This page has been fully proofread once and needs a second look.

ಸಂಗ್ರಹರಾಮಾಯಣ
 
ಸೇನೆ ಅಯೋಧ್ಯೆಗೆ ತಲಪಿತು. ಶತ್ರುಘ್ನನು ತಾಯಿಯೆಡೆಗೆ ಹಾರುವ
ಕರುವಿನಂತೆ ತವಕದಿಂದ ಬಂದು ರಾಮನ ಚರಣಗಳಿಗೆ ವಂದಿಸಿ ವಿನಂತಿಸಿ
ಕೊಂಡನು :
 
೨೧
 

 
"ರಾಮಚಂದ್ರ, ನಿನ್ನ ಸನ್ನಿಧಾನವನ್ನು ದೂರಗೊಳಿಸುವ ಸಾಮ್ರಾಜ್ಯ
ಭೋಗ ನನಗೆ ಬೇಡ. ಮಧುರೆಯನ್ನು ಯಾರಾದರೂ ಆಳಲಿ,
ರಾಜತ್ವದ ಕಿರೀಟ ಯಾರ ತಲೆಯಲ್ಲಾದರೂ ಬೀಳಲಿ. ನನ್ನನ್ನು ನಿನ್ನ ಬಳಿ ಇರಗೊಡು."
 
ರಾಜತ್ವದ
 

 
"
ಶತ್ರುಘ್ನ, ನೀನು ಕ್ಷತ್ರಿಯ ವಂಶದವನು. ಪ್ರಜೆಗಳ ಸೇವೆ ಮಾಡು

ವುದು ಕ್ಷತ್ರಿಯರ ಧರ್ಮ. ಅದನ್ನು ನೀನು ಮಾಡುತ್ತಿರಬೇಕು. ಅದರಿಂದ
ನೀನು ನನ್ನ ಸೇವೆಯನ್ನೂ ಮಾಡಿದಂತಾಗುವುದು. ಜನತೆಯ ಸೇವೆಯೇ
ನನ್ನ ಸೇವೆ."
 

 
ಐದು ದಿನಗಳ ಕಾಲ ಶತ್ರುಘ್ನನು ರಾಮಚಂದ್ರನೊಡನೆ ಅಯೋಧ್ಯೆಯಲ್ಲಿ
ಉಳಿದನು. ಅನಂತರ ರಾಮಚಂದ್ರನ ಆಜ್ಞೆ- ಯಂತೆ ಮತ್ತೆ ಮಧುರೆಗೆ ಮರ
ಳಿದನು.
 
*
 
*
 

 
ಒಮ್ಮೆ ಒಬ್ಬ ವೃದ್ಧ ಬ್ರಾಹ್ಮಣನು ಅರಮನೆಯ ಬಾಗಿಲಲ್ಲಿ ತನ್ನ ಮಗನ
ಮೃತ ಕಳೇಬರವನ್ನಿರಿಸಿ ರೋದಿಸತೊಡಗಿದನು :
 

 
"ರಾಮರಾಜ್ಯದಲ್ಲಿ ಎಂದೂ ಅಪಮೃತ್ಯು ಸಂಭವಿಸಿದುದಿಲ್ಲ. ಓ ನನ್ನ
ಒಲವಿನ ಕಂದನೆ, ಓ ನನ್ನ ಕಣ್ಮಣಿಯೆ, ನಿನಗೆಲ್ಲಿಂದ ಬಂತು ಈ ಕುತ್ತು ?
ಹೊಸ ಹರೆಯದ ನಿನ್ನನ್ನು ಕಳೆದುಕೊಳ್ಳಲು ನಾನೇನು ಪಾಪ ಮಾಡಿರುವೆ ?
ಏಳು ಮಗುವೆ ಎದ್ದು ನಿಲ್ಲು. ನಿನ್ನ ಮುದ್ದು ಮಾತುಗಳಿಂದ ನಮ್ಮನ್ನು
ಸಂತಸಗೊಳಿಸು. ಇಲ್ಲದಿದ್ದರೆ ನಾನೂ ನಿನ್ನ ತಾಯಿಯೂ ನಿನ್ನ ಜತೆಯೇ
ಬಂದು ಬಿಡುವೆವು. ಲೋಕೈಕನಾಥನಾದ ರಾಮಚಂದ್ರನೇ ನನಗೆ ಶರಣು. ಆ
ಕರುಣಾಳುವೇ ನಿನ್ನ ಕಂದನನ್ನು ಬದುಕಿಸಬೇಕು."
 

 
ಈ ಮಾತು ರಾಜಸಭೆಯ ವರೆಗೆ ಮುಟ್ಟಿತು. ಸಭೆಯಲ್ಲಿದ್ದ ನಾರದ
ಮಹರ್ಷಿಗಳು ರಾಮಚಂದ್ರನ ಬಳಿ ನಿವೇದಿಸಿಕೊಂಡರು :
 

 
"ಪ್ರಭುವೆ, ಯಾರದೋ
ತಪ್ಪಿಗೆ ಈ ವಿಪ್ರನು ಶಿಕ್ಷೆಯನ್ನನುಭವಿ- ಸುತ್ತಿ.
 
"ಪ್ರಭುವೆ, ಯಾರದೋ
ದ್ದಾನೆ. ಯಾರೋ ತಮ್ಮ ಅಳವಿಗೆ ಮಾಮೀರಿದ ಕೆಲಸಕ್ಕೆ ಕೈ ಹಾಕಿದ್ದಾರೆ;