This page has been fully proofread once and needs a second look.

ಸಂಗ್ರಹರಾಮಾಯಣ
 
ರಾಮಚಂದ್ರನು ಪರಿವಾರವನ್ನೆಲ್ಲ ದೂರ ಕಳುಹಿಸಿ ಲಕ್ಷ್ಮಣನಿಗೆ ಆಜ್ಞಾ
ಪಿಸಿದನು :
 

 
"ಲಕ್ಷ್ಮಣ, ನೀನು ಬಾಗಿಲ ಬಳಿ ನಿಂದಿರು. ಯಾರನ್ನೂ ಒಳ

ಬರಗೊಡಬೇಡ, ನಮ್ಮ ಏಕಾಂತವನ್ನು ಭಂಗಮಾಡುವವನು ವಧಕ್ಕೆ ಅರ್ಹ
ನಾಗುತ್ತಾನೆ."
 
೨೪೭
 

 
"ಹಾಗೆಯೇ ಆಗಲಿ" ಎಂದು ಲಕ್ಷ್ಮಣನು ಬಾಗಿಲಲ್ಲಿ ನಿಂತನು.
 

 
ಏಕಾಂತದಲ್ಲಿ ತಾಪಸವೇಷಧಾರಿಯಾದ ಶಂಕರನು ರಾಮ ದೇವನ ಬಳಿ
ಬಂದ ಕಾರ್ಯವನ್ನು ವಿನಂತಿಸಿಕೊಂಡನು :
 

 
"ದೇವ, ದುಷ್ಟ ಸಂಹಾರಕ್ಕಾಗಿ ಮಾನವನಾಗಿ ಅವತರಿಸಿದೆ. ಆ ಕಾರ್
ವನ್ನು ಪೂರೈಸಿಯೂ ಪೂರೈಸಿದೆ. ನೀನು ಇಳೆಗೆ ಬಂದ ಕಾರ್ಯ ಮುಗಿಯಿತು.
ಇನ್ನು ನಿನ್ನ ಲೋಕಕ್ಕೆ ಮರಳಬೇಕು. ಇದು ನಮ್ಮೆಲ್ಲರ ಬಯಕೆ ಮತ್ತು
ಪ್ರಾರ್ಥನೆ. ಭೂಲೋಕವೇ ತಮ್ಮ ಲೋಕವನ್ನು ಮಾಮೀರಿಸುವುದನ್ನು ದೇವತೆ
 
ಗಳು ಸಹಿಸ- ಲಾರರು.
 

 
ನೀನು ಬ್ರಹ್ಮರೂಪನಾಗಿ ಜಗತ್ತನ್ನು ನಿರ್ಮಿಸುವೆ. ನನ್ನಲ್ಲಿ- ದ್ದುಕೊಂಡು
ಸಂಹರಿಸುವೆ. ವಿಷ್ಣು ರೂಪದಿಂದ ಪಾಲಿಸುವೆ. ನಿನ್ನ ಹೊಕ್ಕಳಿನ ತಾವರೆ
ಯಲ್ಲಿ ನಾಲ್ಮೊಗದ ಮಗ ಹುಟ್ಟಿದನು. ಅವನ ಕ್ರೋಧದಿಂದ ಜನಿಸಿದವನು
ನಾನು. ಸಂಬಂಧದಲ್ಲಿ ನಾನು ನಿನ್ನ ಮೊಮ್ಮಗ, ಜಗಕ್ಕೆಲ್ಲ ಚತುರ್ಮುಖನು
ಪಿತಾಮಹ ನಾದರೆ ನನಗೆ ನೀನು ಪ್ರಪಿತಾಮಹ, ಮೊಮ್ಮಗನೆಂಬ ಮಮತೆ
-
ಯಿಂದಲಾದರೂ ನನ್ನ ಮಾತನ್ನು ನಡೆಸಿಕೊಡಬೇಕು. "
 

 
ರಾಮಚಂದ್ರನು ರುದ್ರನನ್ನು ಸಂತೈಸಿದನು:
 

 
"ನೀನಾಡಿದ ಮಾತು ನ್ಯಾಯವೇ ಆಗಿದೆ. ನಿಮ್ಮೆಲ್ಲರ ಬಯಕೆ ಯಂತೆ
ಆದಷ್ಟು ಬೇಗನೆ ನಾನು ನಿಮ್ಮ ಬಳಿಗೆ ಬಂದು ಬಿಡುವೆ. "
 
ರುದ್ರನೇ
 

 
ಒಳಗಡೆ ಹೀಗೆ ಇವರ ಮಂತ್ರಾಲೋಚನೆ ನಡೆಯುತ್ತಿತ್ತು. ಅಷ್ಟರಲ್ಲಿ
ರುದ್ರನೇ ದುರ್ವಾಸಮುನಿಗಳ ರೂಪಿನಿಂದ ಅಂತಃ- ಪುರದ ಬಳಿಗೆ ಬಂದು
" ಈ ಕ್ಷಣವೇ ನನಗೆ ರಾಮನನ್ನು ನೋಡ- ಬೇಕಾಗಿದೆ " ಎಂದು ಸೌಮಿತ್ರಿ
ಯೊಡನೆ ನುಡಿದನು.