This page has not been fully proofread.

ಮಿಂಚಿನಬಳ್ಳಿ
 
ಇವನು ಅಪೇಕ್ಷಿಸುತ್ತಾನೆ. ಓ ಅಮೃತವನ್ನುಣ್ಣುವವರೆ, ದೇವಕಾರ್ಯದ
ಸಿದ್ಧಿಗಾಗಿಯಾದರೂ ನೀವಿದನ್ನು ಅನುಮೋದಿಸಬೇಕು."
 
ಋಷಿಯಿಂದ ಪ್ರಾರ್ಥಿತರಾದ ದೇವತೆಗಳು ಹಾಗೇ ಆಗಲೆಂದು ವರವಿತ್ತು
ಬ್ರಹ್ಮಲೋಕಕ್ಕೆ ತೆರಳಿದರು. ಅಲ್ಲಿ ಬ್ರಹ್ಮನನ್ನು ವಂದಿಸಿ ಹೀಗೆ ಬೇಡಿಕೊಂಡರು:
 
"ಓ ದೇವತೆಗಳರಸನೆ, ಅನಾಥರಾದ ಪ್ರಜೆಗಳನ್ನು ಪಾಲಿಸು. ಅವರು
ರಾಕ್ಷಸರಿಂದ ಪೀಡಿತರಾಗಿದ್ದಾರೆ. ವಿಶ್ರವಸನ ಮಕ್ಕಳಾದ ರಾವಣ-ಕುಂಭ-
ಕರ್ಣರು ನಿನ್ನ ವರದಿಂದಲೆ ಸಾವಿಲ್ಲದವರಾಗಿದ್ದಾರೆ. ಲೋಕಪೀಡಕನಾದ
ರಾವಣನ ಸಾಮ್ರಾಜ್ಯ ದಿಸೆದಿಸೆಗಳಲ್ಲಿ ಹಬ್ಬಿದೆ. ಸಿಂಹವು ಕಾಡಿನಲ್ಲಿರುವ
ಕುದ್ರ ಮೃಗಗಳನ್ನು ಮರ್ದಿಸುವಂತೆ ಅವನು ಜಗತ್ತನ್ನು ಮರ್ದಿಸುತ್ತಿದ್ದಾನೆ.
ಜಗತ್ತಿನ ಯಾವುದೇ ಒಂದೆಡೆಯಲ್ಲಿ ಸುಂದರ ವಸ್ತುವೊಂದಿದ್ದರೆ ಅದನ್ನು ಲಂಕೆ
ಯಲ್ಲಿ ತಂದಿರಿಸಿಕೊಂಡಿದ್ದಾನೆ. ರತ್ನವನ್ನು ಅಪಹರಿಸುವುದರಲ್ಲಿ ಅವನ
ಜಾಣತನ ಹೇಳತೀರದು. ಕುಲಸ್ತ್ರೀಯರ ದೂಷಣೆ ತನಗೊಂದು ಭೂಷಣ
ವೆಂಬಂತೆ ನಡೆದುಕೊಳ್ಳುತ್ತಿದ್ದಾನೆ. ಆತನ ಸಾಮ್ರಾಜ್ಯದಲ್ಲಿ ತಪಸ್ಸಿಗೆಡೆಯಿಲ್ಲ.
ಸ್ವಾಧ್ಯಾಯಕ್ಕೆ ತಾಣವಿಲ್ಲ. ವಿಪ್ರರಿಗೆ ಇರವಿಲ್ಲ. ಧರ್ಮವನ್ನು ಕೇಳುವವರಿಲ್ಲ.
ಅಧರ್ಮ ಗರಿಗೆದರಿ ನಿಂತಿದೆ. ಎಲ್ಲ ದಿಕ್ಷಾಲ- ಆನೆಯನ್ನು ಕಂಡೋಡಾಡುವ
ಜಂತುವಿನಂತೆ ಅವನೆದುರು ಹೇಡಿಗಳಾಗಬೇಕಾಗಿದೆ. ಇವನನ್ನು ಕೊಲ್ಲುವ
ಉಪಾಯವನ್ನು ಹುಡುಕದಿದ್ದರೆ, ಕಾಲರುದ್ರನಿಲ್ಲದೆಯೇ ಜಗತ್ತು ಪ್ರಳಯದ
ಮುಖವನ್ನು ಕಂಡೀತು !
 
C
 
ದೇವತೆಗಳ ಮಾತನ್ನಾಲಿಸಿದ ಬ್ರಹ್ಮನು ಅವರನ್ನು ಸಮಾಧಾನಗೊಳಿ
ಸಿದನು. ನಾವೆಲ್ಲರೂ ಯಾರಿಂದ ಉಸಿರೆಳೆಯುತ್ತಿರುವೆವೋ ಯಾವನು
ನಮ್ಮೆಲ್ಲರ ಯೋಗಕ್ಷೇಮದ ಹೊರೆಯನ್ನು ಹೊತ್ತಿರುವನೋ ಆ ಕರುಣಾಳು
ಶ್ರೀಹರಿ ನಮಗೆಲ್ಲರಿಗೂ ಮಂಗಳವನ್ನು ಮಾಡುವನು. ಹೀಗೆ ನುಡಿದು
ದೇವತೆಗಳೊಡನೆ ಕ್ಷೀರಸಮುದ್ರಕ್ಕೆ ತೆರಳಿದನು.
 
ತೆರೆಗಳಿಂದ ಕುಪ್ಪಳಿಸುತ್ತಿರುವ ಕಡಲಿನ ದಡದಲ್ಲಿ ನಿಂತು ದೇವತೆಗಳೆಲ್ಲ
ಒಕ್ಕೊರಲಿನಿಂದ ಶ್ರೀಹರಿಯನ್ನು ತುತಿಸಿದರು:
 
"ಓ ಶೇಷನಲ್ಲಿ ಪವಡಿಸಿದವನೆ, ಆದಿ, ಅಂತಗಳಿಲ್ಲದ ಲೀಲಾಲೋಲನಾದ
ನಾರಾಯಣನೆ, ನಿನಗೆ ವಂದನೆ. ಜಗತ್ತಿನ ಸೃಷ್ಟಾದಿಗಳೆಲ್ಲ ನಿನ್ನೊಬ್ಬ