This page has not been fully proofread.

ಸಂಗ್ರಹರಾಮಾಯಣ
 
ಮೂರು ಕೋಟ ಮೂರ್ಖರು
 
ಅಶ್ವಮೇಧವೊಂದೇ ಏನು ? ಅಗ್ನಿಷ್ಟೋಮ-ವಾಜಪೇಯ ಮುಂತಾದ
ಅನೇಕ ಯಾಗಗಳನ್ನು ರಾಮಚಂದ್ರನು ನೆರವೇರಿಸಿದನು. ಹೀಗೆ ರಾಷ್ಟ್ರ ಧರ್ಮ-
ಮಯವಾಗಿತ್ತು. ಸಂಪದದ ನೆಲೆಯಾಗಿತ್ತು. ವಿಪತ್ತು ಅಲ್ಲಿಗೆ ಸುಳಿಯಲೇ ಇಲ್ಲ.
 
ಕೆಲಕಾಲದಲ್ಲಿ ಕೌಸಲ್ಯ ಮುಂತಾದ ರಾಜಮಾತೆಯರು ಮೃತರಾದರು.
ರಾಮಚಂದ್ರನು ಅವರ ಅಂತ್ಯಕ್ರಿಯೆಯನ್ನು ವಿಜೃಂಭಣೆಯಿಂದ ನೆರವೇರಿಸಿ
ಬ್ರಾಹ್ಮಣರ ಕೈತುಂಬ ದುಡ್ಡು ಸುರಿದನು.
 
ಕೇಕಯ ರಾಜನಾದ ಯುಧಾಜಿತ್ತು ಒಮ್ಮೆ ಗಾರ್ಗ್ಯಮುನಿಗಳನ್ನು
ರಾಮಚಂದ್ರನೆಡೆಗೆ ಕಳಿಕೊಟ್ಟನು. ಗಾರ್ಗ್ಯರು ಯುಧಾಜಿತ್ತು ಕೊಟ್ಟಿರುವ
ಅಮೌಲ್ಯ ವಸ್ತುಗಳ ಕಾಣಿಕೆಯನ್ನು ಪ್ರಭುವಿಗೆ ಒಪ್ಪಿಸಿದರು. ರಾಮಚಂದ್ರನೂ
ಮುನಿಗಳನ್ನು ವಿಧಿವತ್ತಾಗಿ ಪೂಜಿಸಿದನು. ಅನಂತರ ಮುನಿಗಳು ತಾವು ಬಂದ
ಕಾರ್ಯವನ್ನು ಅರುಹಿದರು:
 
"ರಾಮಚಂದ್ರ, ಶೈವಾಕ್ಷನೆಂಬ ಗಂಧರ್ವನ ಮಕ್ಕಳು ಮೂರ್ಖತನದಿಂದ
ವರ್ತಿಸುತ್ತಿದ್ದಾರೆ. ಅವರ ಸಂಖ್ಯೆ ಒಂದಲ್ಲ, ಎರಡಲ್ಲ ಮೂರು ಕೋಟಿ ! ಅವರ
ಪೀಡೆಯಿಂದ ಜನ ಕಂಗಾಲಾಗಿದೆ. ಆ ಮೂರ್ಖರ ಸಂಹಾರವಾಗದಿದ್ದರೆ
ಲೋಕಕ್ಕೆ ಕ್ಷೇಮವಿಲ್ಲ. ಇದನ್ನು ಸನ್ನಿಧಾನದಲ್ಲಿ ಅರುಹಲು ನಾನು ಕೇಕಯ
ರಾಜನಿಂದ ನಿಯುಕ್ತನಾಗಿ ಬಂದಿದ್ದೇನೆ."
 
ರಾಮಚಂದ್ರನು ಗಂಧರ್ವಪುತ್ರರ ವಿನಾಶಕ್ಕಾಗಿ ಭರತನನ್ನು ಕಳಿಸಿ
ಕೊಟ್ಟನು. ಸೇನಾಸಮೇತನಾದ ಭರತನು ಹದಿನೈದು ದಿನಗಳ ಪ್ರಯಾಣದ
ನಂತರ ಕೇಕಯವನ್ನು ತಲುಪಿದನು. ಅಲ್ಲಿ ಕೇಕಯ ರಾಜನೂ ಸೇನಾಸಹಿತ
ನಾಗಿ ಇವನೊಡನೆ ಸೇರಿಕೊಂಡನು..
 
ಗಂಧರ್ವ ನಗರವನ್ನು ಮುತ್ತಿದ ಭರತನ ಸೇನೆ ಯುದ್ಧಾಹ್ವಾನಕ್ಕಾಗಿ
ಶಂಖನಾದವನ್ನು ಮಾಡಿತು. ಸಿಂಹದಂತೆ ಬಲಶಾಲಿಗಳಾದ ಮೂರು ಕೋಟಿ
ಗಂಧರ್ವರೂ ಭರತನ ಸೇನೆಯನ್ನು ಎದುರಿಸಿದರು. ಏಳು ದಿನಗಳ ತನಕ
ಭಯಾನಕವಾದ ಯುದ್ಧ ನಡೆಯಿತು.
 
ಇನ್ನು ಶತ್ರುಗಳನ್ನು ಜೀವಂತವಾಗಿ ಬಿಡುವುದು ಸರಿಯಲ್ಲ ಎನ್ನಿಸಿತು
ಭರತನಿಗೆ. ಕೂಡಲೆ ಅವನು ಸಂವರ್ತನಾಮಕವಾಗದ ಕಾಲಾಸ್ತ್ರವನ್ನು