This page has been fully proofread once and needs a second look.

ಮಿಂಚಿನಬಳ್ಳಿ
 
ತಮ್ಮ ಅಧಿಕಾರದ ವ್ಯಾಪ್ತಿಯನ್ನು ಮಾಮೀರಿ ನಡೆದಿದ್ದಾರೆ. ಎಲ್ಲೋ ಒಂದೆಡೆ
ಸ್ವಧರ್ಮಕ್ಕೆ ಚ್ಯುತಿ ಬಂದಿದೆ. ಅಂಥ ಜನಕ್ಕೆ ತಕ್ಕ ಶಿಕ್ಷೆ ಮಾಡೋಣವಾಗಲಿ.
ಆಗ ಎಲ್ಲ ಸರಿ ಹೋಗುವುದು."
 

 
ರಾಮಚಂದ್ರನು ನಾರದರ ಸಲಹೆಯನ್ನು ಒಪ್ಪಿದನು. ಲಕ್ಷ್ಮಣ ನು ವಿಪ್
ನನ್ನು ಸಂತೈಸಿದನು.. ನೆನಸಿದ ಮಾತ್ರಕ್ಕೆ ಬಳಿಗೆ ಬಂದ ಪುಷ್ಪಕವನ್ನೇರಿ
ರಾಮಚಂದ್ರನು ಹೊರಟನು. ವಿಮಾನ ದಕ್ಷಿಣಾ- ಭಿಮುಖವಾಗಿ ಹೊರಟಿತು.
ಶೈವಲ ಪರ್ವತದ ಉತ್ತರಭಾಗದಲ್ಲಿ ಒಂದು ಸರೋವರದ ಬಳಿ ತಲೆಕೆಳಗಾಗಿ
ಜೋತು ಬಿದ್ದು ತಪಸ್ಸು- ಗೈಯುತ್ತಿರುವ ಒಬ್ಬ ತಪಸ್ವಿ ಕಾಣಿಸಿಕೊಂಡನು
. ರಾಮಚಂದ್ರನು ಅವನನ್ನು ಯಾರು ? ಏತಕ್ಕಾಗಿ ಈ ತಪದ ಸಾಹಸ?"
ಎಂದು ವಿಚಾರಿಸಿದನು.
 

 
ಶೂದ್ರ ತಪಸ್ವಿ ತನ್ನ ಕಥೆಯನ್ನರುಹಿದನು :
 

 
"ನಾನು ಶಂಬೂಕನೆಂಬ ಶೂದ್ರ ತಾಪಸನು. ರುದ್ರಪದವನ್ನು ಪಡೆ
ಹಂಬಲಿನಿಂದ ಈ ತಪಸ್ಸಿಗೆ ತೊಡಗಿದ್ದೇನೆ." .
 

 
ಒರೆಯಿಂದ ಹೊರಚಿಮ್ಮಿದ ರಾಮಚಂದ್ರನ ಕತ್ತಿ ತಪಸ್ವಿಯ ತಲೆಯನ್ನು
ಕತ್ತರಿಸಿತು. ಶಂಬೂಕನು ಮೂಲತಃ ಒಬ್ಬ ಅಸುರ. ರುದ್ರನಾಗುವ ಬಯಕೆ
ಬೇರೆ ಅವನಿಗೆ. ಇಂಥವರಿಂದಲೆ ಲೋಕ ದಲ್ಲಿ ಧರ್ಮಗ್ಲಾನಿಯಾಗುತ್ತಿರುವುದು.
ತಮ್ಮ ಸ್ಥಾನಮಾನಗಳ ಅರಿವಿಲ್ಲದೆ ದೊಡ್ಡ ಹುದ್ದೆಯನ್ನು ಬಯಸುವುದು
ತಪ್ಪಲ್ಲವೆ ? ತಮಗೆ ನಿಲುಕದ ಹುದ್ದೆಯನ್ನೇರಿದ ಜನ ಲೋಕವನ್ನು ವಿನಾಶ-

ದೆಡೆಗೆ ಕೊಂಡೊಯ್ಯುತ್ತಾರೆ. ಎಂತಲೇ ರಾಮಚಂದ್ರನು ಈ ಅಯೋಗ್ಯ
ಕಾಮನೆಗೆ ಸರಿಯಾದ ಶಿಕ್ಷೆಯನ್ನು ವಿಧಿಸಿದನು.
 

 
ಅಧರ್ಮದ ತಲೆ ಕತ್ತರಿಸಿದಾಗ ಧರ್ಮ ಬದುಕಿಕೊಂಡಿತು. ಒಬ್ಬನ
ಸಾವು ಇನ್ನೊಬ್ಬನ ಬದುಕಾಯಿತು. ಬ್ರಾಹ್ಮಣನ ಪುತ್ರ ವೃದ್ಧ ದಂಪತಿಗಳಲ್ಲಿ
ಸಂತಸವನ್ನು ತುಂಬುತ್ತ ಎದ್ದು ಕುಳಿತನು.
 

 
ಶಂಬೂಕನನ್ನು ಕೊಂದ ಮೇಲೆ ರಾಮಚಂದ್ರನು ಪಕ್ಕದಲ್ಲಿ ಇದ್ದ
ಅಗಸ್ವಾತ್ಯಾಶ್ರಮಕ್ಕೆ ತೆರಳಿದನು. ಅಗಸ್ತ್ಯರು ಬಾಡದ ಹೂ ಮಾಲೆಯೊಂದನ್ನು
ರಾಮಚಂದ್ರನಿಗೆ ಅರ್ಪಿಸಿ ಬಿನ್ನವಿಸಿ ಕೊಂಡರು :