This page has not been fully proofread.

ಸಂಗ್ರಹರಾಮಾಯಣ
 
ನಿಂದಲೆ ಆಗುತ್ತಿವೆ. ನಿನ್ನ ಗುಣಗಳನ್ನು ಕೊಂಡಾಡುವ ಯೋಗ್ಯತೆ ನಮಗಿಲ್ಲ.
ಓ ಕರುಣಾಳು ನಾರಾಯಣನೆ, ರಾವಣನೆಂಬ ಬೆಂಕಿ ಜಗತ್ತನ್ನೇ ಸುಡುತ್ತಿದೆ.
ನೀನು ದಾಶರಥಿಯಾಗಿ ಜನಿಸಿ, ನಿನ್ನ ಬೀರದ ತೊರೆಗಳಿಂದ ಆ ಜ್ವಾಲೆಯನ್ನು
ನಂದಿಸಬೇಕಾಗಿದೆ. ನಿನ್ನ ಭಕ್ತರ ಸಂಕಟವನ್ನು ಪರಿಹರಿಸಬೇಕಾಗಿದೆ."
 
ದೇವತೆಗಳಿಂದ ಸ್ತುತನಾದ ನಾರಾಯಣನು ದಿವ್ಯ ರೂಪಧರನಾಗಿ
ಅವರೆದುರು ಮೈದೋರಿದನು.
 
೧೩
 
ದಶರಥನಿಗೆ ಮಕ್ಕಳಾದರು
 
ಶ್ರೀಹರಿಯ ತಿಳಿನಗೆಯ ಬೆಳುದಿಂಗಳೇ ದೇವತೆಗಳನ್ನು ಸಂತೋಷಗೊಳಿ
ಸಿತು. ಆತನ ಮೇಘಗಂಭೀರವಾದ ವಾಣಿ ಅವರ ಭಯವನ್ನು ತೊಲಗಿಸಿತು.
 
"ಓ ದೇವತೆಗಳಿರಾ, ನೀವು ನಿಶ್ಚಿಂತರಾಗಿ ಹಿಂತೆರಳಿರಿ. ರಾವಣನನ್ನು
ಕೊಲ್ಲುವ ಭಾರ ನನ್ನ ಮೇಲಿರಲಿ. ನಿಮ್ಮ ಶತ್ರು ಬದುಕಿಲ್ಲವೆಂದೇ ಬಗೆಯಿರಿ."
 
ಅಮೃತಧಾರೆಯಂತೆ ಮಧುರವಾದ ಮಾತಿನಿಂದ ಸಂತಸಗೊಂಡ ಸಗ್ಗಿಗರು
ಸ್ವರ್ಗಕ್ಕೆ ಮರಳಿದರು. ಇತ್ತ ರಾಜನ ಯಾಗಾಗ್ನಿಯಲ್ಲಿ ಬ್ರಹ್ಮನ ಸನ್ನಿಧಾನ
ವುಳ್ಳ ಒಬ್ಬ ಪುರುಷ, ಹರಿಯ ಅಪ್ಪಣೆಯಂತೆ ಮೂಡಿ ಬಂದನು. ಅವನು
ಕೈಯಲ್ಲಿದ್ದ ಬಂಗಾರದ ಪಾತ್ರೆಗೆ ಪಾಯಸವನ್ನು ತುಂಬಿ ಇದರಿಂದ ಮಕ್ಕಳನ್ನು
ಪಡೆ' ಎಂದು ಅದನ್ನು ರಾಜನಿಗೆ ಕೊಟ್ಟನು. ಅನಂತರ ಅಗ್ನಿಯಲ್ಲಿ ಲೀನವಾ
ದನು. ರಾಜನು ಆ ಪಾಯಸವನ್ನು ಸರಿಯಾಗಿ ಎರಡು ಪಾಲುಮಾಡಿ
ಒಂದನ್ನು ಪಟ್ಟಮಹಿಷಿಯಾದ ಕೌಸಲ್ಯಗೆ ಕೊಟ್ಟನು. ಉಳಿದ ಅರ್ಧಭಾಗ
ವನ್ನು ಇನ್ನೆರಡು ಪಾಲುಮಾಡಿ ಒಂದಂಶವನ್ನು ಸುಮಿತ್ರೆಗೆ ಕೊಟ್ಟು, ಉಳಿದು
ದನ್ನು ಮತ್ತೆ ಎರಡು ಪಾಲುಮಾಡಿ ಅದರಲ್ಲಿ ಒಂದು ಪಾಲನ್ನು ಕೊನೆಯ
ಮಡದಿಯಾದ ಕೈಕೇಯಿಗೂ ಇನ್ನೊಂದು ಪಾಲನ್ನು ಪುನ: ಸುಮಿತ್ರೆಗೂ
ಕೊಟ್ಟನು. ಕ್ರಮೇಣ ರಾಣಿಯರು ಗರ್ಭಿಣಿಯರಾದರು.
 
ಶ್ರೀಹರಿಯ ಅವತಾರ ಕಾಲ ಸನ್ನಿಹಿತವಾದುದನ್ನು ಅರಿತ ಬ್ರಹ್ಮ,
ದೇವತೆಗಳನ್ನು ಕರೆದು ನುಡಿದನು.
 
"ಶ್ರೀಹರಿ ಪೂರ್ಣಕಾಮನು; ಆದರೂ ಭೂಮಿಯಲ್ಲಿ ಅವತರಿಸುವನು-
ಅದು ನಿಮ್ಮ ಇಷ್ಟವನ್ನು ಪೂರಯಿಸುವುದಕ್ಕಾಗಿ, ನೀವೂ ಭೂಮಿಯಲ್ಲಿ ಜನಿಸಿ