This page has not been fully proofread.

ಮಿಂಚಿನಬಳ್ಳಿ
 
ಲಕ್ಷ್ಮಣನಿಗೆ ಇದು ಉಭಯಸಂಕಟ. ಮುನಿಯನ್ನು ಒಳಬಿಟ್ಟರೆ ಅಣ್ಣನ
ಕೋಪಕ್ಕೆ ಬಲಿಯಾಗಬೇಕು.
ತಡೆದರೆ ಮುನಿಗಳ ಮುನಿಸಿಗೆ ಗುರಿಯಾಗ-
ಬೇಕಾಗುವದು. ಅದೂ ದೂರ್ವಾಸರ ಮುನಿಸು ಕೇಳಬೇಕೆ ? ಆದರೆ ಮುನಿ-
ಗಳನ್ನು ತಡೆದರೆ ಅತಿಥಿಗಳನ್ನು ಸತ್ಕರಿಸಲಿಲ್ಲ ಎಂದು ರಾಮಚಂದ್ರನಿಗೆ ಅಪ
ಯಶಸ್ಸು ಬಂದೀತು. ದುರ್ವಾಸರನ್ನು ಒಳಬಿಡುವುದೇ ಲೇಸು. ರಾಮಚಂದ್ರನ
ಕೋಪವೂ ದಯೆಯ ಹೊನಲಾಗಿ ಹರಿವುದುಂಟು. ಅದನ್ನು ತಡೆದುಕೊಳ್ಳ
ಬಹುದು. ಹೀಗೆ ನಿರ್ಣಯಕ್ಕೆ ಬಂದ ಲಕ್ಷ್ಮಣ ಮುನಿಗಳನ್ನು ಒಳಬಿಟ್ಟನು.
ರಾಮಚಂದ್ರನು ಶಂಕರನೊಡನೆ ಮಾತು ಮುಗಿಸಿ ಎದ್ದು ನಿಂತಾಗ ದುರ್ವಾಸರು
ಕಾಣಿಸಿಕೊಂಡರು.
 
ರಾಮಚಂದ್ರನ ಪ್ರಶ್ನಾರ್ಥಕದೃಷ್ಟಿಗೆ ಅತ್ರಿಪುತ್ರರಾದ ದುರ್ವಾಸರ
ಉತ್ತರ ಸಿದ್ಧವಾಗಿತ್ತು:
 
"ರಾಮಚಂದ್ರ, ಒಂದುಸಾವಿರ ವರ್ಷಗಳತನಕ ನಿರಾಹಾರನಾಗಿ ಆಚರಿ
ಸುತ್ತಿದ್ದ ತಪಸ್ಸನ್ನು ಈಗ ತಾನೇ ಮುಗಿಸಿ ನಿನ್ನ ಬಳಿಗೆ ಬಂದಿದ್ದೇನೆ. ನಾನು
ತುಂಬ ಹಸಿದಿದ್ದೇನೆ. ಈ ಮೊದಲೇ ಅಟ್ಟ ಅನ್ನವನ್ನು ನಾನು ಉಣಲಾರೆ.
ಇನ್ನು ಅಡಿಗೆ ಸಿದ್ಧವಾಗುವತನಕ ಕಾಯುವ ಸಹನೆಯೂ ನನಗಿಲ್ಲ. ಈ ಕ್ಷಣ-
ದಲ್ಲಿ ನನಗೆ ಆಹಾರಬೇಕು. ನಾನು ಹಸಿದಿದ್ದೇನೆ. "
 
ಮುನಿಯ ಮಾತು ಮುಗಿವ ಮುನ್ನ ರಾಮಚಂದ್ರನು ತನ್ನ ಕರಪಲ್ಲವ
ಗಳಿಂದ ಪಡ್ರಸಾನ್ನವನ್ನು ಬರಿಸಿ ಕಡುಕೋಪಿ ದುರ್ವಾಸರಿಗೆ ಉಣಿಸಿದನು.
ತೃಪ್ತರಾದ ದುರ್ವಾಸರು ಭಗವಂತನನ್ನು ಕೊಂಡಾಡಿದರು :
 
"ನೀನಲ್ಲದೆ ಇನ್ನಾರಿಗೆ ಸಾಧ್ಯ ನನ್ನ ಹಸಿವನ್ನು ಇಂಗಿಸಲು ??"
ರಾಮಚಂದ್ರನು ಸಭೆಗೆ ಮರಳಿದನು. ಲಕ್ಷ್ಮಣನು ಅಪರಾಧಿಗಳಂತೆ
ತಲೆ ತಗ್ಗಿಸಿ ನಿಂತಿದ್ದನು. ಒಬ್ಬನನ್ನು ತ್ಯಜಿಸುವುದು ಕೊಲ್ಲುವುದಕ್ಕೆ ಸಮಾನ
ಎಂದು ಬಲ್ಲವರ ಮತ. ಎಂತಲೇ ರಾಮಚಂದ್ರನು ಲಕ್ಷ್ಮಣನನ್ನು ಕರೆದು
ನುಡಿದನು :
 
"ಲಕ್ಷಣ, ನೀನು ಇಲ್ಲಿಂದ ತೆರಳಬೇಕು. ನಿನ್ನ ಲೋಕವನ್ನು ಹೋಗಿ
 
ಸೇರಬೇಕು."
 
ಸೌಮಿತ್ರಿ ಮರುಮಾತನಾಡದೆ ಅಣ್ಣನಿಗೆ ಸುತ್ತುವರಿದು ಕಾಲಿಗೆರ
ಅರಮನೆಯಿಂದ ದೂರ ನಡೆದನು. ಅಲ್ಲಿಂದ ಸರಯೂ ತೀರಕ್ಕೆ ಬಂದ