This page has been fully proofread once and needs a second look.

ಸಂಗ್ರಹರಾಮಾಯಣ
 
೨೪೩
 
"ರಾಮಭದ್ರ, ಹಿಂದೆ ಶ್ವೇತನೆಂಬ ರಾಜನು ಅನ್ನದಾನವಿಲ್ಲದ ಯಾಗ
ವನ್ನು ಮಾಡಿದನು. ಅದರ ಫಲವಾಗಿ ಕೊನೆಗೆ ಅವನು ಹಸಿವಿನ ಬಾಧೆಗಾಗಿ
ತನ್ನ ಮಾಂಸವನ್ನೇ ಕಿತ್ತು ತಿನ್ನಬೇಕಾಯಿತು.

ಆ ಪಾಪದ ಪರಿಹಾರಕ್ಕಾಗಿ
ಅವನು ಬ್ರಹ್ಮದೇವರ ನಿಯೋಗದಂತೆ ಈ ಮಾಲೆಯನ್ನು ನನಗೆ ಅರ್ಪಿಸಿದನು.
ಅದನ್ನು ನಾನೀಗ ನಿನಗೆ ಅರ್ಪಿಸುತ್ತಿದ್ದೇನೆ. ಸ್ವೀಕರಿಸಬೇಕು."
 

 
ಮುನಿಗಳೊಡನೆ ಮಾತು-ಕತೆ ಮುಂದುವರಿಯುತ್ತಿದ್ದಂತೆಯೇ ಕತ್ತಲಾ
ಯಿತು. ಅ ರಾತ್ರಿ ರಾಮಚಂದ್ರನು ಅಲ್ಲೇ ಉಳಿದು- ಕೊಂಡನು.
 

 
ಮರುದಿನ ಮುಂಜಾನೆ ಹೊರಟು ನಿಂತ ರಾಮಚಂದ್ರನು ಮುನಿಗಳನ್ನು
ಪ್ರಶಂಸಿಸಿದನು:
 

 
"ಮಹರ್ಷಿ ಅಗಸ್ಕೃತ್ಯರೆ, ನೀವು ಜ್ಞಾನಿಗಳು. ಪರಮ ಪಾವನರು.

ನಿಮ್ಮನ್ನು ಮತ್ತೊಮ್ಮೆ ನೋಡುವ ಯೋಗ ದೊರಕಲಿ."
 

 
ಮುನಿಗಳಿಗೆ ಆನಂದದಿಂದ ಕಣ್ಣು ಒದ್ದೆ ಯಾಯಿತು. ಅವರು ಗದ್ಗದಿತ
ರಾಗಿ ನುಡಿದರು :
 

 
"ಭಗವನ್, ನಾನು ಪಾವನನು ನಿಜ, ಅದು ನಿನ್ನ ಪಾದಪದ್ಮಗಳ

ಸ್ಮರಣೆಯ ಫಲ. ನಿನ್ನ ಭಜನೆಯಿಂದ ಮಹಾ ಪಾತಕಿಗಳೂ ಪರಮ ಪಾವನ
ರಾಗುವರು. ಓ ಮಂಗಲ ಚರಿತನೆ, ನಿನಗೆ ಅನಂತ ವಂದನೆ ಗಳು, ಈ ಭಕ್ತನ
ಮೇಲೆ ಕರುಣೆಯಿರಲಿ."
 

 
ಭಗವಂತನ ಮಂದಹಾಸವೇ ಮುನಿಗಳನ್ನು ಅಭಿನಂದಿಸಿತು. ಅನಂತರ
ರಾಮಚಂದ್ರನು ವಿಮಾನವನ್ನೇರಿ ಅಯೋಧ್ಯೆಗೆ ಬಂದನು. ವಿಮಾನ ಕುಬೇರ
ಪುರಿಗೆ ತೆರಳಿತು.
 
*
 

 
ಒಮ್ಮೆ ರಾಮಚಂದ್ರನು ಲಕ್ಷ್ಮಣನನ್ನೂ ಭರತನನ್ನೂ ಕರೆಸಿ ಯಾಗದ
ಪ್ರಸ್ತಾವವನ್ನೆತ್ತಿದನು. ಅಶ್ವಮೇಧವನ್ನಾಚರಿಸುವ ರಾಮಚಂದ್ರನ ಬಯಕೆ
ತಮ್ಮಂದಿರಿಗೂ ಇಷ್ಟವಾಯಿತು. ವಸಿಷ್ಠಾದಿಗಳನ್ನು ಕರೆಸಿ ಈ ವಿಷಯವನ್ನು
ಅರುಹಿಯೂ ಆಯಿತು. ಯಾಗದ ಸನ್ನಾಹಕ್ಕಾಗಿ ರಾಮಚಂದ್ರನು ಲಕ್ಷ್ಮ
ನನ್ನು ಆಜ್ಞಾಪಿಸಿದನು: