This page has been fully proofread once and needs a second look.

ಮಿಂಚಿನಬಳ್ಳಿ
 
ಲಕ್ಷ್ಮಣನಿಗೆ ಇದು ಉಭಯಸಂಕಟ. ಮುನಿಯನ್ನು ಒಳಬಿಟ್ಟರೆ ಅಣ್ಣನ
ಕೋಪಕ್ಕೆ ಬಲಿಯಾಗಬೇಕು.
ತಡೆದರೆ ಮುನಿಗಳ ಮುನಿಸಿ ಗೆ ಗುರಿಯಾಗ-
ಬೇಕಾಗುವದು. ಅದೂ ದೂರ್ವಾಸರ ಮುನಿಸು ಕೇಳಬೇಕೆ ? ಆದರೆ ಮುನಿ-
ಗಳನ್ನು ತಡೆದರೆ ಅತಿಥಿಗಳನ್ನು ಸತ್ಕರಿಸಲಿಲ್ಲ ಎಂದು ರಾಮಚಂದ್ರನಿಗೆ ಅಪ
ಯಶಸ್ಸು ಬಂದೀತು. ದುರ್ವಾಸರನ್ನು ಒಳಬಿಡುವುದೇ ಲೇಸು. ರಾಮಚಂದ್ರನ
ಕೋಪವೂ ದಯೆಯ ಹೊನಲಾಗಿ ಹರಿವುದುಂಟು. ಅದನ್ನು ತಡೆದುಕೊಳ್ಳ
ಬಹುದು. ಹೀಗೆ ನಿರ್ಣಯಕ್ಕೆ ಬಂದ ಲಕ್ಷ್ಮಣ ಮುನಿ- ಗಳನ್ನು ಒಳಬಿಟ್ಟನು.
ರಾಮಚಂದ್ರನು ಶಂಕರನೊಡನೆ ಮಾತು ಮುಗಿಸಿ ಎದ್ದು ನಿಂತಾಗ ದುರ್ವಾಸರು
ಕಾಣಿಸಿಕೊಂಡರು.
 

 
ರಾಮಚಂದ್ರನ ಪ್ರಶ್ನಾರ್ಥಕದೃಷ್ಟಿಗೆ ಅತ್ರಿಪುತ್ರರಾದ ದುರ್ವಾಸರ
ಉತ್ತರ ಸಿದ್ಧವಾಗಿತ್ತು:
 

 
"ರಾಮಚಂದ್ರ, ಒಂದುಸಾವಿರ ವರ್ಷಗಳತನಕ ನಿರಾಹಾರ ನಾಗಿ ಆಚರಿ
ಸುತ್ತಿದ್ದ ತಪಸ್ಸನ್ನು ಈಗ ತಾನೇ ಮುಗಿಸಿ ನಿನ್ನ ಬಳಿಗೆ ಬಂದಿದ್ದೇನೆ. ನಾನು
ತುಂಬ ಹಸಿದಿದ್ದೇನೆ. ಈ ಮೊದಲೇ ಅಟ್ಟ ಅನ್ನವನ್ನು ನಾನು ಉಣಲಾರೆ.
ಇನ್ನು ಅಡಿಗೆ ಸಿದ್ಧವಾಗುವತನಕ ಕಾಯುವ ಸಹನೆಯೂ ನನಗಿಲ್ಲ. ಈ ಕ್ಷಣ-
ದಲ್ಲಿ ನನಗೆ ಆಹಾರ ಬೇಕು. ನಾನು ಹಸಿದಿದ್ದೇನೆ. "
 

 
ಮುನಿಯ ಮಾತು ಮುಗಿವ ಮುನ್ನ ರಾಮಚಂದ್ರನು ತನ್ನ ಕರಪಲ್ಲವ
ಗಳಿಂದ ಡ್ರಸಾನ್ನವನ್ನು ಬರಿಸಿ ಕಡುಕೋಪಿ ದುರ್ವಾಸರಿಗೆ ಉಣಿಸಿದನು.
ತೃಪ್ತರಾದ ದುರ್ವಾಸರು ಭಗವಂತ ನನ್ನು ಕೊಂಡಾಡಿದರು :
 

 
"ನೀನಲ್ಲದೆ ಇನ್ನಾರಿಗೆ ಸಾಧ್ಯ ನನ್ನ ಹಸಿವನ್ನು ಇಂಗಿಸಲು ??"

 
ರಾಮಚಂದ್ರನು ಸಭೆಗೆ ಮರಳಿದನು. ಲಕ್ಷ್ಮಣನು ಅಪರಾಧಿ ಗಳಂತೆ
ತಲೆ ತಗ್ಗಿಸಿ ನಿಂತಿದ್ದನು. ಒಬ್ಬನನ್ನು ತ್ಯಜಿಸುವುದು ಕೊಲ್ಲುವುದಕ್ಕೆ ಸಮಾನ
ಎಂದು ಬಲ್ಲವರ ಮತ. ಎಂತಲೇ ರಾಮ ಚಂದ್ರನು ಲಕ್ಷ್ಮಣನನ್ನು ಕರೆದು
ನುಡಿದನು :
 

 
"ಲಕ್ಷ್ಮಣ, ನೀನು ಇಲ್ಲಿಂದ ತೆರಳಬೇಕು. ನಿನ್ನ ಲೋಕವನ್ನು ಹೋಗಿ
 
ಸೇರಬೇಕು."
 

 
ಸೌಮಿತ್ರಿ ಮರುಮಾತನಾಡದೆ ಅಣ್ಣನಿಗೆ ಸುತ್ತುವರಿದು ಕಾಲಿಗೆರ
ಗಿ, ಅರಮನೆಯಿಂದ ದೂರ ನಡೆದನು. ಅಲ್ಲಿಂದ ಸರಯೂ ತೀರಕ್ಕೆ ಬಂದ