This page has not been fully proofread.

ಮಿಂಚಿನಬಳ್ಳಿ
 
"ಮಹಾರಾಜ, ಲಕ್ಷ್ಮಣನು ಕಾಡಿನಲ್ಲಿ ನಿನ್ನ ಜತೆಗಿದ್ದು ಸೇವೆ ಸಲ್ಲಿಸಿದ್ದಾನೆ.
ಭರತನು ಹದಿನಾಲ್ಕು ವರ್ಷ ನಿನಗಾಗಿ ತಾಪಸಜೀವನವನ್ನು ಬಾಳಿದ್ದಾನೆ. ಅವರ
ಪಾಲಿನ ಸೇವೆಯನ್ನು ಅವರು ಮಾಡಿ ಮುಗಿಸಿದ್ದಾರೆ. ಇದು ನನ್ನ ಸರದಿ.
ದ್ರೋಹಿಯಾದ ಲವಣನನ್ನು ನಿನ್ನ ಅನುಗ್ರಹಬಲದಿಂದ ನಾನು ಸಂಹರಿಸುವೆನು.
ಶಶ್ರುಘ್ನನೆಂಬ ನನ್ನ ಹೆಸರು ಸಾರ್ಥಕವಾಗಲಿ, "
 
೨೩೮
 
ರಾಮಚಂದ್ರನಿಗೆ ತಮ್ಮನ ಜಾತ್ರೆಯನ್ನು ಕಂಡು ಸಂತಸವಾಯಿತು.
ಕೂಡಲೆ ಅವನನ್ನು ವಸಿಷ್ಠಾದಿಗಳಿಂದ ಅಭಿಷೇಕಿಸಿ ಮಧುವನದ ರಾಜನನ್ನಾಗಿ
ಮಾಡಿದನು. ರಾಜ್ಯಾಭಿಷೇಕದಿಂದ ಲಜ್ಜಿತನಾಗಿ ನಿಂತಿರುವ ಶತ್ರುಘ್ನನನ್ನು
ಆಲಿಂಗಿಸಿ, ತನ್ನ ಬಾಣವೊಂದನ್ನು ಅವನಿಗಿತ್ತು ರಾಮಚಂದ್ರನು ಸಮಾಧಾನ
ಗೊಳಿಸಿದನು :
 
"ಶತುಘ್ನ, ನಾನಿತ್ತ ಈ ಬಾಣ ಅದ್ಭುತವಾಗಿದೆ; ಅಮೋಘವಾಗಿದೆ.
ಹಿಂದೆ ಕಡಲುದಾರಿ ಬಿಟ್ಟು ಕೊಡದಿದ್ದಾಗ ಇದೇ ಬಾಣವನ್ನು ಹೂಡಿದ್ದೆ.
ನಾನು ಮಧುಕೈಟಭರನ್ನು ಕೊಂದುದೂ ಈ ಬಾಣದಿಂದಲೇ. ಇದರಿಂದ ನೀನು
ಲವಣವನ್ನು ಅನಾಯಾಸವಾಗಿ ಸಂಚರಿಸಬಹುದು.
 
ಶತ್ರುಘ್ನನು ರಾಮಚಂದ್ರನಿಗೆ, ಗುರುಹಿರಿಯರಿಗೆ ವಂದಿಸಿದನು. ನಾಲ್ಕು
ಸಾವಿರ ಕುದುರೆಗಳು, ಎರಡು ಸಾವಿರ ರಥಗಳು, ಒಂದು ನೂರು ಆನೆಗಳು,
ಸಾವಿರಾರು ಪದಾತಿಗಳು ಪಯಣಕ್ಕೆ ಸಿದ್ಧರಾಗಿ ನಿಂತರು. ಸೇನೆಯನ್ನು
ಮುಂದಿರಿಸಿಕೊಂಡು ವಿಪ್ರಪರಿವೃತನಾದ ಶತ್ರುಘ್ನನು ದೈತ್ಯ ಸಂಹಾರಕ್ಕಾಗಿ
 
ತೆರಳಿದನು.
 
ಕತ್ತಲಾಗುವಾಗ ಸೇನೆ ವಾಲ್ಮೀಕಿ ಮುನಿಗಳ ಆಶ್ರಮದ ಬಳಿ ಬಂದಿತ್ತು.
ರಾತ್ರಿ ಅಲ್ಲಿ ತಂಗುವುದೆಂದು ನಿರ್ಣಯವಾಯಿತು. ವಾಲ್ಮೀಕಿ ಮುನಿಗಳು
ಕಾಲಿಗೆರಗಿದ ರಾಮಸೋದರನನ್ನು, ಆತನ ಪರಿವಾರವನ್ನು ಆದರದಿಂದ ಸತ್ಯ
 
ರಿಸಿದರು.
 
ಶಂಬೂಕನಿಂದ ಮಗು ಸತ್ತಿತು
 
ಬೆಳಕು ಹರಿಯಿತು. ಶತ್ರುಘ್ನನು ಮುನಿಗಳಿಂದ ಬೀಳ್ಕೊಂಡು ಉತ್ತರಾ
ಮುಖವಾಗಿ ಹೊರಟನು. ಅಂದೂ ಸಂಜೆಯ ವರೆಗೆ ಪಯಣ ನಡೆಯಿತು.
ಸಂಜೆಯ ಹೊತ್ತು ಸೇನೆ ಯಮುನೆಯ ದಡಕ್ಕೆ ಬಂದಿತ್ತು. ಅಂದು ರಾತ್ರಿ