This page has not been fully proofread.

ಸಂಗ್ರಹರಾಮಾಯಣ
 
ಅಕ್ಕಿ
 
ಎಲ್ಲರೂ ಯಮುನೆಯ ದಡದಲ್ಲಿ ಉಳಿದುಕೊಂಡರು. ಆಗ ಲವಣನ ಪರಾ-
ಕ್ರಮದ ಪ್ರಸ್ತಾವವೂ ಬಂತು. ಚ್ಯವನರು ಅವನ ಅಜೇಯ ಬಲವನ್ನು ಶತ್ರುಘ್ನ
ನಿಗೆ ತಿಳಿಯಪಡಿಸಿದರು.
 
ಅವನು
 
ಮರುದಿವಸ ಬೆಳಿಗ್ಗೆ ಎಲ್ಲರೂ ಯಮುನೆಯನ್ನು ದಾಟಿದರು. ಶತ್ರುಘ್ನನು
ಧನುರ್ಬಾಣಗಳನ್ನು ಸಜ್ಜುಗೊಳಿಸಿ ಮಧುವನದ ಮಹಾದ್ವಾರದಲ್ಲಿ ನಿಂತು-
ಕೊಂಡನು. ಮಧ್ಯಾಹ್ನದ ಹೊತ್ತು ಲವಣನು ಕಾಣಿಸಿಕೊಂಡನು.
ಆಹಾರಕ್ಕಾಗಿ ಕಾಡು ಪ್ರಾಣಿಗಳನ್ನು ಕೊಂದು ಹೊತ್ತು ತರುತ್ತಿದ್ದನು.
ಬಿಲ್ಲು ಹಿಡಿದು ನಿಂತ ಶತ್ರುಘ್ನನನ್ನು ಕಂಡು ಲವಣನು ಗುಡುಗಿದನು:
"ಓ ಮನುಷ್ಯ ಪ್ರಾಣಿಯೆ, ನಿನ್ನಂಥ ಸಾವಿರ ಜನರನ್ನು ತಿಂದು ತೇಗಿದ
ವನು ನಾನು. ನೀನೇಕೆ ನನ್ನ ಬಾಯಿಗೆ ಬೀಳಲು ಬಂದೆ ?"
 
ಬೆದರಿಕೆಯ ಮಾತುಗಳಿಗೆ ಶತ್ರುಘ್ನನು ಸೊಪ್ಪು ಹಾಕುವವನಲ್ಲ.
ಅವನೂ ಅಷ್ಟೇ ಸ್ಪುಟವಾಗಿ ಉತ್ತರಿಸಿದನು :
 
"ಈ ಬಡಬಡಿಕೆಗಳೆಲ್ಲ ಏಕೆ ? ನಾನು ರಾಮಚಂದ್ರನ ತಮ್ಮ ಎಂಬುದು
ನಿನಗೆ ತಿಳಿದಿರಲಿ. ನಿನ್ನೊಡನೆ ದ್ವಂದ್ವಯುದ್ಧಕ್ಕಾಗಿ ಬಂದಿದ್ದೇನೆ. ಸಿದ್ಧನಾಗು."
"ಸಂಬಂಧದಲ್ಲಿ ರಾವಣನೂ ನಾನೂ ಬಂಧುಗಳು, ಅವನನ್ನು ರಾಮ
ಕೊಂದಿದ್ದಾನೆ. ಅದರಿಂದ ರಾಮನ ತಮ್ಮನಾದ ನಿನ್ನನ್ನು ಕೊಲ್ಲುವುದು ನನಗೆ
ಸಂತಸದ ಮಾತು. ಆದರೆ ಆಯುಧವನ್ನು ತರುವ ವರೆಗೆ ಸ್ವಲ್ಪ ತಡೆ."
 
"ನೀನು ಬ್ರಹ್ಮದ್ವೇಷಿ, ವಂಚಕ, ನಿನ್ನಂಥ ಮಾಯಾವಿಗಳು ನನ್ನ ಕಣ್ಣಿಗೆ
ಬಿದ್ದ ಮೇಲೆ ಜೀವಂತವಾಗಿ ತೆರಳಲಾರರು. ನಾನು ನಿನ್ನನ್ನು ಹೋಗಗೊಡ
 
ಲಾರೆ."
 
ಶತ್ರುಘ್ನನ ಬಿರುನುಡಿಗಳಿಂದ ಲವಣನ ಕೋಪ ಮಿತಿಮೀರಿತು. ಅವನು
ದೊಡ್ಡ ಮರವೊಂದನ್ನು ಕಿತ್ತು ಕದನಕ್ಕೆ ಅಣಿಯಾದನು. ಶತ್ರುಘ್ನನು ಕತ್ತ
ರಿಸಿದಷ್ಟು ಬಾರಿ ಹೊಸ ಮರಗಳು ಅವನ ಕೈಯಲ್ಲಿ ಕಾಣಿಸಿಕೊಳ್ಳುತ್ತಿದ್ದವು.
ಲವಣನ ಕೈಚಳಕ ಅಚ್ಚರಿಯನ್ನುಂಟು ಮಾಡುವಂತಿತ್ತು !
 
ಶತ್ರುಘ್ನನು ನೂರಾರು ಬಾಣಗಳನ್ನು ಲವಣನ ಎದೆಗೆ ಗುರಿಯಿಟ್ಟನು.
ಲವಣನು ಅದನ್ನು ಲೆಕ್ಕಿಸದೆ ಮಹಾವೃಕ್ಷವೊಂದರಿಂದ ಶತ್ರುಘ್ನನನ್ನು ಹೊಡೆ