This page has been fully proofread once and needs a second look.

೨೪೪
 
ಮಿಂಚಿನಬಳ್ಳಿ
 
"ಲಕ್ಷಣ, ಸುಗ್ರೀವನು ಎಲ್ಲ ಕಪಿ ಪರಿವಾರದೊಡನೆ ಬರುವಂತೆ ಕರೆ
ಕಳುಹಿಸು, ವಿಭೀಷಣನೂ ರಾಕ್ಷಸರೊಡನೆ ಬರಲಿ. ಎಲ್ಲ ಋಷಿಗಳೂ ಸಮಸ್ತ
ಪ್ರಜೆಗಳೂ ಯಾಗದಲ್ಲಿ ಭಾಗವಹಿಸುವಂತೆ ಆಹ್ವಾನ ಕಳುಹಿಸು. ಪ್ರಪಂಚದ
ಎಲ್ಲ ಅರಸರೂ ಎಲ್ಲ ವಿಪ್ರರೂ ಸಪತ್ನೀಕರಾಗಿ ಅಶ್ವಮೇಧಕ್ಕೆ ಚಿತ್ತೈಸಲಿ.

 
ನೈಮಿಷಾರಣ್ಯದಲ್ಲಿ ಗೋಮತಿಯ ತಡಿಯಲ್ಲಿ ಯಜ್ಞಭೂಮಿಯನ್ನು
ಯನ್ನು ಸಜ್ಜುಗೊಳಿಸು. ವಸಿಷ್ಠರ ನಿರ್ದೇಶದಂತೆ ಎಲ್ಲ ಸಾಮಗ್ರಿ ಗಳ ಸಿದ್ಧತೆ ನಡೆಯಲಿ,
ಬೇಕಾದಷ್ಟು ಬೆಳ್ಳಿ-ಬಂಗಾರಗಳನ್ನೂ ಆಹಾರಧಾನ್ಯಗಳನ್ನೂ ಮುಂದಾಗಿ
ಭರತನು ವಾಹನಗಳಲ್ಲಿ ಸಾಗಿಸಲಿ. ಸೀತೆಯ ಬಂಗಾರದ ಪ್ರತಿಮೆ ಯಾಗದಲ್ಲಿ
ನನ್ನ ಸಹಧರ್ಮಚಾರಿಣಿಯಾಗಲಿ."
 

 
ಲಕ್ಷ್ಮಣನೂ ಭರತನೂ ತಮ್ಮ ಪಾಲಿನ ಕರ್ತವ್ಯವನ್ನು ದಕ್ಷತೆ- ಯಿಂದ
ನಿರ್ವಹಿಸಿದರು. ಲಕ್ಷಣವಾದ ಕುದುರೆಯೊಂದನ್ನು ಪೂಜಿಸಿ ವಿಜಯಯಾತ್ರೆ-
ಗೆಂದು ಬಿಡಲಾಯಿತು. ಶತ್ರುಘ್ನನು ಅದರ ಬೆಂಗಾವಲಾಗಿ ನಡೆದನು.
ವಿಜಯಪತಾಕೆಯೊಡನೆ ಕುದುರೆ ಮರಳಿಯೂ ಆಯಿತು.
 
ಗೆಂದು ಬಿಡಲಾಯಿತು.
 

 
ವಿಪ್ರಪರಿವೃತನಾದ ರಾಮಚಂದ್ರನು ನೈಮಿಶಾರಣ್ಯದಲ್ಲಿ ಯಾಗ ಭೂಮಿಗೆ
ತೆರಳಿದನು. ಸಕಲ ರಾಷ್ಟ್ರಗಳಿಂದಲೂ ಸಾಮಂತ ರಾಜರು ಕಪ್ಪ ಕಾಣಿಕೆಗಳನ್ನು
ತಂದು ಒಪ್ಪಿಸಿದರು.

ಭರತ-ಶತ್ರುಘ್ನರು ಅತಿಥಿಗಳನ್ನು ಯಥಾವತ್ತಾಗಿ
ಸತ್ಕರಿಸಿದರು. ಭೋಜನದ ವ್ಯವಸ್ಥೆಗೆ ಸುಗ್ರೀವಾದಿಗಳು ನೆರವಾದರು.

ವಿಭೀಷಣನೂ ಅವನ ಪರಿವಾರದವರೂ ಋಷಿಗಳ ಸೇವೆಯನ್ನು ಮಾಡಿದರು.
ರಾಕ್ಷಸರಿಂದ ಋಷಿಗಳು ಸೇವೆಯನ್ನು ಪಡೆದರು !
 

 
ಪರಮಪುರುಷನ ಯಾಗಕ್ಕೆ ಬ್ರಹ್ಮಾದಿ ದೇವತೆಗಳೂ ಚಿತ್ತೈಸಿ- ದ್ದರು.
ಹನುಮಂತನು ಅವರನ್ನೆಲ್ಲ ಸತ್ಕರಿಸಿದನು. ಎಲ್ಲರಿಗೂ ಎಲ್ಲರೂ ಎಲ್ಲವನ್ನೂ
ಕೊಟ್ಟರು. ತೆಗೆದುಕೊಂಡ ಕೈ ಸೋತಿತಾಗಲಿ- ಗಲಿ, ಕೊಟ್ಟ ಕೈ ಸೋಲಲಿಲ್ಲ.
 

 
ಒಂದು ವರ್ಷದ ವರೆಗೆ ಅಖಂಡವಾಗಿ ನಡೆದ ಈ ಯಾಗದ ವೈಭವವನ್ನು
ಕಂಡು ಪುಲಕಿತರಾದ ಮುನಿಗಳು ಕೊಂಡಾಡಿದರು.
 
- ದರು.
 
"ಇಂಥ ಯಾಗ ಈ ವರೆಗೆ ನಡೆದುದಿಲ್ಲ; ಇನ್ನು ನಡೆಯ-
ಲಾರದು. ಇದಕ್ಕೆ
ಸಾಟಿಯಾದ ಯಾಗ ಇದೊಂದೇ ಸರಿ. ಯಕ್ಷೇಜ್ಞೇಶ್ವರನ ಯಜ್ಞಕ್ಕೆ ಸಮನಾದ
ಯಜ್ಞವನ್ನು ಮಾಡುವ ಅದವಾಟಾದರೂ ಯಾರಿಗಿದೆ ?"