This page has been fully proofread once and needs a second look.

ಮಿಂಚಿನಬಳ್ಳಿ
 
ಯಾವ ಹೆಂಗಸಿಗೂ ಬರಲಿಲ್ಲ. ಒಟ್ಟಿನಲ್ಲಿ ಪರಮಮಂಗಲನಾದ ರಾಮಚಂದ್ರನ
ರಾಜ್ಯದಲ್ಲಿ ಯಾವ ಅಮಂಗಲವೂ ಕಾಲಿಡಲಿಲ್ಲ.
 

 
ಎಲ್ಲರೂ ಪೂರ್ಣರು. ಎಲ್ಲರೂ ಸುಖಿಗಳು. ಎಲ್ಲರೂ ತೃಪ್ತರು. ಅಲ್ಲಿ
ಯಾವುದೂ ದುರ್ಲಭವಾದುದಿಲ್ಲ. ಯಾರು ಏನು ಬಯಸಿ ದರೆ ಅದು ಅಲ್ಲಿ
ದೊರೆಯುತ್ತಿತ್ತು. ವೈಕುಂಠವೇನು ಹೆಚ್ಚು, ರಾಮರಾಜ್ಯವೇನು ಕಡಿಮೆ
ಎಂದು ಜನರು ಆಡಿಕೊಂಡರು.
 

 
ರಾಮಚಂದ್ರನೂ ಸೀತೆಯೊಡನೆ ಅರಳುಗಳಿಂದ ತುಂಬಿದ ಅರಮನೆಯ
ಉದ್ಯಾನದಲ್ಲಿ ವಿಹರಿಸಿದನು.
ಮಿಂಚಿನಂತೆ ಮಿನುಗುವ ಸಂಪಿಗೆಗಳಿಂದ,
ಮೆಲುಗಾಳಿಗೆ ನಲುಗುವ ಮೊಲ್ಲೆ ಇರುವಂತಿಕೆಗಳಿಂದ, ಝೇಂಕಾರದ ಓಂಕಾರ
ವನ್ನು ಹಾಡುವ ಪರಮೆಗಳಿಂದ ವಸಂತನು ರಾಮನನ್ನು ಸಂತಸಗೊಳಿಸಿದನು.

ಎಲ್ಲ ಋತುಗಳೂ ತಮ್ಮ ಪಾಲಿನ ಸೇವೆಯನ್ನು ನಿರ್ವಹಿಸಿದವು. ರಾಮ-
ಚಂದ್ರನ ಆರಣೆವೆಯಲ್ಲಿ ಆರು ಋತುಗಳೂ ಏಕಕಾಲದಲ್ಲಿ ಹೂವುಗಳನ್ನರಳಿಸು-
ತ್ತಿದ್ದವು.
 
ಗಂಧರ್ವ ಚಾರಣರು ಅಪ್ಸರೆಯರೊಡನೆ ಬಂದು ಗುಣಗಾನ ಮಾಡು
ತಿದ್ದರು. ದೇವತೆಗಳು, ಋಷಿಗಳು ಬಂದು ವೇದವೇದಾಂಗ ಗಳಿಂದ ನುತಿಸು
ತಿದ್ದರು. ಹೀಗೆ ರಾಮಚಂದ್ರನ ರಾಜ್ಯಭಾರ ಹದಿಮೂರು ಸಾವಿರ ವರುಷಗಳ
ತನಕ ನಡೆಯಿತು.
 

 
ರಾಮಚಂದ್ರನ ಕುಲದ ಕೀರ್ತಿಯನ್ನು ಬೆಳಸುವ ಕುಲಾಂಕುರವನ್ನು
ವನ್ನು ನೀಡುವುದಕ್ಕಾಗಿ ಸೀತೆ ಬಸಿಸುರಿಯಾದಳು. ಇಂದುದ್ರ-ಅಗ್ನಿ ಗಳು ಕುಶ-ಲವ
ನಾಮಧೇಯರಾಗಿ ಸೀತಾಮಾತೆಯ ಗರ್ಭದಿಂದ ಜನಿಸಿದರು. ರಾಮಚಂದ್ರನ
ಚರಿತೆಯನ್ನು ಮುನಿಗಳ ಮುಂದೆ ಮೊಟ್ಟಮೊದಲು ಹಾಡಿದ ಕವಿಗಾಯಕರು
ಈ ಮಕ್ಕಳು.
 

 
ಇದು ಯಾರ ಸರದಿ ?
 

 
ಒಂದು ದಿನ ರಾಮ-ಲಕ್ಷ್ಮಣರು ಮಾತುಕತೆ ನಡೆಸುತ್ತಿದ್ದರು. ಪ್ರಸಂಗ-
ವಶಾತ್ ರಾಮಚಂದ್ರನು ರಾಜನೀತಿಯನ್ನು ಲಕ್ಷ್ಮಣನಿಗೆ ಉಪದೇಶಿಸಿದನು:
 

 
"ಲಕ್ಷಣ, ನಮ್ಮ ರಾಷ್ಟ್ರದ ಪ್ರಜೆಗಳ ಬಯಕೆ ಏನು? ಎಂಥದು? ಎನ್ನುವು
ದನ್ನು ಜಾಗ್ರತೆಯಿಂದ ವಿಚಾರಿಸುತ್ತಿರು. ಪ್ರಜೆಗಳ ಹಿತದಕಡೆಗೆ ಗಮನವಿರದ