This page has not been fully proofread.

ಸಂಗ್ರಹರಾಮಾಯಣ
 
ರಾಜನು ಧರ್ಮ-ಕಾಮಗಳಿಂದ ವಿರಹಿತನಾಗುತ್ತಾನೆ. ಅಜಾಗರೂಕತೆಯಿಂದ
ನಡೆದುಕೊಂಡ ಅನೇಕ ರಾಜರು ವಿಪ್ರಶಾಪಕ್ಕೆ ಬಲಿಯಾದುದನ್ನು ಇತಿಹಾಸದಲ್ಲಿ
ಕಾಣುತ್ತೇವೆ.
 
೨೩೭
 
ನಮ್ಮ ಮೇಲಂತೂ ಈ ಹೊಣೆಗಾರಿಕೆ ವಿಶೇಷವಾಗಿದೆ. ನಾವು
ಏನನ್ನು ಹೇಗೆ ಮಾಡಿದರೆ ಜನ ಅದನ್ನು ಹಾಗೆ ಅನುಸರಿಸುತ್ತದೆ. ನಾವು
ರಾಜಧರ್ಮದಲ್ಲಿ ಅಸಡ್ಡೆ ತೋರಿದರೆ ಪರಂಪರೆಯೇ ಅದರಿಂದ ಕೆಟ್ಟು ಹೋಗು
ಇದೆ. "
 
ರಾಮನ ನಿದೇಶದಂತೆ ಲಕ್ಷ್ಮಣನು ಪ್ರಜಾರಕ್ಷಣೆಯಲ್ಲಿ ಬಹು ಜಾಗರೂಕ
ನಾಗಿದ್ದನು. ಯಾವೊಬ್ಬ ಪ್ರಜೆಯ ಬೇಡಿಕೆಯೂ ವಿಫಲವಾಗಲಿಲ್ಲ.
 
ಒಮ್ಮೆ ಚ್ಯವನ ಮುನಿಗಳ ಮುಂದಾಳುತನದಲ್ಲಿ ತಪಸ್ವಿಗಳ ಗುಂಪೊಂದು
ರಾಮನನ್ನು ಕಾಣಬಂತು. ರಾಮಚಂದ್ರನು ಅವರೆಲ್ಲನ್ನು ಬಂಗಾರದ ಪೀಠದಲ್ಲಿ
ಕುಳ್ಳಿರಿಸಿ ಸತ್ಕರಿಸಿ " ಬಂದಕಾರವೇನು ? " ಎಂದು ಕೇಳಿದನು.
 
ಮುನಿಗಳು ತಮ್ಮ ಕೊರಗನ್ನು ತೋಡಿಕೊಂಡರು:
 
* ಸ್ವಾಮಿನ್, ನಿನಗೆ ತಿಳಿಯದೆಂಥದು ? ಆದರೂ ನಿನ್ನ ಆಣತಿಯಂತೆ
ನಮ್ಮದೊಂದು ವಿಜ್ಞಾಪನೆ. ಮಧುವನ ಎಂಬಲ್ಲಿ ಮಧು ಎಂಬ ಅಸುರನ ಮಗ
ಲವಣ ನೆಲಸಿದ್ದಾನೆ. ನಿರುಪದ್ರವಿಯಾದ ಮುನಿಸಂತತಿಯೇ ಅವನಿಗೆ ಆಹಾರ !
ತಪಸ್ಸಿನಿಂದ ರುದ್ರನನ್ನು ಒಲಿಸಿ ಶೂಲವನ್ನು ಬೇರೆ ಪಡೆದಿದ್ದಾನೆ. ಅದರಿಂದ
ದೇವತೆಗಳೂ ಅವನಿಗೆ ಹೆದರುವಂತಾಗಿದೆ. ಕಾಡಿನಲ್ಲಿರುವ ತನಸಿಗಳನ್ನು
ಅವನ ಬಾಯಿಂದ ತಪ್ಪಿಸಿ ಕಾಪಾಡುವವರಿಲ್ಲವಾಗಿದೆ. ಅದರಿಂದ ರಾವಣನನ್ನು
ಕೊಂದ ಮಹಾವೀರನಾದ ನಿನ್ನ ಬಳಿ ಶರಣುಬಂದಿದ್ದೇವೆ. ಕಾಪಾಡಬೇಕು.
ಭಗವನ್."
 
ರಾಮಚಂದ್ರನು ಮುಗುಳುನಗುತ್ತ ತಮ್ಮಂದಿರೆಡೆಗೆ ನೋಡಿ ನುಡಿದನು:
* ಇದು ಯಾರ ಸರದಿ ? ಯಾರು ಈ ಕಾವ್ಯವನ್ನು ವಹಿಸಿಕೊಳ್ಳುವಿರಿ?
ಲಕ್ಷ್ಮಣನು ಕೈ ಜೋಡಿಸಿ " ನನಗೆ ಅಪ್ಪಣೆಯಾಗಬೇಕು. " ಎಂದನು.
ಭರತನು ಇದು ತನ್ನ ಸರದಿ ಎಂದನು. ಆಗ ಶತ್ರುಘ್ನನು ಎದ್ದು ನಿಂತು
 
ವಿನಂತಿಸಿಕೊಂಡನು:
 
""