This page has not been fully proofread.

ಮಿಂಚಿನಬಳ್ಳಿ
 
ದನು. ಶತ್ರುಘ್ನ ಮೂರ್ಛಿತನಾಗಿ ಕುಸಿದು ಬಿದ್ದನು.
ಕಾರವನ್ನು ಲವಣನ ವಿಜಯಾಟ್ಟಹಾಸ ಮೀರಿಸಿತು !
 
596
 
ಮುನಿಗಳ ಹಾಹಾ-
ಕ್ಷಣದಲ್ಲಿ ಶತ್ರುಘ್ನನಿಗೆ ತಿಳಿವು ಬಂತು. ಲವಣನ ಅಟ್ಟಹಾಸ ಮುಗಿವ
ಮುನ್ನ ರಾಮಾನುಜನು ರಾಮದತ್ತವಾದ ಬಾಣವನ್ನು ಧನುಸ್ಸಿಗೆ ಹೂಡಿದನು.
ಬಾಣದ ಝಳಪಿಗೆ ಜಗತ್ತೆ ತಳಮಳಗೊಂಡಿತು. ಬಿಲ್ಲಿನಿಂದ ಚಿಮ್ಮಿದ ಬಾಣ
ಲವಣನನ್ನು ಕೊಂದು ರಸಾತಳವನ್ನು ಸೀಳಿ ರಾಮನನ್ನು ಬಂದು ಸೇರಿತು.
ಲವಣನ ಕತೆ ಕೊನೆಗೊಂಡಿತು. ಶತ್ರುಘ್ನನೇ ಮಧುವನದ ರಾಜನಾದನು.
ಸಂಪದ್ಭರಿತವಾದ ಆ ನಾಡನ್ನು ಜನ ಮಧುರೆ ಎಂದು ಕರೆದರು.
 
ಈ ಪ್ರಸಂಗ ನಡೆದು ಹನ್ನೆರಡು ವರ್ಷಗಳು ಕಳೆದವು. ಶತ್ರುಘ್ನನಿಗೆ
ರಾಮಚಂದ್ರನನ್ನು ಕಾಣುವ ಬಯಕೆಯಾಯಿತು.
ಅವನು ಸೇನೆಯನ್ನು
ಮಧುರೆಯಲ್ಲಿ ನಿಲ್ಲಿಸಿ ಕೋಸಲಕ್ಕೆ ತೆರಳಿದನು. ದಾರಿಯಲ್ಲಿ ಸಿಕ್ಕಿದ ವಾಲ್ಮೀಕಿ
ಗಳ ಆಶ್ರಮದಲ್ಲಿ ಒಂದು ರಾತ್ರಿಯನ್ನು ಕಳೆದನು. ಲವಣನ ಸಂಹಾರದಿಂದ
ವಾಲ್ಮೀಕಿಗಳಿಗೂ ಸಂತಸವಾಗಿತ್ತು. ಅವರು ಶತ್ರುಘ್ನನನ್ನು ವಿಶೇಷವಾಗಿ
ಸತ್ಕರಿಸಿದರು.
 
ರಾತ್ರಿಯ ಹೊತ್ತು. ಎಲ್ಲರೂ ಮಲಗಿದ್ದರು. ವಾತಾವರಣ ನೀರವ
ವಾಗಿತ್ತು. ಆಶ್ರಮದ ಗುಡಿಸಲೊಂದರಲ್ಲಿ ಯಾರೋ ರಾಮಾಯಣವನ್ನು ಹಾಡು
ತಿದ್ದರು. ಇಂಪಾದ ಸಂಗೀತ ರಾತ್ರಿಯ ಮೌನವನ್ನು ಭೇದಿಸಿ ಆಲೆಯಲೆ
ಯಾಗಿ ಹರಿದಿತ್ತು. ಶತ್ರುಘ್ನನ ಸೇನೆಯ ಜನಕ್ಕೆ ಎಲ್ಲಿಲ್ಲದ ಅಚ್ಚರಿ. ರಾಮ-
ಚಂದ್ರನ ಚರಿತೆಯನ್ನು ಕಣ್ಣಿಗೆ ಕಟ್ಟುವಂತೆ, ಮನಕ್ಕೆ ಮುಟ್ಟುವಂತೆ ಹಾಡು
ತಿರುವ ಈ ಗಾನಗಂಧರ್ವರು ಯಾರು ? ಆದರೆ ಯಾರಿಗೂ ಕೇಳುವ ಧೈರ್ಯ
ವಿಲ್ಲ. ಮಹರ್ಷಿಗಳ ಆಶ್ರಮದಲ್ಲಿ ಎಲ್ಲಿ ಏನು ತಪ್ಪಾದೀತೋ ಎನ್ನುವ ಭಯ.
ಕಿವಿಗೆ ಅಮೃತ ಸುರಿದಂತೆ ಸುಳಿಯುವ ಗಾನ ಲಹರಿಯಲ್ಲಿ ಮೈಮರೆತ ಶತ್ರುಘ್ನ
ನಿಗಂತೂ ಬೆಳಗಿನ ವರೆಗೂ ಜಾಗರವೇ. ಕೊನೆಗೂ ಇದು ಕುಶಲವರ ಕಂಠಶ್ರೀ
ಎಂದು ಯಾರಿಗೂ ತಿಳಿಯಲಿಲ್ಲ !
 
ಬೆಳ್ಳಿ ಮೂಡಿತು. ಮುನಿಗಳ ಅಪ್ಪಣೆ ಪಡೆದು ಶತ್ರುಘ್ನನು ಪರಿವಾರ
ದೊಡನೆ ಅಯೋಧ್ಯೆಗೆ ತೆರಳಿದನು. ರಾಮಚಂದ್ರನನ್ನು ಕಾಣುವಲ್ಲಿ ಎಲ್ಲರಿಗೂ
ತ್ವರೆ. ರಾಮಪಾದಗಳಿಗೆ ಎರಗುವ ವರೆಗೆ ಅವಸರ.