This page has been fully proofread once and needs a second look.

ಮಿಂಚಿನಬಳ್ಳಿ
 
ಪಯೋಗಿಸಿದನು. ಮೂರು ಕೋಟಿಯೇನು ? ಮುನ್ನೂರು ಕೋಟಿ ಯೇನು ?
ಕಾಲಾಸ್ತ್ರಕ್ಕೊಂದು ಎಣೆಯೆ ? ಕ್ಷಣಮಾತ್ರದಲ್ಲಿ ಎಲ್ಲ ಗಂಧರ್ವರೂ ಕಾಲಾಸ್ತ್ರಕ್ಕೆ
ಬಲಿಯಾದರು. ರಣರಂಗದಲ್ಲಿ ಮೂರು ಕೋಟಿ ಹೆಣಗಳುರುಳಿದವು. ನರಿ-
ಹದ್ದುಗಳಿಗೆ ಅವುತಣ ದೊರಕಿದಂತಾಯಿತು. ಲೋಕದ ಜನ ಸಂತಸದ
ಉಸಿರನ್ನೆಳೆ- ಯಿತು.
 

 
ಭರತನು ತನ್ನ ಇಬ್ಬರು ಮಕ್ಕಳಲ್ಲಿ ಪುಷ್ಕರನನ್ನು ಪುಷ್ಕರಾ- ವತಿಯಲ್ಲಿ
,ತಕ್ಷನನ್ನು ತಕ್ಷಶಿಲೆಯಲ್ಲಿ ನೆಲೆಗೊಳಿಸಿದನು. ಐದು ವರ್ಷಗಳ ತನಕ ಅವರ
ಜತೆಯಿದ್ದು ಕೊನೆಗೆ ರಾಜ್ಯದ ಸಂಪೂರ್ಣ ಭಾರವನ್ನು ಅವರಿಗೆ ಒಪ್ಪಿಸಿ
ರಾಮಚಂದ್ರನ ಬಳಿಗೆ ತೆರಳಿದನು.
 

 
ಭರತನ ಕಾವ್ರ್ಯವನ್ನು ರಾಮಚಂದ್ರನು ಮೆಚ್ಚಿ ಪ್ರಶಂಸಿಸಿ ದನು. ಹಾಗೆಯೇ
ಲಕ್ಷ್ಮಣನ ಮಕ್ಕಳಿಗೂ ರಾಜ್ಯ ನಿರ್ಮಾಣ- ವಾಯಿತು. ಕಾರುಪಥದಲ್ಲಿ ನಿರ್ಮಿತ
ವಾದ 'ಅಂಗದೀಯ' ಎಂಬ ನಗರದಲ್ಲಿ ಲಕ್ಷ್ಮಣನ ಹಿರಿಯ ಮಗ ಅಂಗದನು
ರಾಜನಾದನು. ಮಲ್ಲಭೂಮಿ ಎಂಬಲ್ಲಿರುವ ಚಂದ್ರಕಾಂತಪುರಿಯಲ್ಲಿ ಎರಡ

ನೆಯ ಕುಮಾರ ಚಂದ್ರಕೇತು ಅರಸನಾದನು. ಅಂಗದನ ಜತೆಗೆ ಲಕ್ಷ್ಮಣನೂ
ಚಂದ್ರಕೇತುವಿನ ಜತೆಗೆ ಭರತನೂ ಒಂದು ವರ್ಷ ನಿಂತರು. ಅನಂತರ ಅವರು
ಮತ್ತೆ ರಾಮನ ಬಳಿಗೆ ತೆರಳಿದರು. ರಾಮಚಂದ್ರನ
ಬಿಟ್ಟಿರುವುದು ಈ ರಾಜಹಂಸಗಳಿಗೆ ಸಾಧ್ಯವೇ ಇಲ್ಲ !
 
ಪಾದಕಮಲವನ್ನು
 

 
 
ಬಂದಕಾರ್ಯ ಮುಗಿಯಿತು
 

 
ಭೂಲೋಕವು ಸೊಗಸಿನಲ್ಲಿ ದೇವಲೋಕವನ್ನು ಮಾಮೀರಿಸಿತು. ದೇವತೆಗಳು
ಚಿಂತೆಗೀಡಾದರು. ಬ್ರಹ್ಮದೇವರು ರುದ್ರನನ್ನು ರಾಮ ಚಂದ್ರನೆಡೆಗೆ ಕಳಿಸಿದರು.
 

 
ಬ್ರಾಹ್ಮಣ ವೇಷಧಾರಿಯಾದ ರುದ್ರನು ರಾಜದ್ವಾರದ ಬಳಿ ಬಂದು
ಲಕ್ಷ್ಮಣನನ್ನು ಕರೆದು ಹೇಳಿದನು: "ಮಹರ್ಷಿಗಳೊಬ್ಬರ ದೂತ ಬಂದಿದ್ದಾನೆ
ಎಂದು ರಾಮಚಂದ್ರನಿಗೆ ಅರುಹು."
 

 
ಲಕ್ಷ್ಮಣನು ರಾಮನಿಗೆ ಅರುಹಿದನು. ರಾಮಚಂದ್ರ ತಾಪಸನನ್ನು ಬರ
ಹೇಳಿದನು. ಒಳಗೆ ಬಂದು ನಿಂತ ತಾಪಸ ರಾಮಚಂದ್ರನೊಡನೆ "ಏಕಾಂತ
ವಾಗಿ ಮಾತನಾಡಬೇಕಾಗಿದೆ' ಎಂದನು.