This page has been fully proofread once and needs a second look.

ಸಂಗ್ರಹರಾಮಾಯಣ
 
ರಾಜನು ಧರ್ಮ-ಕಾಮಗಳಿಂದ ವಿರಹಿತನಾಗುತ್ತಾನೆ. ಅಜಾಗರೂಕತೆಯಿಂದ
ನಡೆದುಕೊಂಡ ಅನೇಕ ರಾಜರು ವಿಪ್ರ- ಶಾಪಕ್ಕೆ ಬಲಿಯಾದುದನ್ನು ಇತಿಹಾಸದಲ್ಲಿ
ಕಾಣುತ್ತೇವೆ.
 
೨೩೭
 

 
ನಮ್ಮ ಮೇಲಂತೂ ಈ ಹೊಣೆಗಾರಿಕೆ ವಿಶೇಷವಾಗಿದೆ. ನಾವು

ಏನನ್ನು ಹೇಗೆ ಮಾಡಿದರೆ ಜನ ಅದನ್ನು ಹಾಗೆ ಅನುಸರಿಸುತ್ತದೆ. ನಾವು
ರಾಜಧರ್ಮದಲ್ಲಿ ಅಸಡ್ಡೆ ತೋರಿದರೆ ಪರಂಪರೆಯೇ ಅದರಿಂದ ಕೆಟ್ಟು ಹೋಗು
ತ್ತದೆ. "
 

 
ರಾಮನ ನಿರ್ದೇಶದಂತೆ ಲಕ್ಷ್ಮಣನು ಪ್ರಜಾರಕ್ಷಣೆಯಲ್ಲಿ ಬಹು ಜಾಗರೂಕ
ನಾಗಿದ್ದನು. ಯಾವೊಬ್ಬ ಪ್ರಜೆಯ ಬೇಡಿಕೆಯೂ ವಿಫಲವಾಗಲಿಲ್ಲ.
 

 
ಒಮ್ಮೆ ಚ್ಯವನ ಮುನಿಗಳ ಮುಂದಾಳುತನದಲ್ಲಿ ತಪಸ್ವಿಗಳ ಗುಂಪೊಂದು
ರಾಮನನ್ನು ಕಾಣಬಂತು. ರಾಮಚಂದ್ರನು ಅವರೆಲ್ಲನ್ನು ಬಂಗಾರದ ಪೀಠದಲ್ಲಿ
ಕುಳ್ಳಿರಿಸಿ ಸತ್ಕರಿಸಿ ,
" ಬಂದಕಾರ್ಯವೇನು ? " ಎಂದು ಕೇಳಿದನು.
 

 
ಮುನಿಗಳು ತಮ್ಮ ಕೊರಗನ್ನು ತೋಡಿಕೊಂಡರು:
 
*

 
"
ಸ್ವಾಮಿನ್, ನಿನಗೆ ತಿಳಿಯದೆಂಥದು ? ಆದರೂ ನಿನ್ನ ಆಣತಿ- ಯಂತೆ
ನಮ್ಮದೊಂದು ವಿಜ್ಞಾಪನೆ. ಮಧುವನ ಎಂಬಲ್ಲಿ ಮಧು ಎಂಬ ಅಸುರನ ಮಗ
ಲವಣ ನೆಲಸಿದ್ದಾನೆ. ನಿರುಪದ್ರವಿಯಾದ ಮುನಿಸಂತತಿಯೇ ಅವನಿಗೆ ಆಹಾರ !
ತಪಸ್ಸಿನಿಂದ ರುದ್ರನನ್ನು ಒಲಿಸಿ ಶೂಲವನ್ನು ಬೇರೆ ಪಡೆದಿದ್ದಾನೆ. ಅದರಿಂದ
ದೇವತೆಗಳೂ ಅವನಿಗೆ ಹೆದರುವಂತಾಗಿದೆ. ಕಾಡಿನಲ್ಲಿರುವ ತಸಿಗಳನ್ನು

ಅವನ ಬಾಯಿಂದ ತಪ್ಪಿಸಿ ಕಾಪಾಡುವವರಿಲ್ಲವಾಗಿದೆ. ಅದರಿಂದ ರಾವಣನನ್ನು
ಕೊಂದ ಮಹಾವೀರನಾದ ನಿನ್ನ ಬಳಿ ಶರಣು ಬಂದಿದ್ದೇವೆ. ಕಾಪಾಡಬೇಕು.
ಭಗವನ್."
 

 
ರಾಮಚಂದ್ರನು ಮುಗುಳುನಗುತ್ತ ತಮ್ಮಂದಿರೆಡೆಗೆ ನೋಡಿ ನುಡಿದನು:
*

 
"
ಇದು ಯಾರ ಸರದಿ ? ಯಾರು ಈ ಕಾವ್ರ್ಯವನ್ನು ವಹಿಸಿ-ಕೊಳ್ಳುವಿರಿ?
"
 
ಲಕ್ಷ್ಮಣನು ಕೈ ಜೋಡಿಸಿ " ನನಗೆ ಅಪ್ಪಣೆಯಾಗಬೇಕು. " ಎಂದನು.
ಭರತನು ಇದು ತನ್ನ ಸರದಿ ಎಂದನು. ಆಗ ಶತ್ರುಘ್ನನು ಎದ್ದು ನಿಂತು
 
ವಿನಂತಿಸಿಕೊಂಡನು:
 
""