This page has not been fully proofread.

ಸಂಗ್ರಹರಾಮಾಯಣ
 
ರಾಮಚಂದ್ರನು ಪರಿವಾರವನ್ನೆಲ್ಲ ದೂರ ಕಳುಹಿಸಿ ಲಕ್ಷ್ಮಣನಿಗೆ ಆಜ್ಞಾ
ಪಿಸಿದನು :
 
"ಲಕ್ಷಣ, ನೀನು ಬಾಗಿಲ ಬಳಿ ನಿಂದಿರು. ಯಾರನ್ನೂ ಒಳ
ಬರಗೊಡಬೇಡ, ನಮ್ಮ ಏಕಾಂತವನ್ನು ಭಂಗಮಾಡುವವನು ವಧಕ್ಕೆ ಅರ್ಹ
ನಾಗುತ್ತಾನೆ."
 
೨೪೭
 
"ಹಾಗೆಯೇ ಆಗಲಿ" ಎಂದು ಲಕ್ಷ್ಮಣನು ಬಾಗಿಲಲ್ಲಿ ನಿಂತನು.
 
ಏಕಾಂತದಲ್ಲಿ ತಾಪಸವೇಷಧಾರಿಯಾದ ಶಂಕರನು ರಾಮದೇವನ ಬಳಿ
ಬಂದ ಕಾರ್ಯವನ್ನು ವಿನಂತಿಸಿಕೊಂಡನು :
 
"ದೇವ, ದುಷ್ಟ ಸಂಹಾರಕ್ಕಾಗಿ ಮಾನವನಾಗಿ ಅವತರಿಸಿದೆ. ಆ ಕಾರ್
ವನ್ನು ಪೂರೈಸಿಯೂ ಪೂರೈಸಿದೆ. ನೀನು ಇಳೆಗೆ ಬಂದ ಕಾರ್ಯ ಮುಗಿಯಿತು.
ಇನ್ನು ನಿನ್ನ ಲೋಕಕ್ಕೆ ಮರಳಬೇಕು. ಇದು ನಮ್ಮೆಲ್ಲರ ಬಯಕೆ ಮತ್ತು
ಪ್ರಾರ್ಥನೆ. ಭೂಲೋಕವೇ ತಮ್ಮ ಲೋಕವನ್ನು ಮಾರಿಸುವುದನ್ನು ದೇವತೆ
 
ಗಳು ಸಹಿಸಲಾರರು.
 
ನೀನು ಬ್ರಹ್ಮರೂಪನಾಗಿ ಜಗತ್ತನ್ನು ನಿರ್ಮಿಸುವೆ. ನನ್ನಲ್ಲಿದ್ದುಕೊಂಡು
ಸಂಹರಿಸುವೆ. ವಿಷ್ಣು ರೂಪದಿಂದ ಪಾಲಿಸುವೆ. ನಿನ್ನ ಹೊಕ್ಕಳಿನ ತಾವರೆ
ಯಲ್ಲಿ ನಾಗದ ಮಗ ಹುಟ್ಟಿದನು. ಅವನ ಕ್ರೋಧದಿಂದ ಜನಿಸಿದವನು
ನಾನು. ಸಂಬಂಧದಲ್ಲಿ ನಾನು ನಿನ್ನ ಮೊಮ್ಮಗ, ಜಗಕ್ಕೆಲ್ಲ ಚತುರ್ಮುಖನು
ಪಿತಾಮಹನಾದರೆ ನನಗೆ ನೀನು ಪ್ರಪಿತಾಮಹ, ಮೊಮ್ಮಗನೆಂಬ ಮಮತೆ
ಯಿಂದಲಾದರೂ ನನ್ನ ಮಾತನ್ನು ನಡೆಸಿಕೊಡಬೇಕು. "
 
ರಾಮಚಂದ್ರನು ರುದ್ರನನ್ನು ಸಂತೈಸಿದನು:
 
"ನೀನಾಡಿದ ಮಾತು ನ್ಯಾಯವೇಆಗಿದೆ. ನಿಮ್ಮೆಲ್ಲರ ಬಯಕೆಯಂತೆ
ಆದಷ್ಟು ಬೇಗನೆ ನಾನು ನಿಮ್ಮ ಬಳಿಗೆ ಬಂದು ಬಿಡುವೆ. "
 
ರುದ್ರನೇ
 
ಒಳಗಡೆ ಹೀಗೆ ಇವರ ಮಂತ್ರಾಲೋಚನೆ ನಡೆಯುತ್ತಿತ್ತು. ಅಷ್ಟರಲ್ಲಿ
ದುರ್ವಾಸಮುನಿಗಳ ರೂಪಿನಿಂದ ಅಂತಃಪುರದ ಬಳಿಗೆ ಬಂದು
" ಈ ಕ್ಷಣವೇ ನನಗೆ ರಾಮನನ್ನು ನೋಡಬೇಕಾಗಿದೆ " ಎಂದು ಸೌಮಿತ್ರಿ
ಯೊಡನೆ ನುಡಿದನು.