಲ್ಲಿ ತೊಳಲುವು- ದನ್ನೆ ಹಣೆಯಲ್ಲಿ ಬರೆದು
ಕೊಂಡು ಬಂದವರ ಹೊರತು ಉಳಿದ- ವರೆಲ್ಲ ಭಗವಂತನೊಡನೆ ಮಹಾ-
ಯಾನಕ್ಕೆ ಅನುವಾದರು.
 

 
ರಾಮಚಂದ್ರನು ಕುಶನನ್ನು ಕೋಸಲೆಯ ಸಿಂಹಾಸನದಲ್ಲಿ ಕುಳ್ಳಿರಿಸಿ-
ದನು. ಲವ ಯುವರಾಜನಾದನು. ಕುಶಾವತಿಯಲ್ಲಿ ಕುಶನಿಗೂ, ಶ್ರಾವಸ್ತಿ
ಯಲ್ಲಿ ಲವನಿಗೂ ಪ್ರತ್ಯೇಕ ಸೇನಾಬಲ, ಕೋಶಬಲಗಳು ರಚಿತವಾದವು. ಬಿಲ್ಲು
ವಿದ್ಯೆಯನ್ನು ಬಲ್ಲವರೂ ಶಾಸ್ತ್ರಜ್ಞರೂ ಧಾರ್ಮಿಕರೂ ಆದ ಕುಶ-ಲವರು
ರಾಮರಾಜ್ಯದ ಉತ್ತರಾಧಿಕಾರಿಗಳಾದರು.
 

 
ರಾಮಚಂದ್ರನ ಮಹಾಪ್ರಸ್ಥಾನದ ವಾರ್ತೆ ಶತ್ರುಘ್ನನಿಗೂ ತಲುಪಿತು.
ಅವನು ಕೂಡಲೆ ತನ್ನ ಇಬ್ಬರು ಮಕ್ಕಳಲ್ಲಿ ಸುಬಾಹು- ವನ್ನು ಮಧುರೆಯಲ್ಲೂ
ಶತ್ರಾ ರುಘಾತಿಯನ್ನು ವೈದಿಶ ಎಂಬಲ್ಲೂ ಪಟ್ಟಗಟ್ಟಿ ತಾನೂ ಅಯೋಧ್ಯೆಗೆ
ತೆರಳಿದನು.
 

 
ಸುಗ್ರೀವನೂ ಅಂಗದನಿಗೆ ಪಟ್ಟಗಟ್ಟಿ ಸಪರಿವಾರನಾಗಿ ರಾಮನ ಬಳಿಗೆ
ಬಂದುಬಿಟ್ಟನು. ಈ ವಾರ್ತೆಯನ್ನು ಕೇಳಿ ವಿಭೀಷಣನೂ ಲಂಕೆಯನ್ನು
ಬಿಟ್ಟೋಡಿ ಬಂದಿದ್ದನು.
 

 
ಆದರೆ ವಿಭೀಷಣನು ರಾಮಚಂದ್ರನ ಜತೆಗೆ ಬರುವಂತಿಲ್ಲ. ಅವನು
ಭೂಮಿಯಲ್ಲಿ ಇದ್ದು ಸೇವೆ ಮಾಡುವುದು ಉಳಿದಿದೆ. ಈ ಮಾತನ್ನು ರಾಮ-
ಚಂದ್ರನೇ ಆಡಿ ತೋರಿಸಿದನು:
 

 
"ವಿಭೀಷಣ, ನೀನು ಕಲ್ಪಾಂತದ ವರೆಗೆ ನನ್ನ ಸೇವೆ ಮಾಡಿ- ಕೊಂಡು
ಭೂಮಿಯಲ್ಲಿ ಇರಬೇಕು. ಲಂಕೆಯನ್ನು ಪಾಲಿಸುತ್ತಿರ- ಬೇಕು. ನನ್ನ ಭಕ್ತಿಗೆ
ಸಾಕ್ಷಿಪುರುಷನಾಗಿ ನೀನು ಚಿರಜೀವಿಯಾಗಿರ- ಬೇಕು."